ಪ್ರಭುದೇವಗೆ ಇದ್ದದ್ದೊಂದು ಇಲಿ ಕಚ್ಕೊಂಡು ಹೋಯ್ತು!

ಹಿಂದಿನ ಬಿಜೆಪಿ ಸರಕಾರದಲ್ಲಿ ತಮಗಾಗಿಯೇ ಆರೋಗ್ಯ ಆಯೋಗ (Karnataka Health System Commission -KHSC) ಎಂಬ ಸಂತ್ರಸ್ತ ಕೇಂದ್ರದ ರಚನೆಗೆ ಕಾರಣವಾಗಿದ್ದ ಪ್ರಭುದೇವ ಅವರ ಜತೆ ಜತೆಗೆ ಹಾಲಿ ಕಾಂಗ್ರೆಸ್ ಸರಕಾರ ಆಯೋಗವನ್ನೂ ರದ್ದುಪಡಿಸಿದೆ.
ಈಗಾಗಲೇ ಆರೋಗ್ಯ ಇಲಾಖೆ ಕಾರ್ಯನಿರತವಾಗಿರುವಾಗ ಮತ್ತೆ KHSC ಸ್ಥಾಪನೆಯ ಅಗತ್ಯವಿಲ್ಲ. ಈ ಆಯೋಗದ ರಚನೆಗೆ ಸದುದ್ದೇಶವೂ ಇಲ್ಲ. ಪ್ರಭಾವಿ ವ್ಯಕ್ತಿಯೊಬ್ಬರಿಗಾಗಿ ಹುದ್ದೆ ಸೃಷ್ಟಿಸಬೇಕು ಎಂದು ಈ ಆಯೋಗವನ್ನು ರಚಿಸಲಾಗಿತ್ತು. ಆದರೆ ಅದರ ಅಗತ್ಯವಿಲ್ಲ ಎಂದು ಅಭಿಪ್ರಾಯಪಟ್ಟಿರುವ ಸಿಎಂ ಸಿದ್ದರಾಮಯ್ಯ ಅವರು ಆಯೋಗವನ್ನು ಬರಕಾಸ್ತುಗೊಳಿಸಿದ್ದಾರೆ.
ಹೋದಡೆಯೆಲ್ಲೆಲ್ಲಾ ವಿವಾದಗ್ರಸ್ತರಾಗುತ್ತಿದ್ದ ಡಾ. ಎನ್ ಪ್ರಭುದೇವ ಬೆಂಗಳೂರು ವಿಶ್ವವಿದ್ಯಾಲಯದ ವೈಸ್ ಚಾನ್ಸಲರ್ ಆಗಿದ್ದಾಗ ರಿಜಿಸ್ಟ್ರಾರ್ ಮೇಲೂರು ಮೈಲಾರಪ್ಪ ಅವರ ಜತೆ ಹಾವು-ಮುಂಗುಸಿಯಂತಾಡುತ್ತಿದ್ದರು. ಇದರಿಂದ ಮುಕ್ತಿ ಕಂಡುಕೊಳ್ಳಲು ಅಂದಿನ ಸರಕಾರ ಪ್ರಭುದೇವಗಾಗಿಯೇ KHSC ಅನ್ನು ಸ್ಥಾಪಿಸಿತ್ತು.
ಕಳೆದ ಸೆಪ್ಟೆಂಬರಿನಲ್ಲಿ ಮುಖ್ಯಮಂತ್ರಿ ಸದಾನಂದ ಗೌಡರು ಡಾ ಪ್ರಭುದೇವರ ಬೀಗರರಾದ ಸಚಿವ ಉಮೇಶ್ ಕತ್ತಿ ಅವರ ಒತ್ತಾಯಕ್ಕೆ ಮಣಿದು ಹೊಸದಾಗಿ KHSC ಸ್ಥಾಪಿಸಿದ್ದರು.












Click it and Unblock the Notifications