ಅಡುಗೆ ಮಾಡಲು ಒಪ್ಪದ ಪತ್ನಿಯನ್ನು ಕೊಂದ ಪತಿ!

ಶಾಮಣ್ಣ ಗಾರ್ಡನ್ ನಿವಾಸಿಯಾದ ಮೆಹರ್ ತಾಜ್ ಕೊಲೆಯಾದ ದುರ್ದೈವಿ. ಮೆಹತ್ ಪತಿ ಅಬ್ದುಲ್ ಅಜೀಜ್ ಕೊಲೆ ಮಾಡಿ, ಶರಣಾಗಿರುವ ಪತಿ. ಬುಧವಾರ ರಾತ್ರಿ ಮೆಹರ್ ತಾಜ್ ಅಡುಗೆ ಮಾಡಲು ನಿರಾಕರಿಸಿದ್ದಾರೆ. ಆದ್ದರಿಂದ ದಂಪತಿ ಜಗಳವಾಡಿದ್ದಾರೆ.
ಇವರ ಜಗಳ ವಿಕೋಪಕ್ಕೆ ಹೋದಾಗ, ಪಾಸ್ಟಿಕ್ ವೈರ್ ನಿಂದ ಅಬ್ದುಲ್ ಮೆಹರ್ ಕುತ್ತಿಗೆಗೆ ಬಿಗಿದು ಕೊಲೆ ಮಾಡಿದ್ದಾನೆ. ನಂತರ ತಪ್ಪನ್ನು ಅರಿತ ಆತ ಬ್ಯಾಟರಾಯನಪುರ ಪೊಲೀಸರಿಗೆ ಶರಣಾಗಿದ್ದಾನೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಬೆಳಗಾವಿ ಮೂದದವರು : ಮೂಲತಃ ಬೆಳಗಾವಿ ಮೂಲದವರಾದ ಅಬ್ದುಲ್ ಅಜೀಜ್ ಮತ್ತು ಮೆಹರ್ ತಾಜ್ ಹಲವು ವರ್ಷಗಳಿಂದ ಬೆಂಗಳೂರಿನಲ್ಲಿ ನೆಲೆಸಿದ್ದರು. ಕಳೆದ ವಾರ ಬೆಳಗಾವಿಗೆ ತೆರಳಿದ್ದ ಅವರು, ಬುಧವಾರ ರಾತ್ರಿ ಶಾಮಣ್ಣ ಗಾರ್ಡನ್ ಬಳಿಯ ನಿವಾಸಕ್ಕೆ ಆಗಮಿಸಿದ್ದರು.
ಮನೆಗೆ ಬಂದ ತಕ್ಷಣ ಮೆಹರ್ ಗೆ ಅಡುಗೆ ಮಾಡುವಂತೆ ಅಬ್ದುಲ್ ಹೇಳಿದ್ದಾನೆ. ಇಂದು ಅಡುಗೆ ಮಾಡಲು ಆಗೋಲ್ಲ. ಹೋಟೆಲ್ ನಿಂದ ತರಿಸಿಕೊಳ್ಳಿ ಎಂದು ಆಕೆ ಹೇಳಿದ್ದಾಳೆ. ಇದೇ ವಿಷಯವಾಗಿ ಇಬ್ಬರ ನಡುವೆ ಜಗಳವಾಗಿದೆ. ಜಗಳ ವಿಕೋಪಕ್ಕೆ ಹೋದಾಗ, ಪತ್ನಿಯನ್ನು ಅಬ್ದುಲ್ ಕೊಲೆ ಮಾಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.












Click it and Unblock the Notifications