ನಮ್ಮ ಮೆಟ್ರೋ 3ನೇ ಹಂತದ ಯೋಜನೆ ಸಿದ್ಧ!

metro
ಬೆಂಗಳೂರು, ಜು.1 : ಮಹಾನಗರ ಬೆಂಗಳೂರಿನ ಜನರಿಗೆ ಇದು ಸಂತೋಷ ಕೊಡುವ ಸುದ್ದಿ. ಬೆಂಗಳೂರಿನಲ್ಲಿ ಮಟ್ರೋ ಮೂರನೇ ಹಂತದ ಯೋಜನೆ ಪ್ರಾರಂಭಿಸಿ, ನಗರದ ತುಂಬಾ ಮೆಟ್ರೋ ರೈಲು ಯೋಜನೆಯನ್ನು ವಿಸ್ತರಿಸಲು ಬಿಎಂಆರ್ ಸಿಎಲ್ ಚಿಂತನೆ ನಡೆಸಿದೆ.

ನಮ್ಮ ಮೆಟ್ರೋ ಯೋಜನೆಯ ಎರಡನೇ ಹಂತದ ಯೋಜನೆಗೆ ಕೇಂದ್ರ ಸರ್ಕಾರದ ಸಾರ್ವಜನಿಕ ಹೂಡಿಕೆ ಮಂಡಳಿ ಈಗಾಗಲೇ ಹಸಿರು ನಿಶಾನೆ ತೋರಿದೆ. ಇದರಿಂದಾಗಿ 2ಎ ಮತ್ತು 3ನೇ ಹಂತದ ಯೋಜನೆ ಪ್ರಾರಂಭಿಸಲು ಬಿಎಂಆರ್ ಸಿಎಲ್ ಮುಂದಾಗಿದೆ.

2 ಎ ಮತ್ತು 3ನೇ ಹಂತದ ಯೋಜನೆಗಳನ್ನು ಕೈಗೊಳ್ಳಬಹುದಾದ ಮಾರ್ಗಗಳನ್ನು ಗುರುತಿಸಿರುವ ನಿಗಮ, ಕೇಂದ್ರ ಸರ್ಕಾರದ ರೈಟ್ಸ್ ಸಂಸ್ಥೆ ಮೂಲಕ ವಿವರವಾದ ಯೋಜನಾ ವರದಿ ತಯಾರಿಸಿ ಕೊಡುವಂತೆ ಮನವಿ ಮಾಡಲು ಸಿದ್ಧತೆ ನಡೆಸಿದೆ.(ನಮ್ಮ ಮೆಟ್ರೋ ಎರಡನೇ ಹಂತಕ್ಕೆ ಒಪ್ಪಿಗೆ ಸಿಕ್ತು)

ಬೆಂಗಳೂರು ಸುತ್ತುವರೆದಿರುವ ರಿಂಗ್ ರಸ್ತೆಗಳಿಗೆ, ನಗರದ ಒಳಭಾಗದಿಂದ ಸಂಪರ್ಕ ಕಲ್ಪಿಸುವುದು ಮೆಟ್ರೋ ಮೂರನೇ ಹಂತದ ಯೋಜನೆಯ ಪ್ರಮುಖ ಉದ್ದೇಶವಾಗಿದೆ. ಈಗಾಗಲೇ ಈ ಕುರಿತು ಸಂಭಾವ್ಯ ಮಾರ್ಗಗಳನ್ನು ಗುರುತಿಸಲಾಗಿದೆ.

ಎಷ್ಟು ಕೆಲಸವಾಗಿದೆ : ಮೊದಲ ಹಂತದ ನಮ್ಮ ಮೆಟ್ರೋ ಯೋಜನೆಯ 42.30 ಕಿ.ಮೀ ಉದ್ದದ ಕಾಮಗಾರಿಗಳು ಶೇ 70ರಷ್ಟು ಪೂರ್ಣಗೊಂಡಿವೆ. 2ನೇ ಹಂತದ ಯೋಜನೆಗೆ ಭೂ ಸ್ವಾಧೀನ, ಮಣ್ಣು ಪರೀಕ್ಷೆ ಮತ್ತಿತರ ಕಾರ್ಯಗಳು ಪ್ರಾರಂಭಗೊಂಡಿವೆ.

ಆದ್ದರಿಂದ ಬಿಎಂಆರ್ ಸಿಎಲ್ ಮೂರನೇ ಹಂತದ ಯೋಜನೆ ಪ್ರಾರಂಭಿಸಿ ನಗರದಲ್ಲಿ ಒಟ್ಟು 265 ಕಿ.ಮೀ.ಗಳಷ್ಟು ಮೆಟ್ರೋ ಜಾಲ ಅಸ್ತಿತ್ವಕ್ಕೆ ತರಲು ಯೋಜನೆ ರೂಪಿಸುತ್ತಿದೆ. ಬೆಂಗಳೂರು ಮಹಾನಗರದ ಭವಿಷ್ಯದ ದಿನಗಳಿಗೆ ಮಟ್ರೋ ಅತ್ಯಗತ್ಯವಾಗಿದೆ ಎಂದು ನಿಗಮ ಪ್ರತಿಪಾದಿಸಿದೆ.

ಮೂರನೇ ಹಂತ ಎಲ್ಲಿ : ನಮ್ಮ ಮೆಟ್ರೋ ಮೂರನೇ ಹಂತದ ಯೋಜನೆಯ ಕೆಲವು ಮಾರ್ಗಗಳನ್ನು ಮೆಟ್ರೋ ನಿಗಮ ಈಗಾಗಲೇ ಗುರುತಿಸಿದೆ. ನಗರದ ವಿವಿಧ ಭಾಗಗಳಲ್ಲಿ ಈ ಮಾರ್ಗ ಹಾದು ಹೋಗಲಿದೆ. ಸದ್ಯದ ಯೋಜನೆ ಪ್ರಕಾರ 3ನೇ ಹಂತದ ಮಾರ್ಗಗಳು ಹೀಗಿವೆ.

ಮೂರನೇ ಹಂತದ ಮೊದಲ ಮಾರ್ಗ, ಹೊರವರ್ತುಲ ರಸ್ತೆ (ಹೆಬ್ಬಾಳ - ಬನ್ನೇರುಘಟ್ಟ ರಸ್ತೆ - ಸಿಲ್ಕ ಬೋರ್ಡ್ ಜಂಕ್ಷನ್ - ಹೆಬ್ಬಾಳ ) ಒಟ್ಟು ಉದ್ದ 64.37 ಕಿ.ಮೀಗಳು.

ಎರಡನೇ ಮಾರ್ಗ ಹೊಸಕೆರೆ ಹಳ್ಳಿಯಿಂದ - ಹೊರ ವರ್ತುಲ ರಸ್ತೆ. ಈ ಮಾರ್ಗದ ಉದ್ದ ಒಟ್ಟು 21.31ಕಿ.ಮೀ.ಗಳು. ಫೆರಿಫೆರಲ್ ರಸ್ತೆಯಿಂದ ಮಾಗಡಿ ರಸ್ತೆ ಟೋಲ್ ಗೇಟ್ ವರೆಗೆ 8.89 ಕಿ.ಮೀ ವ್ಯಾಪ್ತಿಯ ಪ್ರದೇಶಗಳು ಮೂರನೇ ಹಂತದ ಮಾರ್ಗಸೂಚಿಯಲ್ಲಿ ಸೇರಿವೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+