ಸಿಎಂ ಸಿದ್ದರಾಮಯ್ಯ ಕನ್ನಡ ಪ್ರೇಮ!

siddu
ಬೆಂಗಳೂರು, ಜೂ.18 : ಅಧಿಕಾರಕ್ಕೆ ಬಂದ ಕೆಲವು ದಿನಗಳಲ್ಲಿ ಜಿಲ್ಲಾಧಿಕಾರಿಗಳಿಗೆ ಕನ್ನಡ ಪಾಠ ಮಾಡಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ, ಕನ್ನಡ ಕಲಿಕೆಗಾಗಿ ಪ್ರತ್ಯೇಕ ಸಂಸ್ಥೆ ಸ್ಥಾಪಿಸುವ ಬಗ್ಗೆ ಚಿಂತನೆ ನಡೆಸಿದ್ದಾರೆ. ಈ ಕುರಿತಾದ ಕೆಲಸಗಳು ಈಗಾಗಲೇ ಪ್ರಾರಂಭವಾಗಿವೆ.

ಕನ್ನಡ ಕಲಿಕೆಗಾಗಿ ಪ್ರತ್ಯೇಕ ಸಂಸ್ಥೆ ಸ್ಥಾಪಿಸಿ ಅದರ ಮೂಲಕ ಕನ್ನಡ ಭಾಷೆ ಬೆಳವಣಿಗೆಗೆ ಅವಕಾಶ ಕಲ್ಪಿಸುವುದು ಮತ್ತು ಶಾಸ್ತ್ರೀಯ ಭಾಷೆಗಾಗಿ ಬರುವ ಅನುದಾನವನ್ನು ಸರಿಯಾಗಿ ಖರ್ಚುಮಾಡುವಂತೆ ಮಾಡುವುದು ಸಿದ್ದರಾಮಯ್ಯ ಅವರ ಉದ್ದೇಶವಾಗಿದೆ.

ಸದ್ಯ ಮಾನವ ಸಂಪನ್ಮೂಲ ಅಭಿವೃದ್ಧಿ ಇಲಾಖೆ ವ್ಯಾಪ್ತಿಯಲ್ಲಿ ಭಾರತೀಯ ಭಾಷೆಗಳ ಕೇಂದ್ರೀಯ ಸಂಸ್ಥೆ (ಸಿಐಐಎಲ್) ಮೈಸೂರಿನಲ್ಲಿದೆ. ಇದನ್ನು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವ್ಯಾಪ್ತಿಗೆ ತಂದು ಕನ್ನಡ ಕಲಿಕೆಗಾಗಿ ಪ್ರತ್ಯೇಕ ಸಂಸ್ಥೆ ಸ್ಥಾಪಿಸಲು ಸಿಎಂ ಆಸಕ್ತಿ ತೋರಿದ್ದಾರೆ.

ಕನ್ನಡ ಮತ್ತು ಸಂಸ್ಕತಿ ಇಲಾಖೆ ನಿರ್ದೇಶಕರಾದ ಬಸವರಾಜ್ ಅವರಿಗೆ ಈ ಕುರಿತು ಯೋಜನೆ ರೂಪಿಸುವಂತೆ ಸಿದ್ದರಾಮಯ್ಯ ಆದೇಶ ನೀಡಿದ್ದಾರೆ. ಈ ಯೋಜನೆ ಜಾರಿಯಾದರೆ ಶಾಸ್ತ್ರೀಯ ಭಾಷೆ ಕನ್ನಡ ಕಲಿಕೆಗಾಗಿಯೇ ಪತ್ಯೇಕ ಸಂಸ್ಥೆ ತಲೆ ಎತ್ತಲಿದೆ.

ಪ್ರತ್ಯೇಕ ಸಂಸ್ಥೆ ಏಕೆ : ಸಿಐಐಎಲ್ ಭಾರತದ ವಿವಿಧ ಭಾಷೆಗಳ ಕುರಿತು ಅಧ್ಯಯನ, ಸಂಶೋಧನೆ ನಡೆಸುತ್ತಿರುತ್ತದೆ. ಕನ್ನಡ ಭಾಷೆಗಾಗಿ ಪತ್ಯೇಕ ಸಂಶೋಧನೆ ನಡೆಸುವುದು ಕಷ್ಟವಾಗುತ್ತದೆ. ಆದ್ದರಿಂದ ಪತ್ಯೇಕ ಸಂಸ್ಥೆ ಸ್ಥಾಪಿಸಿದರೆ, ಕೇವಲ ಕನ್ನಡದ ಬಗೆಗಿನ ಕೆಲಸಗಳನ್ನು ಅಲ್ಲಿ ಮಾಡಲು ಸಾಧ್ಯವಾಗುತ್ತದೆ.

ಅಗತ್ಯವೂ ಹೌದು : ಕರ್ನಾಟಕ ಮತ್ತು ತೆಲಗು ಭಾಷೆಗಳು 2008ರಲ್ಲಿ ಕೇಂದ್ರ ಸರ್ಕಾರದಿಂದ ಶಾಸ್ತ್ರೀಯ ಭಾಷೆಯ ಸ್ಥಾನಮಾನ ಪಡೆದಿವೆ. ಅದರ ಅನ್ವಯ ಕನ್ನಡ ಕಲಿಕೆಗಾಗಿ ಪತ್ಯೇಕ ಸಂಸ್ಥೆ ಸ್ಥಾಪಿಸಬೇಕಾಗಿದೆ. ಆಂಧ್ರ ಪ್ರದೇಶ ಮತ್ತು ತಮಿಳುನಾಡು ರಾಜ್ಯಗಳು ಈಗಾಗಲೇ ಪತ್ಯೇಕ ಸಂಸ್ಥೆ ಸ್ಥಾಪಿಸಿ ಕಾರ್ಯನಿರತವಾಗಿದೆ.

ತನಿಖೆಗೆ ಆದೇಶ : ಪ್ರತಿ ವಿಶ್ವವಿದ್ಯಾಲಯಗಳಿಗೆ ಕನ್ನಡ ಕಲಿಕೆಗಾಗಿ ಸರ್ಕಾರ 1 ಕೋಟಿ ರೂ.ಬಿಡುಗಡೆ ಮಾಡುತ್ತದೆ ವಿಶ್ವವಿದ್ಯಾಲಯಗಳು ಇದನ್ನು ಹೇಗೆ ಬಳಸಿಕೊಳ್ಳುತ್ತದೆ ಎಂದು ತನಿಖೆ ನಡೆಸಲಾಗುವುದು ಎಂದು ಸಿದ್ದರಾಮಯ್ಯ ಹೇಳಿದ್ದಾರೆ. (ಜಿಲ್ಲಾಧಿಕಾರಿಗಳಿಗೆ ಸಿದ್ದರಾಮಯ್ಯ ಕನ್ನಡ ಪಾಠ)

ಜಿಲ್ಲಾಧಿಕಾರಿಗಳಿಗೆ ಮೊದಲು ಕನ್ನಡ ಪಾಠ ಮಾಡಿದ್ದರು. ರಾಜ್ಯದಲ್ಲಿ ಕನ್ನಡ ಆಡಳಿತ ಭಾಷೆ ಆಗಿರಬೇಕು. ಕಡತಗಳನ್ನು ಇಂಗ್ಲಿಷ್ ನಲ್ಲಿ ಕಳುಹಿಸಿದರೆ, ವಾಪಸ್ ಕಳುಹಿಸುವುದಾಗಿ ಸಿದ್ದರಾಮಯ್ಯ ಗುಡುಗಿದ್ದರು. ಸದ್ಯ ಕನ್ನಡ ಭಾಷೆಯ ಅಧ್ಯಯನಕ್ಕಾಗಿ ಸಂಸ್ಥೆ ಸ್ಥಾಪಿಸುವ ಉತ್ಸಾಹದಲ್ಲಿದ್ದಾರೆ. ಸಿದ್ದು ಕನ್ನಡ ಪೇಮಕ್ಕೆ ಹೀಗೆ ಮುಂದುವರೆಯಲಿ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+