ಮನುಷ್ಯನ ಬದುಕು ಇನ್ನು ಇನ್ನೂರು ಕೋಟಿ ವರ್ಷವಷ್ಟೇ!
ಲಂಡನ್,
ಜುಲೈ 3: ನರ ಮಾನವ ಈ ಭೂಮಿ ಮೇಲೆ ಬದುಕಿರೋದು ಇನ್ನು ಇನ್ನೂರು ಕೋಟಿ ವರ್ಷವಷ್ಟೇ! ಅಂದರೆ 2 ಶತಕೋಟಿ ವರ್ಷಗಳ ಬಳಿಕ ವಿಶ್ವವೇ ಅಂತ್ಯವಾಗಲಿದೆ. ಅಯ್ಯೋ ಬಿಡ್ರೀ ನಾಳೆ ಏನಾಗುತ್ತೋ ಯಾವೋನಿಗ್ಗೊತ್ತು? ಅಂಥಾದ್ದರಲ್ಲಿ ಇನ್ನೂರು ಕೋಟಿ ವರ್ಷದ ನಂತರ ಏನಾಗುತ್ತದೋ ಎಂದು ನಾನ್ಯಾಕೆ ತಲೆಕೆಡಿಸಿಕೊಳ್ಳಲಿ ಅಂತೀರೇನೋ ಆದರೂ ಸುದ್ದಿ ಇಂಟರೆಸ್ಟಿಂಗ್ ಆಗಿದೆ, ಓದಿಕೊಳ್ಳಿ. id="toptextpromo"> id='are-slot-1' class='oiad oi-axt oiadv'>ದೂರಾತಿದೂರದ
ಇನ್ನು 200 ಕೋಟಿ ವರ್ಷಗಳಲ್ಲಿ ಭೂಮಿ ಸರ್ವನಾಶವಾಗಲಿದೆ ಎಂದು ಹೊಸ ಅಧ್ಯಯನವೊಂದು ಹೇಳಿದೆ. ಲಂಡನ್‌ನ ಸೈಂಟ್ ಆ್ಯಂಡ್ರೂಸ್ ವಿಶ್ವವಿದ್ಯಾಲಯದ ವಿಜ್ಞಾನಿ ಜ್ಯಾಕ್ ಒ'ಮ್ಯಾಲಿ ಜೇಮ್ಸ್ ಅವರ ಅಧ್ಯಯನ ಸಾರಾಂಶವಿದು. ವಿಶ್ವದಲ್ಲಿನ ಸಕಲ ಜೀವರಾಶಿಗಳು 2 ಶತಕೋಟಿ ವರ್ಷಗಳೊಳಗೆ ಅಳಿಸಿಹೋಗಲಿವೆ.
id='are-slot-2' class='oiad oi-axt oiadv'>

carbon dioxide ಕ್ಷೀಣ:
ವಾತಾವರಣದಲ್ಲಿನ ಇಂಗಾಲದ ಡೈಆಕ್ಸೈಡ್ ಪ್ರಮಾಣ (carbon dioxide) ಅತ್ಯಂತ ಕಡಿಮೆಯಾಗುವುದರಿಂದ ವಿಶ್ವ ಕೊನೆಗೊಳ್ಳುವುದೇ ಹೊರತು, ಅನಿಲಗಳ ಏರಿಕೆಯಿಂದಲ್ಲ ಎಂಬುದು ಅಧ್ಯಯನದ ಗಮನಾರ್ಹ ಅಂಶ.

ಬರುಬರುತ್ತಾ ಬದುಕು ಬಲು ದುಸ್ತರ:
ಈ ಬದಲಾವಣೆಗಳ ಹಿಂದಿನ ಸೂತ್ರಧಾರಿ ಸೂರ್ಯ. ಮುಂದಿನ ಹಲವು ನೂರು ಕೋಟಿ ವರ್ಷಗಳಲ್ಲಿ ವಯಸ್ಸಾದಂತೆ ಸೂರ್ಯ ಸ್ಥಿರವಾಗಿ ನಿಲ್ಲುತ್ತಾನೆ. ಆದರೆ, ಸೂರ್ಯ ಹೆಚ್ಚಿನ ಶಾಖವನ್ನು ಹರಡುತ್ತಾನೆ. ಭೂಮಿಯ ಮೇಲೆ ಸೂರ್ಯನ ಶಾಖದ ಪ್ರಭಾವ ಎಷ್ಟಿರುತ್ತದೆಯೆಂದರೆ ಎಲ್ಲ ಸಮುದ್ರಗಳು ಆವಿಯಾಗುತ್ತವೆ. ಅಂತಹುದರಲ್ಲಿ ಮನುಷ್ಯನ ವಾಸ ಹೇಗಿರುತ್ತದೆ ಎಂಬುದನ್ನು ನೀವೇ ಊಹಿಸಿಕೊಳ್ಳಿ.

ಪಾತಾಳದಲ್ಲಿನ ಸೂಕ್ಷ್ಮಾಣು ಜೀವಿ ಮಾತ್ರ ಬದುಕುತ್ತವಂತೆ!
ಅಂದಹಾಗೆ ಎಲ್ಲೋ ಪಾತಾಳದ ನೀರಿನಲ್ಲಿ ಸೂಕ್ಷ್ಮಾಣು ಜೀವಿಗಳು ಮಾತ್ರ ಬದುಕುಳಿಯುತ್ತವಂತೆ! ಇಂತಹ ಅಧ್ಯಯನ ವಿಚಾರಗಳುಳ್ಳ ವರದಿಯನ್ನು ಸ್ಕಾಟ್ ಲ್ಯಾಂಡಿನ ಸೇಂಟ್ ಆ್ಯಂಡ್ರೂಸ್‌ನಲ್ಲಿ ನಡೆಯಲಿರುವ ರಾಷ್ಟ್ರೀಯ ಖಗೋಳ ಸಮ್ಮೇಳನದಲ್ಲಿ ವಿಜ್ಞಾನಿ ಜ್ಯಾಕ್ ಒ'ಮ್ಯಾಲಿ ತಮ್ಮ ಈ ಸಂಶೋಧನೆಯನ್ನು ಮಂಡಿಸಲಿದ್ದಾರೆ ಎಂದು ರಾಯಲ್ ಆಸ್ಟ್ರೊನಮಿಕಲ್ ಸೊಸೈಟ್ ತಿಳಿಸಿದೆ.

ದೈತ್ಯ ಡೈನೊಸಾರ್ ಪ್ರಾಣಿಗಳೇ ನಾಶವಾದವು
ಎಲ್ಲ ಜೀವಗಳಿಗೂ ನಿರ್ದಿಷ್ಟ್ಟ ಜೀವಿತಾವಧಿ ಇರುತ್ತದೆ. ಜೀವರಾಶಿ ಈ ಭೂಮಿಯಿಂದ ನಶಿಸಿಹೋಗುವುದೆಂದರೆ ಅದು ಒಮ್ಮೆಲೆ ವಿಕೋಪದ ರೂಪದಲ್ಲಿ ಸಂಭವಿಸಬಹುದು. ಉದಾಹರಣೆಗೆ ಡೈನೊಸಾರ್ ಗಳಂತಹ ದೈತ್ಯ ಪ್ರಾಣಿಗಳ ನಾಶಕ್ಕೆ ಕಾರಣವಾದ ಖಗೋಳ ಕಾಯಗಳ ಢಿಕ್ಕಿಯಂಥದ್ದೋ ಅಥವಾ ಹಂತ ಹಂತವಾಗಿ ನಿಧಾನವಾಗಿಯೂ ಈ ಅಂತ್ಯ ಸಂಭವಿಸಬಹುದು.

ಆಗ ಶುರುವಾಗುತ್ತದೆ ಜೀವಚರಗಳ ನಾಶ!
nitrogen ಮತ್ತು carbon-dioxide ಜತೆಗೆ methane ಮಾತ್ರವೇ ವಾತಾವರಣದಲ್ಲಿ ಉಳಿದಿರುತ್ತದೆ. ಆಮ್ಲಜನಕದ ಮಾತೇ ಇರುವುದಿಲ್ಲ. ಆಗ ಶುರುವಾಗುತ್ತದೆ ಜೀವಚರಗಳ ನಾಶ!












Click it and Unblock the Notifications