ಚಿತ್ರಗಳಲ್ಲಿ: ನೆಲದ ಮೇಲೆ ಸಾಗುತಿದೆ ದೋಣಿ!

ಬೆಂಗಳೂರು, ಜೂ.26: ರಸ್ತೆಗಳಲ್ಲಿ ಸಾಗುತ್ತಿದೆ ದೋಣಿ ಎಂದು ಶೀರ್ಷಿಕೆ ನೋಡಿ ಕಲಿಗಾಲ ಎನ್ನಬೇಡಿ. 'ಮಳೆ'ನಾಡು ಕೇರಳದ ಕೋಳಿಕ್ಕೋಡ್, ಕೊಚ್ಚಿ ಮುಂತಾದೆಡೆ ರಸ್ತೆಗಳು ಜಲಾವೃತಗೊಂಡಿವೆ. ರಸ್ತೆಗಳಲ್ಲಿ ನಡೆದಾಡುವುದೇ ಕಷ್ಟವಾಗಿರುವ ಪರಿಸ್ಥಿತಿಯಲ್ಲಿ ಇಲ್ಲಿನ ಜನರು ದೋಣಿಗಳನ್ನು ಬಳಸಿಕೊಂಡು ಒಂದು ಕಡೆಯಿಂದ ಇನ್ನೊಂದು ಕಡೆಗೆ ಸಾಗುತ್ತಿದ್ದಾರೆ.

ದೋಣಿಗಳು ರಸ್ತೆಗಳಲ್ಲಿ ಸರಾಗವಾಗಿ ಸಾಗುತ್ತಿದ್ದು, ಇಲ್ಲಿನ ಜನರಿಗೆ ಸಾರಿಗೆ -ಸಂಪರ್ಕ ಒದಗಿಸಿದೆ. ಉಳಿದಂತೆ ಮಹಾರಾಷ್ಟ್ರ, ಹರ್ಯಾಣ, ಮುಂಬೈನಲ್ಲಿ ಮಳೆ ಮತ್ತೆ ಜೋರಾಗಿದೆ. ಮುಂಬೈನ ಮಳೆ ಚಿತ್ರಗಳು ಒಂದಿಷ್ಟು ಇಲ್ಲಿವೆ.

ಬಿಹಾರದ ಮುಜಾಫರ್ ಪುರದಲ್ಲಿ ಶಹೀನ್ ಪರ್ವೀನ್ ಎಂಬ ಮಹಿಳೆ ಖಾಸಗಿ ಆಸ್ಪತ್ರೆಯಲ್ಲಿ ಮಂಗಳವಾರ ತ್ರಿವಳಿ ಹೆಣ್ಣು ಮಕ್ಕಳಿಗೆ ಜನ್ಮ ನೀಡಿದ್ದಾರೆ. ಮುದ್ದಾದನ ನವಜಾತ ಶಿಶುಗಳ ಚಿತ್ರ ತಪ್ಪದೇ ನೋಡಿ

ಕರ್ನಾಟಕದ ಮಣಿಪಾಲದ ವಿದ್ಯಾರ್ಥಿನಿ ಅತ್ಯಾಚಾರ ಪ್ರಕರಣದ ತನಿಖೆ ವಿಳಂಬದಿಂದ ರೊಚ್ಚಿಗೆದ್ದ ವೈದ್ಯಕೀಯ ವಿದ್ಯಾರ್ಥಿನಿಯರು, ವೈದ್ಯರು ಉಡುಪಿಯಲ್ಲಿ ಪ್ರತಿಭಟನೆ ನಡೆಸಿದ್ದರು. ಈಗ ಈ ಸಾಲಿಗೆ ವಿವಿಧ ಶಾಲಾ ಮಕ್ಕಳು ಕೂಡಾ ಸೇರಿಕೊಂಡಿದ್ದಾರೆ.

ಉಳಿದಂತೆ, ವಿಂಬಲ್ಡನ್ ನಲ್ಲಿ ಯಾರು ಗೆದ್ದರು?, ಲಾಲೂ ರಿಲ್ಯಾಕ್ಸ್ ಮೂಡ್, ಮುಂಬೈ, ಕೇರಳದಲ್ಲಿ ಮಳೆ ಹೇಗಿದೆ. ತ್ರಿವಳಿಗಳಿಗೆ ಜನ್ಮ ನೀಡಿದ ಮಹಾಮಾತ್ರೆ ಎಲ್ಲವೂ ಇಂದಿನ ಪ್ಯಾಕೇಜಿನಲ್ಲಿದೆ

ರಸ್ತೆಗಳಲ್ಲಿ ಸಾಗುತ್ತಿದೆ ದೋಣಿ

ರಸ್ತೆಗಳಲ್ಲಿ ಸಾಗುತ್ತಿದೆ ದೋಣಿ

ಕೇರಳದಲ್ಲಿ ದೋಣಿಗಳು ರಸ್ತೆಗಳಲ್ಲಿ ಸರಾಗವಾಗಿ ಸಾಗುತ್ತಿದ್ದು, ಇಲ್ಲಿನ ಜನರಿಗೆ ಸಾರಿಗೆ -ಸಂಪರ್ಕ ಒದಗಿಸಿದೆ.

ಶಿವಾ ಕಾಪಾಡಪ್ಪ

ಶಿವಾ ಕಾಪಾಡಪ್ಪ

ಕೊಚ್ಚಿ: ಭಾರಿ ಮಳೆಯಿಂದ ಮುಳುಗಿರುವ ಆಳುವ ಶಿವ ದೇಗುಲದ ಮುಂದೆ ನಿಂತ ಭಕ್ತೆ

ಕೇರಳದ ಮಳೆ ಪ್ರಭಾವ

ಕೇರಳದ ಮಳೆ ಪ್ರಭಾವ

ಮಳೆ'ನಾಡು ಕೇರಳದ ಕೋಳಿಕ್ಕೋಡ್, ಕೊಚ್ಚಿ ಮುಂತಾದೆಡೆ ರಸ್ತೆಗಳು ಜಲಾವೃತಗೊಂಡಿವೆ.

ಮಹಾಮಾತೆ

ಮಹಾಮಾತೆ

ಬಿಹಾರದ ಮುಜಾಫರ್ ಪುರದಲ್ಲಿ ಶಹೀನ್ ಪರ್ವೀನ್ ಎಂಬ ಮಹಿಳೆ ಖಾಸಗಿ ಆಸ್ಪತ್ರೆಯಲ್ಲಿ ಮಂಗಳವಾರ ತ್ರಿವಳಿ ಹೆಣ್ಣು ಮಕ್ಕಳಿಗೆ ಜನ್ಮ ನೀಡಿದ್ದಾರೆ.

ಮಂಡೇಲಗೆ ಹಾರೈಕೆ

ಮಂಡೇಲಗೆ ಹಾರೈಕೆ

ಪುರಿ: ಮರಳು ಶಿಲ್ಪ ಕಲಾವಿದ ಸುದರ್ಶನ್ ಪಟ್ನಾಯಕ್ ಅವರು ದಕ್ಷಿಣ ಆಫ್ರಿಕಾದ ಮಾಜಿ ಅಧ್ಯಕ್ಷ ನೆಲ್ಸನ್ ಮಂಡೇಲ ಅವರ ಕಲಾಕೃತಿಗೆ ಅಂತಿಮ ಸ್ಪರ್ಶ ನೀಡುತ್ತಿದ್ದಾರೆ. God bless Madiba ಎಂದು ಇಡೀ ವಿಶ್ವ ಜಪಿಸುತ್ತಿದೆ.

ಮೂವರು ಸುಂದರಿಯರು

ಮೂವರು ಸುಂದರಿಯರು

ಬಾಲಿವುಡ್ ಬೆಡಗಿಯರಾದ ನೇಹಾ ಧೂಪಿಯಾ, ಮಹಿಮಾ ಚೌಧರಿ, ಯಾಮಿ ಗೌತಮ್ ಖಾಸಗಿ ಸಮಾರಂಭದಲ್ಲಿ ಕೊಟ್ಟ ಪೋಸ್

ವಿದ್ಯಾರ್ಥಿಗಳ ಪ್ರತಿಭಟನೆ

ವಿದ್ಯಾರ್ಥಿಗಳ ಪ್ರತಿಭಟನೆ

ಕರ್ನಾಟಕದ ಮಣಿಪಾಲದ ವಿದ್ಯಾರ್ಥಿನಿ ಅತ್ಯಾಚಾರ ಪ್ರಕರಣದ ತನಿಖೆ ವಿಳಂಬದಿಂದ ರೊಚ್ಚಿಗೆದ್ದ ವೈದ್ಯಕೀಯ ವಿದ್ಯಾರ್ಥಿನಿಯರು, ವೈದ್ಯರು ಉಡುಪಿಯಲ್ಲಿ ಪ್ರತಿಭಟನೆ ನಡೆಸಿದ್ದರು. ಈಗ ಈ ಸಾಲಿಗೆ ವಿವಿಧ ಶಾಲಾ ಮಕ್ಕಳು ಕೂಡಾ ಸೇರಿಕೊಂಡಿದ್ದಾರೆ.

ಲಾಲೂ ಪ್ರಸಾದ್ ಯಾದವ್

ಲಾಲೂ ಪ್ರಸಾದ್ ಯಾದವ್

ಪಾಟ್ನ: ಆರ್ ಜೆಡಿ ಮುಖ್ಯಸ್ಥ ಲಾಲೂ ಪ್ರಸಾದ್ ಯಾದವ್ ಅವರು ಆರಾಮವಾಗಿ ಮನೆಯಲ್ಲಿ ಕುಳಿತಾಗ ಕಂಡಿದ್ದು ಹೀಗೆ

ಮುಂಬೈ ಮಹಾ ಮಳೆ

ಮುಂಬೈ ಮಹಾ ಮಳೆ

ಮುಂಬೈ: ವೊರ್ಲಿಯಲಿ ಮಳೆಯಲ್ಲಿ ನೆನೆದು ಸಾಗುವುದೇ ಖುಷಿ

ಮುಂಬೈ ಮಹಾ ಮಳೆ

ಮುಂಬೈ ಮಹಾ ಮಳೆ

ಮುಂಬೈ: ಮರೇನ್ ಡ್ರೈವ್ ಬಳಿಯಲಿ ಕಾಲೇಜು ವಿದ್ಯಾರ್ಥಿಗಳು ಮಳೆಯಲಿ ಜೊತೆಯಲಿ ಎನ್ನುತ್ತಿದ್ದಾರೆ.

ವಿಂಬಲ್ಡನ್ ಅಪ್ಡೇಟ್

ವಿಂಬಲ್ಡನ್ ಅಪ್ಡೇಟ್

ಲಂಡನ್: ಸೆರ್ಬಿಯಾದ ನೋವಾಕ್ ಜೋಕೊವಿಕ್ ಅವರು ಜರ್ಮನಿಯ ಮೇಯರ್ ವಿರುದ್ಧ ಮೊದಲ ಸುತ್ತಿನಲ್ಲಿ ಜಯ ಗಳಿಸಿದ ಕ್ಷಣ

ಇಂಗ್ಲೆಂಡಿಗೆ ಸೋಲು

ಇಂಗ್ಲೆಂಡಿಗೆ ಸೋಲು

ಚಾಂಪಿಯನ್ಸ್ ಟ್ರೋಫಿ ಫೈನಲ್ ನಲ್ಲಿ ಟೀಂ ಇಂಡಿಯಾ ವಿರುದ್ಧ 5 ರನ್ ಗಳಿಂದ ಸೋತ ಇಂಗ್ಲೆಂಡ್ ತಂಡ ಪ್ರವಾಸಿ ನ್ಯೂಜಿಲೆಂಡ್ ವಿರುದ್ಧದ ಮೊದಲ ಟಿ 20 ಪಂದ್ಯದಲ್ಲೂ ಅದೇ ಅಂತರದಿಂದ ಸೋತಿದೆ. ಕಿವೀಸ್ ನಾಯಕ ಬ್ರೆಂಡನ್ ಮೆಕಲಮ್ 48 ಎಸೆತದಲ್ಲಿ 68 ರನ್ ಸಿಡಿಸಿದ್ದು ವಿಶೇಷ

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+