ಯಡಿಯೂರಪ್ಪ ಬಿಜೆಪಿಗೆ ವಾಪಸ್: ಇಂದು ಅಧಿಕೃತ ಚಾಲನೆ

yeddyurappa-to-return-bjp-joshi-to-discuss-june-27
ಬೆಂಗಳೂರು, ಜೂನ್ 27: ಕೆಜೆಪಿ ನಾಯಕ ಯಡಿಯೂರಪ್ಪ ಅವರು ಬಿಜೆಪಿಗೆ ವಾಪಸಾಗುವುದಕ್ಕೆ ಸಿದ್ಧ ಎಂದು ಒಂದು ವಾರದ ಹಿಂದೆ ಧನಂಜಯ ಕುಮಾರ್ ಹೇಳಿದ್ದ ಮಾತು ನಿಜವಾಗುವತ್ತ ಸಾಗಿದೆ. ಯಡಿಯೂರಪ್ಪ ಅವರನ್ನು ಬಿಜೆಪಿಗೆ ವಾಪಸ್ ಸೇರಿಸಿಕೊಳ್ಳುವುದಕ್ಕೆ ಇಂದು ಬಿಜೆಪಿ ಪಕ್ಷ ಅಧಿಕೃತ ಚಾಲನೆ ನೀಡಿದೆ.

ಬಿಜೆಪಿ ರಾಜ್ಯಧ್ಯಕ್ಷ ಪ್ರಹ್ಲಾದ್ ಜೋಶಿ ನೇತೃತ್ವದಲ್ಲಿ ಮಲ್ಲೇಶ್ವರಂನಲ್ಲಿರುವ ಪಕ್ಷದ ಕಚೇರಿಯಲ್ಲಿ ಹಿರಿಯ ನಾಯಕರು ಸಮಾಲೋಚನೆ ನಡೆಸಲಿದ್ದಾರೆ. ಇದು ರಾಜ್ಯಮಟ್ಟದ ಚರ್ಚೆಯಾಗಿದ್ದು, ಯಡಿಯೂರಪ್ಪ ವಾಪಸಾತಿಗೆ ಒಮ್ಮತ ದೊರೆತ ದೊರೆತ ನಂತರ ಜೋಶಿ ಅವರು ಅದನ್ನು ರಾಷ್ಟ್ರೀಯ ನಾಯಕರ ತೀರ್ಮಾನಕ್ಕೆ ಒಪ್ಪಿಸಲಿದ್ದಾರೆ.

ಇಂಟರೆಸ್ಟಿಂಗ್ ಅಂದರೆ ಯಡಿಯೂರಪ್ಪ ಅವರಿಂದ ದೂರವಾದ ಬಳಿಕ ಅನಂತ ಕುಮಾರ್ ಅವರ ಪಾಳಯದಲ್ಲಿ ಗಾಢವಾಗಿ ಕಾಣಿಸಿಕೊಂಡಿದ್ದ ಸದಾನಂದರು ಈಗ ಯಡಿಯೂರಪ್ಪ ಅವರ ತೆಕ್ಕೆಗೆ ವಾಪಸಾಗಿದ್ದಾರೆ. ಅನಂತ ಕುಮಾರಗಿಂತ ಯಡಿಯೂರಪ್ಪ ಅವರೇ ಬೆಟರ್ರು ಎಂಬುದು ಸದಾನಂದರಿಗೆ ಅನುಭವಕ್ಕೆ ಬಂದಿದೆ. ಹಾಗಾಗಿ ಅವರೇ ಈಗ ಯಡಿಯೂರಪ್ಪ ಬಿಜೆಪಿ ವಾಪಸಾತಿ ಸಂಧಾನ ತಂಡದ ನೇತೃತ್ವ ವಹಿಸಿದ್ದಾರೆ ಎಂದು ಬಿಜೆಪಿ ಮೂಲಗಳು ಹೇಳಿವೆ.

ಶಾಸಕರಾದ ಬಸವರಾಜ ಬೊಮ್ಮಾಯಿ, ಉಮೇಶ್ ಕತ್ತಿ, ಕೆಜಿ ಬೋಪಯ್ಯ, ಗೋ ಮಧುಸೂಧನ್, ಮುರುಗೇಶ್ ನಿರಾಣಿ, ಅರವಿಂದ ಲಿಂಬಾವಳಿ ಇಂದಿನ ಸಭೆಯಲ್ಲಿ ಪಾಲ್ಗೊಳ್ಳಲಿದ್ದಾರೆ. ಯಡಿಯೂರಪ್ಪ ಅವರನ್ನು ಪಕ್ಷಕ್ಕೆ ಕರೆತರಬೇಕು ಎಂಬುದು ನಮ್ಮೆಲ್ಲರ ಆಶಯ. ಜೋಶಿ ಜತೆ ಪ್ರಾಥಮಿಕ ಚರ್ಚೆ ನಂತರ ಈ ಪ್ರಕ್ರಿಯೆಗೆ ಸ್ಪಷ್ಟ ರೂಪ ಬರಲಿದೆ ಎಂದು ಉಮೇಶ್ ಕತ್ತಿ ಆಶಿಸಿದ್ದಾರೆ.

ಬಿಎಸ್‌ವೈ ತಿರಸ್ಕರಿಸಿಲ್ಲ: ಯಡಿಯೂರಪ್ಪ ಅವರನ್ನು ಪಕ್ಷಕ್ಕೆ ಸೇರಿಸಿಕೊಳ್ಳಲು ನಡೆಯುತ್ತಿರುವ ಪ್ರಯತ್ನಗಳ ಬಗ್ಗೆ ಬಿಜೆಪಿ ಮುಖಂಡರು ಈಗಾಗಲೇ ಅವರಿಗೆ ಸಂದೇಶ ರವಾನಿಸಿದ್ದಾರೆ. ಇದಕ್ಕೆ ಅವರು ಸ್ಪಷ್ಟ ಒಪ್ಪಿಗೆ ಸೂಚಿಸದೇ ಇದ್ದರೂ ಬಿಜೆಪಿಗೆ ಸೇರುವುದೇ ಇಲ್ಲ ಎಂದು ನಿರಾಕರಿಸಿಯೂ ಇಲ್ಲ. ಹೀಗಾಗಿ ಬಿಜೆಪಿ ಮುಖಂಡರು ತಮ್ಮ ಪ್ರಯತ್ನ ತೀವ್ರಗೊಳಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+