ಶಾಲಾ ವಾಹನಗಳ ಮುಷ್ಕರ, ಮಕ್ಕಳ ಪರದಾಟ

school bus
ಬೆಂಗಳೂರು, ಜೂ.19 : ಸರ್ಕಾರದ ಮಾರ್ಗಸೂಚಿಗಳನ್ನು ಪಾಲಿಸುವ ಸಂಬಂಧ ಖಾಸಗಿ ಶಾಲಾ ವಾಹನಗಳ ಮಾಲೀಕರ ಸಂಘ ಮತ್ತು ಪೊಲೀಸರ ನಡುವಿನ ಮಾತುಕತೆ ಮುರಿದು ಬಿದ್ದಿದ್ದು, ಶಾಲಾ ವಾಹನಗಳು ಮಾಲೀಕರು ಪ್ರತಿಭಟನೆ ಆರಂಭಿಸಿದ್ದಾರೆ. ಇದರಿಂದಾಗಿ ಶಾಲೆಗೆ ತೆರಳುವ ವಿದ್ಯಾರ್ಥಿಗಳು ಪರದಾಡುವಂತಾಗಿದೆ.

ಬುಧವಾರದಿಂದ ಮುಷ್ಕರ ಆರಂಭಿಸಿರುವ ಖಾಸಗಿ ಶಾಲೆಗಳ ಕ್ಯಾಬ್, ಆಟೋ ಮಾಲೀಕರ ಸಂಘ, ಮೂರುದಿನಗಳ ಕಾಲ ಮುಷ್ಕರ ನಡೆವುದಾಗಿ ಹೇಳಿದ್ದಾರೆ. ಇದರಿಂದಾಗಿ ನಗರದಲ್ಲಿ ಶಾಲೆಗೆ ತೆರಳುವ ಮಕ್ಕಳು ತೊಂದರೆ ಅನುಭವಿಸಿದರು.

ಮಕ್ಕಳನ್ನು ಪೋಷಕರು ಖಾಸಗಿ ವಾಹನಗಳಲ್ಲಿ ಶಾಲೆಗೆ ಕರೆತಂದಿದ್ದರಿಂದ ಶಾಲೆಗ ಸುತ್ತಮುತ್ತಾ ಟ್ರಾಫಿಕ್ ಜಾಮ್ ಉಂಟಾಗಿತ್ತು. ಕೆಲವು ಮಕ್ಕಳು ಬಿಎಂಟಿಸಿ ಬಸ್ ಸಹಾಯದಿಂದ ಶಾಲೆಗೆ ತಡವಾಗಿ ತಲುಪಿದರು. ಇನ್ನೂ ಎರಡು ದಿನ ಮುಷ್ಕರ ಮುಂದುವರೆಯಲಿದೆ.

ಸಂಧಾನ ವಿಫಲ : ಖಾಸಗಿ ಶಾಲೆಗಳ ವಾಹನ ಚಾಲಕರೊಂದಿಗೆ ಮಂಗಳವಾರ ಪೊಲೀಸ್ ಆಯುಕ್ತ ಜ್ಯೋತಿ ಪ್ರಕಾಶ್ ಮಿರ್ಜಿ ಮತ್ತು ಹೆಚ್ಚುವರಿ ಪೊಲೀಸ್ ಆಯುಕ್ತ ಡಾ.ಎಂ.ಎ.ಸಲೀಂ ನಡೆಸಿದ ಸಂಧಾನ ಮಾತುಕತೆ ಮುರಿದು ಬಿದ್ದಿದೆ.

ಸುಪ್ರೀಂಕೋರ್ಟ್ ನಿರ್ದೇಶನದಂತೆ ಮಾರ್ಗಸೂಚಿಗಳನ್ನು ಸರ್ಕಾರ ಸಿದ್ಧಪಡಿಸಿದೆ ಮತ್ತು ಮೇ 1ರಿಂದ ಅದನ್ನು ಕಡ್ಡಾಯವಾಗಿ ಜಾರಿಗೆ ತಂದಿದೆ ಎಂಬ ಪೊಲೀಸರ ವಾದವನ್ನು ಚಾಲಕರು ಒಪ್ಪುತ್ತಿಲ್ಲ. ಆದ್ದರಿಂದ ಪ್ರತಿಭಟನೆ ಪ್ರಾರಂಭವಾಗಿದೆ. (ಶಾಲಾ ಮಕ್ಕಳ ಸುರಕ್ಷತೆಗೆ ಪೊಲೀಸರ ಮಾರ್ಗದರ್ಶಿ)

ಸರ್ಕಾರ ನಿಯಮಾವಳಿ ಉಲ್ಲಂಘಿಸಿದ ಸುಮಾರು 264 ಶಾಲಾ ವಾಹನಗಳ ವಿರುದ್ಧ ಸಂಚಾರ ಪೊಲೀಸರು ಪ್ರಕರಣಗಳನ್ನು ದಾಖಲಿಸಿದ್ದಾರೆ. ಇದು ಚಾಲಕರ ಸಿಟ್ಟಿಗೆ ಕಾರಣವಾಗಿದ್ದು, ಸರ್ಕಾರ ಕೂಡಲೇ ಮಧ್ಯಪ್ರವೇಶಿಸಬೇಕು ಎಂದು ಆಗ್ರಹಿಸಿ, ಪ್ರತಿಭಟನೆ ಪ್ರಾರಂಭಿಸಿದ್ದಾರೆ.

ಇನ್ನೂ ಎರಡು ದಿನಗಳ ಕಾಲ ಪ್ರತಿಭಟನೆ ಮುಂದುವರೆಯಲಿದ್ದು, ಮಕ್ಕಳು ಶಾಲೆಗೆ ತಲುಪುವುದು ಕಷ್ಟವಾಗಬಹುದು. ಬಿಎಂಟಿಸಿ ಬಸ್ ಗಳ ವ್ಯವಸ್ಥೆ ಮಾಡುವುದಾಗಿ ಸಂಚಾರ ಪೊಲೀಸರು ಹೇಳಿದ್ದರೂ, ಪ್ರತಿ ಖಾಸಗಿ ಶಾಲೆಗೆ ಬಸ್ ಒದಗಿಸುವುದು ಸಾಧ್ಯವಿಲ್ಲ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+