ರಾಜ್ಯಾದ್ಯಂತ ರಾತ್ರಿಯಿಂದ 108 ಆಂಬುಲನ್ಸ್ ಸೇವೆ ಸ್ಥಗಿತ

ಇದರಿಂದಾಗಿ ರಾಜ್ಯಾದ್ಯಂತ 517 ಸಂಖ್ಯೆಯ ವಾಹನಗಳು ಮತ್ತು ಬೆಂಗಳೂರಿನಲ್ಲಿ ಇರುವ 69 ಆಂಬುಲನ್ಸ್ ವಾಹನಗಳು ಕೆಲಸವನ್ನು ಸಂಪೂರ್ಣ ಸ್ಥಗಿತಗೊಳಿಸಿವೆ. ಅವರಿಗೆ ನೀಡಲಾಗಿರುವ ಮೊಬೈಲುಗಳ ಒಳಬರುವ ಮತ್ತು ಹೊರಹೋಗುವ ಸೇವೆಯನ್ನು ಏರ್ ಟೆಲ್ ಸ್ಥಗಿತಗೊಳಿಸಿದ್ದರಿಂದ ಈ ಅಡಚಣೆ ಉಂಟಾಗಿದೆ.
ಇದರಿಂದ ಉಚಿತ 108 ಆಂಬುಲನ್ಸ್ ಸೇವೆಯಾಗಿ ಕಾದು ಕುಳಿತ ಸಹಸ್ರಾರು ಬಡ ರೋಗಿಗಳು ಸಂಕಷ್ಟಕ್ಕೀಡಾಗಿದ್ದಾರೆ. ತ್ವರಿತ ಸೇವೆ ಸಿಗದೆ ಪರದಾಡುವಂತಾಗಿದೆ. ಉಚಿತ ಆಂಬುಲನ್ಸ್ ಸೇವೆ ದೊರೆಯದಿದ್ದರಿಂದ ಹಲವಾರು ಜನರು ದುಡ್ಡು ಕೊಟ್ಟು ಖಾಸಗಿ ಆಂಬುಲನ್ಸ್ ಮುಖಾಂತರ ಆಸ್ಪತ್ರೆಗಳಿಗೆ ಹೋಗುತ್ತಿದ್ದಾರೆ.
ಆದರೆ, ಜಿವಿಕೆ ಸಂಸ್ಥೆಯ ನಾಗರಾಜ್ ಎಂಬುವವರು ಹೇಳುವುದೇನೆಂದರೆ, ಇದು ಬಿಲ್ ಪಾವತಿಸದಿದ್ದರಿಂದ ಆದ ಅಡಚಣೆಯಲ್ಲ, ಜಿವಿಕೆ ಸಂಸ್ಥೆ ಮೊಬೈಲ್ ಕರೆ ಸೇವೆಯನ್ನು ಏರ್ ಟೆಲ್ ನಿಂದ ಟಾಟಾ ಡೊಕೊಮೊಗೆ ವರ್ಗಾಯಿಸುತ್ತಿದ್ದರಿಂದ ಕರೆಗಳು ಬರುತ್ತಿಲ್ಲ. ಇದು ತಾತ್ಕಾಲಿಕ ಮಾತ್ರ, ಟಾಟಾ ಡೊಕೊಮೊ ಸೇವೆ ದೊರೆಯುತ್ತಿದ್ದಂತೆ ಆಂಬುಲನ್ಸ್ ಸೇವೆಯನ್ನು ಮುಂದುವರಿಸುವುದಾಗಿ ಹೇಳಿದ್ದಾರೆ.












Click it and Unblock the Notifications