ಇತಿಹಾಸದ ಗುಂಡಿಗೆ ಬಿದ್ದ ಅಡ್ವಾಣಿ-ನಿತೀಶ್ ಜೋಡಿ

ರಾಷ್ಟ್ರೀಯ ಪ್ರಜಾತಾಂತ್ರಿಕ ಒಕ್ಕೂಟದ (NDA) ಇಬ್ಬರು ಪ್ರಭಾವಿ ವ್ಯಕ್ತಿಗಳಾದ ಎಲ್ ಕೆ ಅಡ್ವಾಣಿ ಮತ್ತು ನಿತೀಶ್ ಕುಮಾರ್ ಅವರ ಬಗ್ಗೆಯೇ ಇಲ್ಲಿ ಚರ್ಚಿಸುತ್ತಿರುವುದು. ನಂಬಲಸದಳ ರೀತಿಯಲ್ಲಿ ಇವರಿಬ್ಬರೂ ತಮ್ಮ ಗೋರಿಯನ್ನು ತಾವೇ ತೋಡಿಕೊಂಡುಬಿಟ್ಟರು. ತಾವು ಪ್ರತಿನಿಧಿಸುವ ಪಕ್ಷಗಳಿಗೂ ಇವರು ಮಾರಕವಾದರು. ಅದೂ ಲೋಕಸಭೆ ಚುನಾವಣೆ ಈಗಲೀ ಆಗಲೋ ಎನ್ನುವ ಪರಿಸ್ಥಿತಿಯಿರುವಾಗ ಇಂತಹ ನಾಟಕೀಯ ಬೆಳವಣಿಗೆ ನಡೆದುಹೋಯಿತು.
ಆಷಾಢಭೂತಿತನವನ್ನು ಢಾಳಾಗಿ ಪ್ರದರ್ಶಿಸುತ್ತಾ ನೈತಿಕತೆಯ ನಿಜವಾದ ಪೋಷಕರು ತಾವೇ ಎಂದು ಬಿಂಬಿಸಿದ ಈ ನಾಯಕ ಮಹಾಶಯರು ತಮ್ಮ ನಿರ್ಗಮನವನ್ನು ಬೇಗನೇ ಘೋಷಿಸಿಕೊಂಡರು.

ಅಡ್ವಾಣಿ- ನಿತೀಶ್ ಜೋಡಿಯ ಆಶ್ಚರ್ಯಕರ ಚಾಲ್:
ಈ ಜೋಡಿ ನೇರವಾಗಿ ಒಬ್ಬೇ ವ್ಯಕ್ತಿಯ ಮೇಲೆ (ನರೇಂದ್ರ ಮೋದಿ) ಮುಗಿಬಿದ್ದರು. ಅದೂ ಆ ವ್ಯಕ್ತಿ (ಮೋದಿ) ಬಿಜೆಪಿ ಪಕ್ಷವನ್ನು ಮುನ್ನಡೆಸುವ ಹೊಣೆಗಾರಿಕೆ ಹೊತ್ತ ಸಂದರ್ಭದಲ್ಲಿ. 86 ವರ್ಷದ ಅಡ್ವಾಣಿ ಅವರು ಆ ವ್ಯಕ್ತಿಯ (ಮೋದಿ) ವಿರುದ್ಧ ತಮ್ಮ ಅಸಮಾಧಾನವನ್ನು ಹೊರಹಾಕಲು ಮತ್ತು ಆರಂಭದಲ್ಲಿ ಆ ವ್ಯಕ್ತಿಗೆ (ಮೋದಿ) ಸಾರಥ್ಯ ವಹಿಸಿದಾಗ ಅದು ಆ ಪಕ್ಷದ ಆಂತರಿಕ ವಿಷಯ ಎಂದು ಪ್ರತಿಕ್ರಿಯಿಸಿದ್ದ ನಿತೀಶ್, ಒಂದೇ ವಾರದಲ್ಲಿ 17 ವರ್ಷಗಳ ಮೈತ್ರಿಗೆ ಮಂಗಳಹಾಡಿಬಿಟ್ಟರು.

ಅಡ್ವಾಣಿ- ನಿತೀಶ್ ಜೋಡಿಯ ರಾಜಕೀಯ ಆತ್ಮಹತ್ಯೆ:
'ಮೋದಿ ವಿರೋಧಿ' ಜೋಡಿ ಏನನ್ನು ಸಾಧಿಸಲು ಹವಣಿಸಿದರು? ಮಾಧ್ಯಮಗಳಲ್ಲಿ ಒಂದಷ್ಟು ಮಿಂಚಿದ್ದು ಬಿಟ್ಟರೆ ಬೇರೆ ಏನನ್ನುತಾನೆ ಇವರು ಸಾಧಿಸಿದರು? 2002ರಲ್ಲಿ ಅಡ್ವಾಣಿ ಅವರು ಮಾಜಿ ಪ್ರಧಾನಿ ಮತ್ತು ಗೃಹ ಸಚಿವರಾಗಿದ್ದವರು ಮತ್ತು ನಿತೀಶ್ ರೈಲ್ವೆ ಸಚಿವರಾಗಿದ್ದವರು! ಅವರೇಕೆ ಅಂದಿನ ಹತ್ಯಾಕಾಂಡಗಳ ಬಗ್ಗೆ ಮೌನ ವಹಿಸಿದ್ದರು.
ಮೋದಿ ಜನರ ಮಧ್ಯೆ ದ್ವೇಷ ಬೀಜ ಬಿತ್ತುವ ಮನೋಸ್ಥಿತಿಯಲ್ಲಿದ್ದಾರೆ ಮತ್ತು ದೇಶವನ್ನು ಹಿಂಸಾಚಾರದತ್ತ ಕೊಂಡುಯ್ಯುತ್ತಿದ್ದಾರೆ ಎಂದು ಅಡ್ವಾಣಿ- ನಿತೀಶ್ ಜೋಡಿಗೆ ಅನಿಸಿದ್ದರೆ 2002ರಲ್ಲಿ ಅವರಿಬ್ಬರೂ ತುಟಿಪಿಟಿಕ್ಕನ್ನದೆ ಗಾಢ ಮೌನ್ರತಾಚರಣೆ ಮಾಡಿದ್ದೇಕೆ? ಸರಕಾರದಲ್ಲಿ ಅತ್ಯುಚ್ಛ ಸ್ಥಾನ ಅಲಂಕರಿಸಿದ್ದರೂ 2003ರಲ್ಲಿ ಸಬರಮತಿ ಎಕ್ಸ್ ಪ್ರೆಸ್ ರೈಲಿನಲ್ಲಿ ಹತ್ಯಾಕಾಂಡ ನಡೆದಾಗ ಯಾವುದೇ ಕ್ರಮ ಕೈಗೊಳ್ಳಲೂ ಅವರು ಮುಂದಾಗಲಿಲ್ಲ, ಏಕೆ?

ಸಮರ್ಥನೆಯ ವಾದ ಸರಣಿ, ಆಶಯ ಏನಾಯ್ತು?:
ಗುಜರಾತ್ ಹಿಂಸಾಚಾರದ ಸಮ್ಮುಖದಲ್ಲಿ ಮೋದಿಯನ್ನು ತಕ್ಷಣ ಅಧಿಕಾರದಿಂದ ಕೊತ್ತೊಗೆಯಬೇಕು ಎಂಬ ಬೇಡಿಕೆ ತೀವ್ರವಾದಾಗ ಅದನ್ನು ತಡೆದಿದ್ದು ನಾನೇ. ಏಕೆಂದರೆ ಮೋದಿಯನ್ನು ಅಧಿಕಾರದಿಂದ ಕೆಳಗಿಳಿಸಿದರೆ ಎಲ್ಲವೂ ಸರಿಹೋಗಿಬಿಡುತ್ತದೆ ಎಂಬುದರಲ್ಲಿ ನನಗೆ ನಂಬಿಕೆಯಿರಲಿಲ್ಲ. ಬದಲಿಗೆ ಸಮಸ್ಯೆಗೆ ಬೇರೆಯದೇ ಪರಿಹಾರ ಕಂಡುಕೊಳ್ಳಬೇಕು ಎಂಬುದು ನನ್ನ ವಾದವಾಗಿತ್ತು ಎಂದು ಅಡ್ವಾಣಿ ಸಾಹೇಬರು My Country My Life ಎಂಬ ಆತ್ಮಚರಿತ್ರೆಯಲ್ಲಿ (ಪುಟಗಳು 758-759) ಬರೆದುಕೊಂಡಿದ್ದಾರೆ. ಏನಿದರ ಅರ್ಥ? ಅಂದಿನ ಆ ಆಶಯಕ್ಕೆ ವಿರುದ್ಧವಾಗಿ ಅವರು ಇಂದು ಹೀಗೆ ನಡೆದುಕೊಳ್ಳುವುದು ಉಚಿತವೇ?
ಮೋದಿ ಮತ್ತು ಅಂದಿನ ಗುಜರಾತ್ ಪೊಲೀಸರ ವಿರುದ್ಧ ನಿರಂತರ ಅಪಪ್ರಚಾರ ನಡೆಯುತ್ತಿದೆ ಎಂಬುದನ್ನು ನಾನು ಬಲ್ಲೆ. ವಾಸ್ತವವಾಗಿ ಹಿಂಸಾಚಾರದ ವೇಳೆ ಅವರು ಅನೇಕ ಮುಸ್ಲಿಮರನ್ನು ಬಚಾವು ಮಾಡಿದ್ದಾರೆ ಎಂದು ಮೋದಿ ಹೇಳಿಕೊಂಡಿದ್ದಾರೆ. ಅಷ್ಟೇ ಅಲ್ಲ. ತಮ್ಮ ವಾದ ಸರಣಿಯನ್ನು ಸಮರ್ಥಿಸಿಕೊಳ್ಳುವ ಧಾಟಿಯಲ್ಲಿ ತಾನು ಅಂದು ಮೋದಿಯನ್ನು ಸಮರ್ಥಿಸಿಕೊಂಡಿದ್ದು ಉಚಿತವಾಗಿಯೇ ಇದೆ. ನೋಡಿ ಆನಂತರ 2002 ರಿಂದೀಚೆಗೆ ಗುಜರಾತಿನಲ್ಲಿ ಒಂದೇ ಒಂದು ಹಿಂಸಾಚಾರ ನಡೆದಿಲ್ಲ. ಬದಲಿಗೆ ಮೋದಿ ನೇತೃತ್ವದಲ್ಲಿ ಸಾಮಾಜಿಕ-ಆರ್ಥಿಕ ಬೆಳವಣಿಗೆ ಅದ್ಭುತವಾಗಿದೆ.

ಮೋದಿ ರಾಜೀನಾಮೆ ನೀಡಬಯಸಿದ್ದರು, ಆದರೆ
ಹಿಂಸಾಚಾರಕ್ಕೆ ಹೊಣೆಹೊತ್ತು ಮುಖ್ಯಮಂತ್ರಿ ಮೋದಿ ಅವರೇನೋ ರಾಜೀನಾಮೆ ನೀಡಬಯಸಿದ್ದರು. ಗೋವಾದಲ್ಲಿ ಆಗ ನಡೆದ ಬಿಜೆಪಿ ಕಾರ್ಯಕಾರಿಣಿಯಲ್ಲಿಯೇ ಮೋದಿ ಅದನ್ನು ಸಾರ್ವಜನಿಕವಾಗಿಯೂ ತಿಳಿಸಿದರು. ಆದರೆ ಪಕ್ಷ ಅದಕ್ಕೆ ತಡೆಯೊಡ್ಡಿತು. ಹಿರಿಯ ನಾಯಕರು ಅದನ್ನು ಸುತರಾಂ ಒಪ್ಪಲಿಲ್ಲ. ದಿವಂಗತ ಪ್ರಮೋದ್ ಮಹಾಜನ್ ಅವರಂತೂ ರಾಜೀನಾಮೆಯ ಪ್ರಶ್ನೆಯೇ ಉದ್ಭವಿಸುವುದಿಲ್ಲ ಅಂದುಬಿಟ್ಟರು' ಎಂದು ಮೋದಿ ತಮ್ಮ ಆತ್ಮಚರಿತ್ರೆಯಲ್ಲಿ ದಾಖಲಿಸಿದ್ದಾರೆ. ಪಕ್ಷ ಅಂದು ಸಮಂಜಸ ನಿರ್ಧಾರ ತೆಗೆದುಕೊಂಡಿತು ಎಂಬುದು ಕಾಲಾಂತರದಲ್ಲಿ ಸಾಬೀತಾಯಿತು ಎಂದೂ ಅಡ್ವಾಣಿ ಹರ್ಷ ವ್ಯಕ್ತಪಡಿಸಿದ್ದಾರೆ. ಹೀಗಿರುವಾಗ ಮೋದಿ ವಿರುದ್ಧ ಅಡ್ವಾಣಿ ಈಗ್ಯಾಕೆ ವರಾತ ತೆಗೆಯಬೇಕು?

ಅಡ್ವಾಣಿ ಅವರದ್ದು ವಂಚಕ ಬುದ್ಧಿಯಲ್ಲವೇ?
ನಾವು ಕಾಂಗ್ರೆಸ್ಸಿನಂತಲ್ಲ. ನಮ್ಮಲ್ಲಿ ಪ್ರಜಾತಂತ್ರ ಜೀವಂತವಾಗಿದೆ. ವಾಜಪೇಯಿ ಅಥವಾ ನನ್ನ ನಿರ್ಗಮನದ ಬಳಿಕವೂ ಪಕ್ಷದಲ್ಲಿ ನಾಯಕತ್ವ ವಹಿಸಿಕೊಳ್ಳಬಲ್ಲ ಸಮರ್ಥರ ಇದ್ದಾರೆ. ನಮ್ಮಲ್ಲಿ ನಾಯಕರಿಗೇನೂ ಕೊರತೆಯಿಲ್ಲ ಎಂದು ಷರಾ ಬರೆದಿದ್ದ ಅಡ್ವಾಣಿ ಈಗ ಮೋದಿ ಪದೋನ್ನತಿಯಿಂದ ದೃಥಿಗೆಟ್ಟವರಂತಾಗಿರುವುದೇಕೆ? ಅಷ್ಟೇ ಅಲ್ಲ ಜೆಡಿಯು ಜತೆ ಮೈತ್ರಿ ಮುರಿದುಬಿದ್ದಿರುವುದಕ್ಕೆ ಆತುರಾತುರವಾಗಿ ಮೋದಿಯನ್ನು ಪಟ್ಟಕ್ಕೇರಿಸಿದ್ದೇ ಕಾರಣ ಅಂತ ಅಂದುಬಿಟ್ಟಿದ್ದಾರೆ. ಯಾಕೆ ಹೀಗೆ ಅಡ್ವಾಣಿಯವರೇ? ಯಾಕೀ ವಂಚಕಬುದ್ಧಿ?

2002 ಹಿಂಸಾಚಾರಕ್ಕೆ ಕಾಂಗೈ ಅತಿರೇಕದ ಪ್ರತಿಕ್ರಿಯೆ:
ಹೀಗೆಂದು ಖುದ್ದು ನಿತೀಶಜೀ ಹೇಳಿದ್ದರು. ರಾಜಕೀಯ ಮೇಲುಗೈ ಸಾಧಿಸಲು ಕಾಂಗ್ರೆಸ್ ಅತಿರೇಕದಿಂದ 2002ರ ಗುಜರಾತ್ ಹಿಂಸಾಚಾರವನ್ನು ಎಳೆಯುತ್ತಿದೆ. ಸುಮ್ಮನೆ ಮೋದಿಯನ್ನು ಮೂಲೆಗೆ ದೂಡಲು ಯತ್ನಿಸುವ ಬದಲು ಹೊಸ ವಿಷಯಗಳತ್ತ ಕಾಂಗ್ರೆಸ್ ಬೆಳಕು ಚೆಲ್ಲಬೇಕು. ಅದು ಬಿಟ್ಟು ಸುಮ್ಮನೆ ಮೋದಿ ಹಿಂದೆ ಬೀಳುವುದು ಥರವಲ್ಲ ಎಂದು ಇದೇ ನಿತೀಶಜೀ ಹೇಳಿದ್ದರು. ಆದರೆ ಈಗ ಯಾಕೆ ಹೀಗೆ? ಅಷ್ಟಕ್ಕೂ ಗುಜರಾತಿನ ಜನರೇ ಮೋದಿಯನ್ನು ತಿರಸ್ಕರಿಸಿಲ್ಲ. ಸತತವಾಗಿ ಅವರನ್ನು ಗೆಲ್ಲಿಸುತ್ತಾ ಬಂದಿದ್ದಾರೆ. ಪರಿಸ್ಥಿತಿ ಹೀಗಿರುವಾಗ ಅಡ್ವಾಣಿ-ನಿತೀಶ್ ಜೋಡಿ ಹೀಗ್ಯಾಕೆ ಆಡುತ್ತಿದ್ದಾರೆ!?












Click it and Unblock the Notifications