ಚಿತ್ರಗಳಲ್ಲಿ: ಮಿಸ್ ಯುಎಸ್ಎ, ಭಾರತದ ಹೊಸ ಸಚಿವರು
ಬೆಂಗಳೂರು, ಜೂ.17:ಲಾಸ್ ವೆಗಾಸ್ ನಲ್ಲಿ ನಡೆದ ಸೌಂದರ್ಯ ಸ್ಪರ್ಧೆಯಲ್ಲಿ ಮಿಸ್ ಕನೆಕ್ಟಿಕಟ್ ನ ಎರಿನ್ ಬ್ರಾಡಿ ಅವರು ಮಿಸ್ ಯುಎಸ್ ಎ 2013 ಆಗಿ ಹೊರ ಹೊಮ್ಮಿದ್ದಾರೆ. ಎರಿನ್ ಬ್ರಾಡಿ ಅವರಿಗೆ ನಾನಾ ಮೆರಿವೆಥರ್ ಅವರು ಕಿರೀಟ ತೊಡಿಸಿದರು. ಎರಿನ್ ಅವರು ಭುವನ ಸುಂದರಿ ಸ್ಪರ್ಧೆಯಲ್ಲಿ ಯುಎಸ್ ಎ ಪ್ರತಿನಿಧಿಯಾಗಿ ಸ್ಪರ್ಧಿಸಲಿದ್ದಾರೆ.
ಅಟ್ಲಾಂಟಿಕ್ ನಗರದಲ್ಲಿ ಭಾರತದ ಪುರಿಯ ಸುದರ್ಶನ್ ಪಟ್ನಾಯಕ್ ಅವರು ತಮ್ಮ ಮರಳು ಶಿಲ್ಪಾಕೃತಿಯ ಕೈಚಳಕ ತೋರಿದ್ದಾರೆ. ಅಟ್ಲಾಂಟಿಕ್ ನ ಸೀಸರ್ ಬೀಚ್ ನಲ್ಲಿ ವಿಶ್ವ ಮರಳು ಕಲಾಕೃತಿ ಸ್ಪರ್ಧೆಯಲ್ಲಿ ಸುದರ್ಶನ್ ಕೂಡಾ ಪಾಲ್ಗೊಂಡಿದ್ದಾರೆ.
ಬಿಜೆಪಿ ಮತ್ತು ಜೆಡಿಯು ನಡುವಿನ 17 ವರ್ಷಗಳಷ್ಟು ಹಳೆ ಸಂಬಂಧ ಕೊನೆಗೂ ಮುರಿದು ಬಿದ್ದಿದೆ. ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ ಅವರನ್ನು ಚುನಾವಣಾ ಪ್ರಚಾರ ಸಮಿತಿ ಅಧ್ಯಕ್ಷರನ್ನಾಗಿ ಆಯ್ಕೆ ಮಾಡಿದ್ದನ್ನು ವಿರೋಧಿಸಿ ಬಿಜೆಪಿಯಿಂದ ದೂರ ಸರಿಯುವ ನಿರ್ಧಾರಕ್ಕೆ ಜೆಡಿಯು ಬಂದಿದೆ. ಜೆಡಿಯು ನಿರ್ಧಾರಕ್ಕೆ ಅಭಿಮಾನಿಗಳಿಂದ ಭಾರಿ ಸ್ವಾಗತ ಸಿಕ್ಕಿದೆ.
ಮೋದಿ ಅವರಿಗೆ ಪಕ್ಷದಲ್ಲಿ ಉನ್ನತ ಸ್ಥಾನಮಾನ ನೀಡಿದ್ದು, ಪ್ರಧಾನಿ ಅಭ್ಯರ್ಥಿಯಂತೆ ಬಿಂಬಿಸಿದ್ದು ಬಿಜೆಪಿ ಜತೆಗಿನ ಸಖ್ಯ ತೊರೆಯಲು ಪ್ರಮುಖ ಕಾರಣ ಎಂದು ಜೆಡಿಯು ಆರೋಪಿಸಿದೆ. ಮೋದಿ ಅವರನ್ನು ಪ್ರಧಾನಿ ಅಭ್ಯರ್ಥಿಯಾಗಿ ಬಿಂಬಿಸುವುದನ್ನು ಸಿಎಂ ನಿತೀಶ್ ಕುಮಾರ್ ವಿರೋಧಿಸುತ್ತಲೇ ಬಂದಿದ್ದರು.
ಉಳಿದಂತೆ, ಟೆಲಿಗ್ರಾಫ್ ಮುಗಿದ ಅಧ್ಯಾಯದ ಚಿತ್ರ, ಸೋನಿಯಾ ಗಾಂಧಿ ಜೊತೆ ತಾಯಂದಿರು, ಕನ್ನಿಮೋಳಿ ನಾಮಪತ್ರ ಸಲ್ಲಿಕೆ, ಶೀಲಾ ದೀಕ್ಷಿತ್ ಅವರಿಂದ ಉಡುಗೊರೆ, ಶ್ರೀಶಾಂತ್ ತುಲಾಭಾರ, ಕ್ವೆಟ್ಟಾದಲ್ಲಿ ಗುಂಡಿನ ಕಾಳಗ ಇನ್ನಷ್ಟು ಚಿತ್ರಗಳು ಇಂದಿನ ಪ್ಯಾಕೇಜಿನಲ್ಲಿದೆ

ಮಿಸ್ ಯುಎಸ್ ಎ 2013
ಲಾಸ್ ವೆಗಾಸ್: ಮಿಸ್ ಯುಎಸ್ ಎ 2013 ಎರಿನ್ ಬ್ರಾಡಿ ಹಾಗೂ ನಾನಾ ಮೆರಿವೆಥರ್

ಪಾಟ್ನದಲ್ಲಿ ಜೆಡಿಯು ಸಂಭ್ರಮ
ಪಾಟ್ನ: ಬಿಜೆಪಿ ಸಖ್ಯ ಕಳೆದುಕೊಂಡ ಜೆಡಿಯು ನಿರ್ಧಾರವನ್ನು ಸ್ವಾಗತಿಸಿ ಸಂಭ್ರಮಿಸಿದ ಅಭಿಮಾನಿಗಳು

ಸೋನಿಯಾ ಗಾಂಧಿ ಜತೆ ತಾಯಂದಿರು
ನವದೆಹಲಿ:ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ ಜತೆ ಆಯ್ದ ತಾಯಂದರು ತಮ್ಮ ಮಕ್ಕಳೊಂದಿಗೆ.. ಸೋನಿಯಾ ಗಾಂಧಿ ಅವರು ಮಕ್ಕಳಿಗೆ ಪಲ್ಸ್ ಪೊಲೀಯೊ ಲಸಿಕೆ ಹಾಕಿದರು.

ಸೋನಿಯಾ ಜತೆ ತಾಯಂದಿರು
ನವದೆಹಲಿ: ಸೋನಿಯಾ ಗಾಂಧಿ ಅವರು ಮಕ್ಕಳಿಗೆ ಪಲ್ಸ್ ಪೊಲೀಯೊ ಲಸಿಕೆ ಹಾಕಿದರು.

ಕಟ್ಟ ಕಡೆಯ ಟೆಲಿಗ್ರಾಫ್
ಮುಂಬೈ: ಇಲ್ಲಿನ ಸೆಂಟ್ರಲ್ ಟೆಲಿಗ್ರಾಫ್ ಕಚೇರಿಯಲ್ಲಿ ಕಟ್ಟ ಕಡೆಯ ಟೆಲಿಗ್ರಾಫ್ ಸಂದೇಶ ಕಳಿಸಲಾಗಿದೆ. 160 ವರ್ಷ ಹಳೆದ ಸೇವೆ ಜೂ.15, 2013ಕ್ಕೆ ಕೊನೆಗೊಂಡಿದೆ.

ಟೆಲಿಗ್ರಾಫ್
ಮುಂಬೈ: ಸೆಂಟ್ರಲ್ ಟೆಲಿಗ್ರಾಫ್ ಕಚೇರಿಯ ಮಹಿಳಾ ಸಿಬ್ಬಂದಿಯೊಬ್ಬರು ಸ್ಟಾಂಪ್ ತೋರಿಸುತ್ತಿದ್ದಾರೆ.

ಸುದರ್ಶನ ಮರಳು ಶಿಲ್ಪ
ಅಟ್ಲಾಂಟಿಕ್ ನಗರದಲ್ಲಿ ಭಾರತದ ಪುರಿಯ ಸುದರ್ಶನ್ ಪಟ್ನಾಯಕ್ ಅವರು ತಮ್ಮ ಮರಳು ಶಿಲ್ಪಾಕೃತಿಯ ಕೈಚಳಕ ತೋರಿದ್ದಾರೆ.

ಕನ್ನಿಮೋಳಿ ರಾಜ್ಯಸಭೆಗೆ ನಾಮಪತ್ರ
ಕನ್ನಿಮೋಳಿ ರಾಜ್ಯಸಭೆಗೆ ನಾಮಪತ್ರ ಸಲ್ಲಿಕೆಗೆ ಮುನ್ನ ಅಪ್ಪ ಡಿಎಂಕೆ ಮುಖ್ಯಸ್ಥ ಕರುಣಾನಿಧಿಗೆ ತೋರಿಸಿದರು

ಶ್ರೀಶಾಂತ್ ತುಲಾಭಾರ
ಸ್ಪಾಟ್ ಫಿಕ್ಸಿಂಗ್ ಪ್ರಕರಣದ ಆರೋಪಿಯಾಗಿ ಜೈಲು ಸೇರಿದ್ದ ಶ್ರೀಶಾಂತ್ ಅವರು ಬಿಡುಗಡೆಗೊಂಡ ಬಳಿಕ ಕೇರಳದ ದೇಗುಲದಲ್ಲಿ ತುಲಾಭಾರ ಸೇವೆ ಸಲ್ಲಿಸಿದರು.

ಏನಿದು ಕಲೆ?
ಕೋಲ್ಕತ್ತಾ: ಮನುಷ್ಯರ ಮುಖವನ್ನು ಮಣ್ಣಿನಿಂದ ರೂಪಿಸಿರುವ ಕಲಾವಿದರು ಬಿಸಿಲಿಗಾಗಿ ಕಾದಿದ್ದಾರೆ. ಆದರೆ, ಕೋಲ್ಕತ್ತಾದಲ್ಲೂ ಮಳೆ ಕಾಡುತ್ತಿದೆ.

ದೀಕ್ಷಿತ್ ಕೈಗೆ ಉಡುಗೊರೆ
ಗ್ರಾಮೀಣ ವಿಕಾಸ್ ಸಮ್ಮೇಳನದಲ್ಲಿ ದೆಹಲಿ ಮುಖ್ಯಮಂತ್ರಿ ಶೀಲಾ ದೀಕ್ಷಿತ್ ಕೈಗೆ ಸಿಕ್ಕ ನೆನಪಿನ ಕಾಣಿಕೆ

ಸಂಪುಟ ಸೇರಿದ ಸಚಿವರು
ನವದೆಹಲಿ: ಮನಮೋಹನ್ ಸಿಂಗ್ ಅವರ ಯುಪಿಎ II ಸರ್ಕಾರದ ಸಚಿವ ಸಂಪುಟ ಸೇರಿದ ನಾಲ್ವರು ರಾಜ್ಯಸಚಿವರು, ನಾಲ್ವರು ಕ್ಯಾಬಿನೇಟ್ ಸಚಿವರು ಹಾಗೂ ರೈಲ್ವೆ ಸಚಿವರಾಗಿ ಬಡ್ತಿ ಪಡೆದ ಮಲ್ಲಿಕಾರ್ಜುನ ಖರ್ಗೆ












Click it and Unblock the Notifications