ನಿತೀಶ್ ಕುಮಾರ್ ತೇರೆಳೆಯಲು ನಾಲ್ಕು ಮಂದಿ ಸಾಕಿತ್ತು

ಬಿಜೆಪಿ ಸಖ್ಯ ಬಿಟ್ಟು ತನ್ನತ್ತ ಕೈಚಾಚಿದ್ದ ಜೆಡಿಯುಗೆ ಕಾಂಗ್ರೆಸ್ ನೆರವಿನ ಹಸ್ತ ನೀಡಿದೆ. ಜತೆಗೆ ಏಕಮೇವ ಸಿಪಿಎಂ ಸದಸ್ಯ ಮತ್ತು ಮೂವರು ಪಕ್ಷೇತರರು ನಿತೀಶ್ ಕುಮಾರ್ ಸರಕಾರಕ್ಕೆ ಜೈ ಎಂದಿದ್ದಾರೆ. ಹಾಗಾಗಿ ನಿತೀಶ್ ಕುಮಾರ್ ಸರಳ ಬಹುಮತ ಸಾಧಿಸಿದ್ದಾರೆ.
ಬೆಳಗಿನ ಸುದ್ದಿ: ಒಬ್ಬ ನರೇಂದ್ರ ಮೋದಿಯನ್ನು ಸಹಿಸಿಕೊಳ್ಳಲಾಗದೆ ಮೈಯೆಲ್ಲಾ ಪರಚಿಕೊಂಡು ಬಿಜೆಪಿ ಜತೆಗಿನ 17 ವರ್ಷಗಳ ಸುದೀರ್ಘ ಬಾಂಧವ್ಯಕ್ಕೆ ತೆರೆ ಎಳೆದ ಜೆಡಿಯು ನಾಯಕ, ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರ್ ಇಂದು ವಿಧಾನಸಭೆಯಲ್ಲಿ ವಿಶ್ವಾಮತ ಯಾಚಿಸಲಿದ್ದಾರೆ.
ಆದರೆ ಜೆಡಿಯು ಸರಕಾರದ ತೇರನೆಳೆಯಲು ಕೇವಲ ನಾಲ್ಕು ಮಂದಿ ಸಾಕಾಗಿದ್ದು, ನಿತೀಶ್ ಕುಮಾರ್ ಇಂದಿನ ಪರೀಕ್ಷೆಯಲ್ಲಿ ಸುಲಲಿತವಾಗಿ ತೇರ್ಗಡೆಯಾಗಲಿದ್ದಾರೆ. ಆದರೆ ಆ ತೇರು ಭವಿಷ್ಯದಲ್ಲಿ ಯಾವ ಹಾದಿ ಹಿಡಿಯಲಿದೆ ಎಂಬುದಷ್ಟೇ ಕುತೂಹಲದ ಸಂಗತಿ.
ಎನ್‌ಡಿಎ ಮೈತ್ರಿಕೂಟದಿಂದ ಜೆಡಿಯು ಹೊರಬಂದ ಬಳಿಕ ನಿತೀಶ್ ಕುಮಾರ್ ನೇತೃತ್ವದ ಬಿಹಾರ ಸರಕಾರ ಅಲ್ಪಮತಕ್ಕೆ ಕುಸಿದಿದೆ. 243 ಸದಸ್ಯ ಬಲದ ಬಿಹಾರ ವಿಧಾನಸಭೆಯಲ್ಲಿ 118 ಸ್ಥಾನಗಳನ್ನು ಹೊಂದಿರುವ ನಿತೀಶ್ ಕುಮಾರ್ ನಾಯಕತ್ವದ ಜೆಡಿಯು ಸರಳ ಬಹುಮತ ಗಳಿಸುವ ಸಾಧ್ಯತೆ ನಿಚ್ಚಳವಾಗಿದೆ.
ಈಗಾಗಲೇ ನಿತೀಶ್ ಪರ ವಾಲಿರುವ ಕಾಂಗ್ರೆಸ್ ಮತ್ತು ಒಬ್ಬೇ ಒಬ್ಬ ಸದಸ್ಯ ಬಲದ ಸಿಪಿಐ ವಿಧಾಸನಭೆಗೆ ಇಂದು ಗೈರುಹಾಜರಾದಲ್ಲಿ ಬಹುಮತಕ್ಕೆ 120 ಸ್ಥಾನಗಳಷ್ಟೇ ಸಾಕು. ಬಿಹಾರದ ವಿಧಾನಸಭೆಯಲ್ಲಿ ಪಕ್ಷಗಳ ಲೆಕ್ಕಾಚಾರ ಹೀಗಿದೆ:
ಒಟ್ಟು ಸದಸ್ಯರು: 243
ಬಹುಮತಕ್ಕೆ ಬೇಕಿರುವುದು: 122 ಸದಸ್ಯರು
ಜೆಡಿಯು: 118, ಪಕ್ಷೇತರರು: 6, ಕಾಂಗ್ರೆಸ್: 4, ಸಿಪಿಐ: 1
ಬಿಜೆಪಿ - 91, ಆರ್‌ಜೆಡಿ - 22, ಎಲ್‌ಜೆಪಿ: 1












Click it and Unblock the Notifications