ಸಕಲೇಶಪುರ: ರೈಲಿಗೆ ಸಿಕ್ಕಿ 6 ಎಮ್ಮೆಗಳ ದಾರುಣ ಸಾವು

ರೈಲಿಗೆ ಸಿಕ್ಕಿ ಮೃತಪಟ್ಟ ಎಮ್ಮೆಗಳ ಕಾಲು, ರುಂಡ, ಮುಂಡ ಹಾಗೂ ದೇಹದ ನಾನಾ ಭಾಗಗಳು ಸುಮಾರು ಒಂದು ಕಿ.ಮಿ. ದೂರದವರಗೆ ಚೆಲ್ಲಾಡಿದ್ದು ನೋಡಗರ ಮನಕರಗುವಂತಿತ್ತು.
ಬುಧವಾರ ಬೆಳಿಗ್ಗೆ ಸ್ಥಳೀಯರಿಗೆ ವಿಷಯ ತಿಳಿದುಬಂದಿದೆ. ಅರೆ ಜೀವವಾಗಿದ್ದ ಎರಡು ಎಮ್ಮೆಗಳು ಮತ್ತು ಹಿಂಬದಿ ಕಾಲುಗಳನ್ನು ಕಳೆದುಕೊಂಡಿದ್ದ ಒಂದು ಎಮ್ಮೆಯ ರಕ್ಷಣೆಗೆ ಅವುಗಳ ಮಾಲೀಕರಾಗಲಿ ಅಥವಾ ಪಶುವೈದ್ಯರಾಗಲಿ ಸ್ಪಂದಿಸಲಿಲ್ಲ. ಸುರಿಯುತ್ತಿದ್ದ ಧಾರಾಕಾರ ಮಳೆಯಲ್ಲಿ ಎಮ್ಮೆಗಳು ನೋವಿನಿಂದ ನರಳುತ್ತ ಬಿದ್ದಿದ್ದವು.
ಘಟನೆಗೆ ಕಾರಣ: ಪಟ್ಟಣದ ರೈಲ್ವೆ ನಿಲ್ದಾಣದಿಂದ ಕೇವಲ ಎರಡು ಕಿಮಿ ದೂರದಲ್ಲಿ ಗುಡ್ಡ ಕೊರೆದು ರೈಲ್ವೆ ಹಳಿ ನಿರ್ಮಾಣ ಮಾಡಲಾಗಿದೆ. ಅಲ್ಲಿ ಯಥೇಚ್ಚವಾಗಿ ಹಸಿರು ಹುಲ್ಲು ಬೆಳೆದಿದೆ. ಈ ಎಮ್ಮೆಗಳು ಅದನ್ನು ಮೇಯಲು ಹೋಗಿವೆ. ಆದರೆ ರೈಲು ಬಂದ ಸಮಯದಲ್ಲಿ ತಪ್ಪಿಸಿಕೊಳ್ಳಲು ಸ್ಥಳವಿಲ್ಲದ ಕಾರಣ ರೈಲಿನಡಿ ಬಿದ್ದು ದಾರುಣವಾಗಿ ಸತ್ತಿವೆ.












Click it and Unblock the Notifications