ಉತ್ತರಾಖಂಡ್: ಸುರಕ್ಷತೆಯ ಗಡಿ ಮುಟ್ಟಿದ ಕನ್ನಡಿಗರು
ಬೆಂಗಳೂರು, ಜೂ.21: ಉತ್ತರಾಖಂಡದಲ್ಲಿ ಪ್ರವಾಹ ಇಳಿಮುಖವಾಗಿದೆ. ಪ್ರಕೃತಿ ವಿಕೋಪಕ್ಕೆ ಸಿಲುಕಿ ತಪ್ಪಿಸಿಕೊಂಡು ಸುರಕ್ಷಿತವಾಗಿ ಗೂಡು ಸೇರಿರುವ ಭಕ್ತಾದಿಗಳು ತಮ್ಮ ಕರುಣಾಜನಕ ಕತೆಯನ್ನು ಬಿಚ್ಚಿಟ್ಟಿದ್ದಾರೆ.ಈ ನಡುವೆ ಹೃಷಿಕೇಶದಿಂದ ರಾಜ್ಯದ 68 ಯಾತ್ರಾರ್ಥಿಗಳು ದೆಹಲಿ ತಲುಪಿದ್ದಾರೆ ಎಂದು ಕರ್ನಾಟಕದ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಉಪ ನಿರ್ದೇಶಕ ಕರೀಗೌಡ ತಿಳಿಸಿದ್ದಾರೆ.
ಸುಮಾರು 300 ರಾಜ್ಯದ ಯಾತ್ರಾರ್ಥಿಗಳು ಋಷಿಕೇಶದಲ್ಲಿ ಸಿಲುಕಿಕೊಂಡಿದ್ದು, ಉಳಿದವರನ್ನು ಕೂಡ ರಸ್ತೆ ಮಾರ್ಗದಲ್ಲಿ ದೆಹಲಿಗೆ ಕಳುಹಿಸಿಕೊಡುವ ಪ್ರಯತ್ನ ನಡೆಯುತ್ತಿದೆ. ರಾಜ್ಯದ ಯಾವುದೇ ಯಾತ್ರಿಗಳು ಜಲಪ್ರಳಯದಲ್ಲಿ ಸಾವನ್ನಪ್ಪಿಲ್ಲ ಎಂದರು. ಈಗ ಮಳೆ ಸಂಪೂರ್ಣ ನಿಂತಿರುವುದರಿಂದ ಇನ್ನು ಮೂರ್ನಾಲ್ಕು ದಿನಗಳ ಕಾಲ ಪರಿಹಾರ ಕಾರ್ಯಾಚರಣೆ ಮುಂದುವರೆಯುತ್ತಿದೆ ಎಂದು ಕರೀಗೌಡ ಹೇಳಿದರು.
ರಕ್ಷಣಾ ಕಾರ್ಯಕ್ಕೆ ರಾಜ್ಯದಿಂದ ನೇಮಿಸಲ್ಪಟ್ಟಿರುವ ಹಿರಿಯ ಅಧಿಕಾರಿಗಳಾದ ನವೀನ್ ರಾಜ್ ಸಿಂಗ್, ಹೇಮಂತ್ ನಿಂಬಾಳ್ಕರ್ ಹಾಗೂ ಕರೀಗೌಡ ಅವರು ರಕ್ಷಣಾ ಕಾರ್ಯದಲ್ಲಿ ಸಂಪೂರ್ಣ ಸಹಕಾರ ನೀಡಿದ್ದಾರೆ.
ನಾವೂ ಕೂಡ ಸಂತ್ರಸ್ತರನ್ನು ಸಂಪರ್ಕ ಮಾಡಿ ಅವರುಗಳನ್ನು ಸುರಕ್ಷಿತವಾಗಿ ದೆಹಲಿಗೆ ಕಳುಹಿಸಿಕೊಡುತ್ತಿದ್ದೇವೆ. 68 ಜನರ ಒಂದು ತಂಡ ಈಗಾಗಲೇ ದೆಹಲಿ ತಲುಪಿದೆ ಎಂದರು.
ಸಿಎಂ ಭೇಟಿ: ಈ ಮಧ್ಯೆ ವಾರ್ತಾ ಸಚಿವ ಸಂತೋಷ್ ಲಾಡ್ ಇಂದು ಉತ್ತರಖಂಡ ಮುಖ್ಯಮಂತ್ರಿ ವಿಜಯಬಹುಗುಣ ಅವರನ್ನು ಭೇಟಿ ಮಾಡಿ ರಾಜ್ಯದ ಯಾತ್ರಿಕರನ್ನು ಸುರಕ್ಷಿತವಾಗಿ ಕರೆತರಲು ಸಹಕಾರ ನೀಡುವಂತೆ ಮನವಿ ಮಾಡಿದ್ದಾರೆ.
ಇದೇ ಸಂದರ್ಭದಲ್ಲಿ ಪ್ರವಾಹ ಸಂತ್ರಸ್ತರ ನೆರವಿಗಾಗಿ 5 ಕೋಟಿ ರೂ.ಗಳ ಚೆಕ್ಕನ್ನು ಮುಖ್ಯಮಂತ್ರಿಯವರಿಗೆ ಹಸ್ತಾಂತರ ಮಾಡಿದ್ದಾರೆ. ಸುಮಾರು ನಾಲ್ಕು ದಿನಗಳ ಕಾಲ ಡೆಹರಾಡೂನ್ ನಲ್ಲಿ ವಾಸ್ತವ್ಯ ಹೂಡಲಿರುವ ಸಚಿವರು, ಈಗಾಗಲೇ ಡೆಹರಾಡೂನ್ ನಲ್ಲಿ ಬೀಡುಬಿಟ್ಟಿರುವ ರಾಜ್ಯದ ಅಧಿಕಾರಿಗಳೊಂದಿಗೆ ಸಮಾಲೋಚನೆ ಮಾಡಿ ಭಕ್ತಾದಿಗಳನ್ನು ಸುರಕ್ಷಿತವಾಗಿ ಬೆಂಗಳೂರಿಗೆ ಕರೆತರುವ ಪ್ರಯತ್ನ ಮಾಡುತ್ತಿದ್ದಾರೆ. ಬದುಕುಳಿದವರ ಸಂತಸದ ಚಿತ್ರಗಳು ಇಲ್ಲಿದೆ..

ಬದುಕುಳಿದ ಯಾತ್ರಿಗಳು
ಆತಂಕಕ್ಕೊಳಗಾದ ಯಾತ್ರಿಗಳನ್ನು ಆರ್ಮಿ ವಿಮಾನದ ಮೂಲಕದ ಸುರಕ್ಷಿತ ಸ್ಥಳಕ್ಕೆ ಸೇರಿಸಲಾಗಿದೆ.

ಬದುಕುಳಿದ ಯಾತ್ರಿಗಳು
ಉತ್ತರಕಾಶಿ, ಚಮೋಲಿ, ತೆಹ್ರಿ ರುದ್ರಪ್ರಯಾಗ್ ಸೇರಿದಂತೆ ಹಲವಾರು ಪ್ರದೇಶದಲ್ಲಿ ನಾಲ್ಕು ದಿನದಿಂದ ಭಕ್ತಾದಿಗಳು ಹೊಟ್ಟೆಗೆ ಏನು ಇಲ್ಲದೆ ಕಾಲ ದೂಡಿದ್ದರು.

ಬದುಕುಳಿದ ಯಾತ್ರಿಗಳು
ಬದುಕುಳಿದ ಯಾತ್ರಿಗಳು

ಜಲಪ್ರಳಯದ ನಂತರದ ಚಿತ್ರ
ಜಲಪ್ರಳಯದ ನಂತರದ ಚಿತ್ರ

ಯಾತ್ರಿಗಳ ರಕ್ಷಣೆ
ಭಾರತೀಯ ಸೇನೆ ಯೊಧರಿಂದ ಯಾತ್ರಿಗಳ ರಕ್ಷಣೆ

ಜಲಪ್ರಳಯದ ನಂತರದ ಚಿತ್ರ
ಜಲಪ್ರಳಯದ ನಂತರದ ಚಿತ್ರ

ಒಂದು ವೈಮಾನಿಕ ಚಿತ್ರ
ಜಲಪ್ರಳಯದ ನಂತರದ ಒಂದು ವೈಮಾನಿಕ ಚಿತ್ರ

ನಗು ಅಳು ಎಲ್ಲವೂ ಒಟ್ಟಿಗೆ
ಬದುಕುಳಿದ ಯಾತ್ರಿಗಳು ಮನೆಗೆ ತಲುಪಿದ ಖುಷಿ ದುಃಖ

ಮನೆ ಕಡೆಗೆ
ಚೆನ್ನೈನ ವೃದ್ಧ ಭಕ್ತರು ಮನೆ ಕಡೆ ಹೊರಟ್ಟಿದ್ದು

ನರಕ ನೋಡಿ ಬಂದೆ
ಅಜ್ಜನ ಚಿತ್ರ ಎಲ್ಲವನ್ನೂ ಹೇಳುತ್ತದೆ. ನರಕ ಸದೃಶ ಜಲ ಪ್ರಳಯದಿಂದ ಪಾರಾಗಿ ಬಂದ ವಯೋವೃದ್ಧ ಭಕ್ತ

ಅಬ್ಬಾ ಏನು ಪ್ರವಾಹ
ಅಬ್ಬಾ ಏನು ಪ್ರವಾಹ ಎದೆ ಬಡಿತವೇ ನಿಂತು ಹೋಗುವಂತಿತ್ತು ಆ ಸದ್ದು, ನಮ್ಮ ಪ್ರಯಾಣ ಮುಂದುವರೆಸಲು ಪ್ಲ್ಯಾನ್ ಮಾಡುತ್ತಿದ್ದೆವು ಅಷ್ಟರಲ್ಲಿ ಪ್ರಳಯ ಎದುರಾಗಿದ್ದರಿಂದ ಸುರಕ್ಷಿತವಾಗಿ ಹಿಂತಿರುಗಿದೆವು ಎಂದು ಕ್ರಿಕೆಟರ್ ಹರ್ಭಜನ್ ಸಿಂಗ್ ತಮ್ಮ ಅನುಭವ ತೋಡಿಕೊಂಡಿದ್ದಾರೆ.

ರಾಜನಾಥ್ ಸಿಂಗ್ ವೈಮಾನಿಕ ಸಮೀಕ್ಷೆ
ಬಿಜೆಪಿ ಅಧ್ಯಕ್ಷ ರಾಜನಾಥ್ ಸಿಂಗ್ ವೈಮಾನಿಕ ಸಮೀಕ್ಷೆ ನಡೆಸಿದ ಚಿತ್ರ

ಎಲ್ಲವೂ ಧ್ವಂಸ
ಜಲಪ್ರಳಯದ ನಂತರದ ಚಿತ್ರ

ಬದುಕುಳಿದ ಯಾತ್ರಿಗಳು
ಬದುಕುಳಿದ ಯಾತ್ರಿಗಳು

ತಾತ್ಕಾಲಿಕ ಚಿಕಿತ್ಸೆ
ಯಾತ್ರಿಗಳಿಗೆ ಆರ್ಮಿ ಕ್ಯಾಂಪಿನಲ್ಲಿ ವೈದ್ಯಕೀಯ ನೆರವು

ಬದುಕುಳಿದ ಯಾತ್ರಿಗಳು
ಯೋಧರಿಂದ ರಕ್ಷಣೆ

ಸಂಪರ್ಕ ಕಡಿತ
ಪ್ರವಾಹಕ್ಕೆ 1100 ರಸ್ತೆಗಳು 94 ಸೇತುವೆಗಳು ನಾಶಗೊಂಡಿವೆ

ತಾತ್ಕಾಲಿಕ ಚಿಕಿತ್ಸೆ
ಯಾತ್ರಿಗಳಿಗೆ ಆರ್ಮಿ ಕ್ಯಾಂಪಿನಲ್ಲಿ ವೈದ್ಯಕೀಯ ನೆರವು

ತಾತ್ಕಾಲಿಕ ಚಿಕಿತ್ಸೆ
ಯಾತ್ರಿಗಳಿಗೆ ಆರ್ಮಿ ಕ್ಯಾಂಪಿನಲ್ಲಿ ವೈದ್ಯಕೀಯ ನೆರವು

ಆಹಾರ ವ್ಯವಸ್ಥೆ
ಯೋಧರಿಂದ ಆಹಾರ ವ್ಯವಸ್ಥೆ

ಕೇದಾರನಾಥ ದೇಗುಲ
ಜಲಪ್ರಳಯದ ನಂತರ ಕೇದಾರನಾಥ ದೇಗುಲದ ಪರಿಸ್ಥಿತಿ ನೋಡಿ ಹೇಗಿದೆ. ದೇಗುಲ ಸುತ್ತಾ ಮುತ್ತಾ 6 ಅಡಿ ಕೆಸರಿನ ಮಣ್ಣು ತುಂಬಿದೆ. ಕೆಸರಿನ ತುಂಬಾ ಶವಗಳು ಸೇರಿರುವ ಸಾಧ್ಯತೆಯಿದೆ.

ಯಾತ್ರಿಗಳ ಗುಂಪು
ಯಾತ್ರಿಗಳ ಗುಂಪು

ಬದುಕುಳಿದ ಪಾಪು
ಯೋಧರಿಂದ ಯಾತ್ರಿಗಳ ರಕ್ಷಣೆ












Click it and Unblock the Notifications