ಎಪಿಎಲ್ ಕಾರ್ಡ್‌ದಾರರ ಬಾಯಿಗೆ ಸಕ್ಕರೆ!

ಬಡತನ ರೇಖೆಗಿಂತ ಮೇಲಿರುವ ಎಪಿಎಲ್ ಕಾರ್ಡ್ ಹೊಂದಿರುವ ಸಾರ್ವಜನಿಕರಿಗೆ ಅಕ್ಕಿ ನೀಡದಿರಲು ಸರ್ಕಾರ ನಿರ್ಧರಿಸಿದೆ. ಈ ಯೋಜನೆ ಜುಲೈನಿಂದಲೇ ಜಾರಿಯಾಗಲಿದೆ. ಇದರ ಬದಲು ಕಾರ್ಡ್ ದಾರರಿಗೆ ಸಕ್ಕರೆ ಮತ್ತು ಗೋಧಿ ವಿತರಿಸಲಾಗುವುದು ಎಂದರು.
ಬೆಂಗಳೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಸಚಿವರು, ಎಪಿಎಲ್ ಕಾರ್ಡ್ ಹೊಂದಿರುವ ಜನರು ಅಕ್ಕಿಯನ್ನು ಖರೀದಿಸುತ್ತಿರಲಿಲ್ಲ. ಆದ್ದರಿಂದ ಅಕ್ಕಿ ಕಾಳಸಂತೆಯಲ್ಲಿ ಮಾರಾಟವಾಗುತ್ತಿತ್ತು. ಇದನ್ನು ತಡೆಯಲು ಈ ಕ್ರಮ ಕೈಗೊಳ್ಳಲಾಗಿದೆ ಎಂದು ಸಮರ್ಥನೆ ನೀಡಿದರು.
ಎಪಿಎಲ್ ಆದ್ದರಿಂದ ಕಾರ್ಡ್ ದಾರರಿಗೆ ಅಕ್ಕಿ ಕೊಡುವುದನ್ನು ಜುಲೈನಿಂದ ಸ್ಥಗಿತಗೊಳಿಸಲಾಗುವುದು. ಅದರ ಬದಲು ಸಕ್ಕರೆ ಮತ್ತು ಗೋಧಿ ನೀಡಲು ಸರ್ಕಾರ ಚಿಂತನೆ ನಡೆಸಿದೆ ಎಂದು ದಿನೇಶ್ ಗುಂಡೂರಾವ್ ಹೇಳಿದರು. ಎಪಿಎಲ್ ಕಾರ್ಡ್ ದಾರರಿಗೆ ನೀಡುತ್ತಿದ್ದ ಅಕ್ಕಿಯನ್ನು ಬಿಪಿಎಲ್ ಕಾರ್ಡ್ ಹೊಂದಿರುವ ಜನರಿಗೆ ನೀಡಲಾಗುವುದು ಎಂದರು.
ಎಪಿಎಲ್ ಕಾರ್ಡು ಹೊಂದಿರುವ ಜನರು ಅಡುಗೆ ಅನಿಲ ಸಂಪರ್ಕ ಮತ್ತು ವಿಳಾಸ ದೃಢೀಕರಣಕ್ಕೆ ಕಾರ್ಡ್ ಬಳಸಬಹುದು. ಕಾರ್ಡ್ ದಾರರಿಗೆ ಪಡಿತರ ವಿತರಣೆ ಮಾತ್ರ ನಿಲ್ಲಿಸಲಾಗಿದೆ, ಶೀಘ್ರದಲ್ಲೇ ಸಕ್ಕರೆ ಮತ್ತು ಗೋಧಿ ನೀಡುವ ಯೋಜನೆ ಆರಂಭವಾಗಲಿದೆ ಎಂದು ವಿವರಣೆ ನೀಡಿದರು.
ಬಿಪಿಎಲ್ ಕಾರ್ಡ್ ವಿತರಣೆ : ರಾಜ್ಯದಲ್ಲಿ ಒಂದು ಕೋಟಿ ಫಲಾನುಭವಿಗಳಿಗೆ ಬಿಪಿಎಲ್ ಕಾರ್ಡ್ ಹಂಚಿಕೆ ಮಾಡಲಾಗುವುದು. ಕಾರ್ಡ್ ಹಂಚಿಕೆಯಲ್ಲಿ ಯಾವುದೇ ಗೊಂದಲವಾಗದಂತೆ ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗಿದೆ. ಶೀಘ್ರದಲ್ಲೇ ಅರ್ಹರಿಗೆ ಕಾರ್ಡುಗಳು ಲಭ್ಯವಾಗಲಿದೆ ಎಂದು ಸಚಿವರು ಹೇಳಿದರು.
ಬಿಜೆಪಿ ಮೇಲೆ ಸಿದ್ದು ಗೂಬೆ : ಬಡತನ ರೇಖೆಗಿಂತ ಮೇಲಿರುವ ಕುಟುಂಬ ವರ್ಗದ (ಎಪಿಎಲ್) ಪಡಿತರ ಚೀಟಿದಾರರಿಗೆ ಆಹಾರ ಸಾಮಗ್ರಿ ವಿತರಿಸದಿರುವ ನಿರ್ಧಾರ ಬಿಜೆಪಿ ಸರ್ಕಾರದ್ದು, ನಾವು ಅದನ್ನು ಮುಂದುವರೆಸುತ್ತಿದ್ದೇನೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.
ಎಪಿಎಲ್ ಪಡಿತರ ಚೀಟಿದಾರರು ಆಹಾರ ಸಾಮಗ್ರಿಗಳನ್ನು ಖರೀದಿಸುತ್ತಿರಲಿಲ್ಲ. ಹೀಗಾಗಿ ಹಿಂದಿನ ಸರ್ಕಾರ ಈ ವ್ಯವಸ್ಥೆಯನ್ನು ರದ್ದು ಮಾಡಿತ್ತು. ನಾವು ಈಗ ಹೊಸದಾಗಿ ಈ ಯೋಜನೆಯನ್ನು ರದ್ದು ಮಾಡಿಲ್ಲ ಎಂದು ಸಿಎಂ ಸ್ಪಷ್ಟಪಡಿಸಿದರು.












Click it and Unblock the Notifications