ರಸೆಲ್ ಮಾರ್ಕೆಟ್ ಹಿತ್ತಲಿನಲ್ಲಿದೆ ಮತ್ಸ್ಯಲೋಕ!

ರಸೆಲ್ ಮಾರ್ಕೆಟ್ಟಿನ ಹಿತ್ತಲಲ್ಲಿದೆ ಮತ್ಸ್ಯಲೋಕ! ಜೀವಂತ ಫಿಶ್ ನೋಡಲು ಇಲ್ಲಿ ಕ್ಲಿಕ್ಕಿಸಿ. ಅದಕ್ಕೂ ಮುನ್ನ ರಸೆಲ್ ಮಾರ್ಕೆಟ್ ಮೀನುಲೋಕದ ಉಸ್ತುವಾರಿ ಹೊತ್ತಿರುವ ಮನೋಹರ್ ಏನು ಹೇಳುತ್ತಾರೆ ಕೇಳಿ:
ಸದ್ಯಕ್ಕೆ ಆಷಾಢದ ಗಾಳಿ ಬೀಸುತ್ತಿದೆ. ಹಾಗಾಗಿ ಸರಕಾರ ಫಿಶಿಂಗ್ ಮಾಡಲು ಬಿಡುವುದಿಲ್ಲ. ಬೇಸಿಗೆಯ ಉಷ್ಣಕಾಲ ಮುಗಿದು ಮಳೆಗಾಲದ ಶೀತಗಾಳಿ ಜೋರಾಗುತ್ತಿದ್ದಂತೆ ನಮ್ಮ ಮಾರುಕಟ್ಟೆಯೂ ಜೀವಂತಿಕೆ ಪಡೆಯುತ್ತದೆ.
ಸುಮಾರು 40 ಅಂಗಡಿಗಳು ಇಲ್ಲಿವೆ. ಇಲ್ಲೆಲ್ಲಾ ಹೋಲ್ ಸೇಲ್ ದರದಲ್ಲಿಯೇ ಫಿಶ್ ಸಿಗುತ್ತದೆ. ಸಿಟಿ ಮಾರ್ಕೆಟ್ಟಿನಲ್ಲಿ ಹತ್ತು, ಯಶವಂತಪುರದಲ್ಲೂ ಆರೇಳು ಫಿಶ್ ಮಾರುಕಟ್ಟೆಗಳಿವೆ. ಆದರೆ ಅಲ್ಲಿ ತಾಜಾ ಫಿಶ್ ಸಿಗುವುದಿಲ್ಲ. ಜತೆಗೆ ರೇಟೂ ದುಬಾರಿ.
ನಮ್ಮಲ್ಲಿ ವೆರೈಟಿ ಇದೆ. ದೂರದ ರಾಮೇಶ್ವರ, ಪಾಂಡಿಚೆರಿ, ಕಡಲೂರು, ನಾಗಪಟ್ಟಣಂದಿಂದ ಫಿಶ್ ಬರುತ್ತದೆ. ಸದ್ಯಕ್ಕೆ ಮಂಗಳೂರಿನಿಂದ ಫಿಶ್ ಬರುವುದು ಕಡಿಮೆಯಾಗಿದೆ. ಈ ಬಹುರಾಷ್ಟ್ರೀಯ ಕಂಪನಿಗಳ ಹಾವಳಿ ಹೆಚ್ಚಾಗಿದೆ. Fish export ಹೆಚ್ಚಾಗುತ್ತಿದೆ. ಇದು ದೊಡ್ಡ ಸಮಸ್ಯೆಯಾಗಿದೆ.
ನಮಗೆ ಫಿಶ್ಶೇ ಸಿಗುತ್ತಿಲ್ಲ. ಮೀನುಗಾರರು ನೇರವಾಗಿ ರಫ್ತುದಾರರಿಗೆ ಮಾರಿಬಿಡುತ್ತಾರೆ. ನಮಗೆ ಮೀನು ಸಿಗುವುದೇ ಇಲ್ಲ. ಜತೆಗೆ exportಗೆ ಮಾರುವುದರಿಂದ ಮೀನುಗಾರರಿಗೆ ಹೆಚ್ಚಿನ ಹಣ ಬರುತ್ತದೆ. ಅದರಿಂದ ನಮಗೆ ಸಿಗುವ ಮೀನಿನ ರೇಟ್ ಜಾಸ್ತಿಯಾಗುತ್ತಿದೆ.
ಸರಕಾರ ಇದರತ್ತ ಗಮನಹರಿಸಬೇಕು. ನಮ್ಮಲ್ಲಿ ಸಿಗುವ ಫಿಶ್ ಗೆ ನಮ್ಮಲ್ಲೇ ಸಾಕಷ್ಟು ಬೇಡಿಕೆಯಿದೆ. ಇಲ್ಲಿನ ಹೊಟ್ಟೆಗಳೇ ಹೆಚ್ಚಾಗಿರುವಾಗ export ಯಾಕೆ ಮಾಡಬೇಕು? ಎಂದು ತಲೆಯಮೇಲೆ ಕೈಹೊತ್ತು ಕೇಳುತ್ತಾರೆ ಮನೋಹರ್. ಏನು ಹೇಳುವುದು ಅವರಿಗೆ !?












Click it and Unblock the Notifications