ಮಳೆ ಚಿತ್ರ: ಉತ್ತರ ಭಾರತದಲ್ಲಿ ಮಳೆ ರುದ್ರ ನರ್ತನ

ನವದೆಹಲಿ, ಜೂ.17: ಅವಧಿಗೂ ಮುನ್ನ ಮುಂಗಾರು ಮಳೆ ಪ್ರವೇಶವಾಗಿದ್ದರಿಂದ ಉತ್ತರ ಭಾರತ ತತ್ತರಿಸಿದೆ. ದೆಹಲಿ, ಹರ್ಯಾಣ, ಪಂಜಾಬ್, ಉತ್ತರಾಖಂಡ್, ಜಮ್ಮು ಮತ್ತು ಕಾಶ್ಮೀರ ಸೇರಿದಂತೆ ಬಹುತೇಕ ಭಾಗಗಳಲ್ಲಿ ಜನಜೀವನ ಅಸ್ತವ್ಯಸ್ತಗೊಂಡಿದೆ. ಮಳೆಗೆ ಸುಮಾರು 13ಕ್ಕೂ ಅಧಿಕ ಜನ ಬಲಿಯಾಗಿದ್ದು, ಉತ್ತರಕಾಶಿ ಸೇರಿದಂತೆ ಪ್ರಮುಖ ತೀರ್ಥಕ್ಷೇತ್ರಗಳಲ್ಲಿರುವ 30,000ಕ್ಕೂ ಅಧಿಕ ಭಕ್ತಾದಿಗಳ ರಕ್ಷಣೆಗೆ ಯೋಧರು ಧಾವಿಸಿದ್ದಾರೆ.

ಉತ್ತರಕಾಶಿ, ತೆಹ್ರಿ, ಹರಿದ್ವಾರ ಹಾಗೂ ಡೆಹ್ರಾಡೂನ್ ಗಳಲ್ಲಿ ಕಳೆದ ಎರಡು ದಿನಗಳಿಂದ ಸುರಿದಿರುವ ಭಾರಿ ಮಳೆಗೆ ಮೂರು ಅಂತಸ್ತಿನ ಕಟ್ಟಡವೇ ಕುಸಿದು ಬಿದ್ದಿದೆ. ಗಂಗಾ ನದಿಯ ಉಪನದಿಗಳಾದ ಮಂದಾಕಿನಿ ಹಾಗೂ ಅಲಕಾನಂದ ತುಂಬಿ ಹರಿಯುತ್ತಿದ್ದು, ಮಾರ್ಗ ಮಧ್ಯೆ ಸಿಕ್ಕ ಸೇತುವೆ, ಕಟ್ಟಡಗಳನ್ನು ಧ್ವಂಸಗೊಳಿಸಿದೆ.

ರುದ್ರಪ್ರಯಾಗ, ಗೌರಿಕುಂಡ ಸಂಪರ್ಕಿಸುವ ಸೇತುವೆ ಕುಸಿದು ಬಿದ್ದಿದೆ. ಚಾರ್ ಧಾಮ್ ಯಾತ್ರೆಗೆ ಮುಕ್ತಾಯ ಹಾಡಲಾಗಿದೆ. ಭೂ ಕುಸಿತದಿಂದಾಗಿ ಹೇಮಕುಂಡಕ್ಕೆ ತೆರಳಿದ 20 ಸಾವಿರಕ್ಕೂ ಅಧಿಕ ಯಾತ್ರಾರ್ಥಿಗಳ ಸುರಕ್ಷತೆ ಬಗ್ಗೆ ಕ್ರಮಕೈಗೊಳ್ಳಲಾಗಿದೆ. ಕ್ರಿಕೆಟರ್ ಹರ್ಭಜನ್ ಸಿಂಗ್ ಅವರು ಈ ಯಾತ್ರೆ ಕೈಗೊಂಡಿದ್ದಾರೆ ಎಂಬ ಮಾಹಿತಿ ಸಿಕ್ಕಿದೆ ಎಂದು ವಿಪತ್ತು ನಿರ್ವಹಣಾಧಿಕಾರಿ ಮೀರಾ ಕೆಂಥುರಾ ಹೇಳಿದ್ದಾರೆ.

ಇಷ್ಟೇ ಅಲ್ಲ, ಹಿಮಾಲಯದ ತಪ್ಪಲಿನ ಗಂಗೋತ್ರಿ, ಯಮುನೋತ್ರಿ ಕಡೆ ತೆರಳಿದ ಪ್ರಯಾಣಿಕರು, ಯಾತ್ರಿಗಳಿಗೂ ಇದೇ ಸಂಕಷ್ಟ ಎದುರಾಗಿದೆ. ಪಿಪಲ್ ಮಂಡಿ, ಬರಾಕಿ, ನಲುಪಾನಿ ಮುಂತಾದ ಕಡೆ ಭೂ ಕುಸಿತ ಉಂಟಾಗಿದೆ.

ಉತ್ತರಕಾಶಿಯ ಹೋಟೆಲ್ ಹಾಗೂ ಧರ್ಮಶಾಲೆಗಳಿಗೆ ನೀರು ನುಗ್ಗಿದೆ. ಭಾರತೀಯ ಸೇನೆ ಹಾಗೂ ವಿಪತ್ತು ನಿರ್ವಹಣಾ ಘಟಕದ ಸಿಬ್ಬಂದಿ ಸಾರ್ವಜನಿಕರನ್ನು ಸುರಕ್ಷಿತ ಸ್ಥಳಗಳಿಗೆ ಸೇರಿಸಲು ಹರಸಾಹಸ ಪಡುತ್ತಿದ್ದಾರೆ. ಮಳೆ ರುದ್ರ ನರ್ತನದ ದೃಶ್ಯಗಳು ನಿಮ್ಮ ಮುಂದಿದೆ...

ಉತ್ತರ ಕಾಶಿಯಲ್ಲಿ ಕಟ್ಟಡ ಕುಸಿತ

ಉತ್ತರ ಕಾಶಿಯಲ್ಲಿ ಕಟ್ಟಡ ಕುಸಿತ

ಉತ್ತರ ಕಾಶಿ: ಪ್ರೇಮ್ ನಗರದಲ್ಲಿರುವ ಮೂರಂತಸ್ತಿನ ಕಟ್ಟಡ ಭಾನುವಾರ ಬಿದ್ದ ಮಳೆಗೆ ಕುಸಿದಿದೆ. ಗಂಗೋತ್ರಿ, ಯಮುನೋತ್ರಿಗೆ ತೆರಳಬೇಕಿದ್ದ ಯಾತ್ರಿಗಳು ಬೀದಿಗೆ ಬಿದ್ದಿದ್ದಾರೆ.

ಉತ್ತರಖಂಡದಲ್ಲಿ ಸುರಿಯುತ್ತಿರುವ ಭಾರೀ ಮಳೆಯಿಂದಾಗಿ ಸಾವಿರಾರು ಕೋಟಿ ನಷ್ಟವಾಗಿದ್ದು, 13 ಜನ ಮೃತಪಟ್ಟು, 60 ಮಂದಿ ಕಣ್ಮರೆಯಾಗಿದ್ದಾರೆ.

ದೆಹಲಿಯಲ್ಲಿ ಮೋಡ ಆವರಿಸಿದೆ

ದೆಹಲಿಯಲ್ಲಿ ಮೋಡ ಆವರಿಸಿದೆ

ನವದೆಹಲಿ: ಕಣ್ಣಾಮುಚ್ಚಾಲೆ ಆಡುತ್ತಿರುವ ಮಳೆ, ಆಗಾಗ ಬಂದು ಹೋಗಿ ಮಾಡಿ ಕಾಟ ಕೊಡುತ್ತಿದೆ. ಅದರೆ, ಹಲವು ದಿನಗಳಿಂದ ಮಳೆ ಕಾಣದ ಜನ ಅವಧಿಗೆ ಮುನ್ನ ಬಂದ ಅತಿಥಿಯನ್ನು ಸ್ವಾಗತಿಸಿ ರಸ್ತೆಗಿಳಿದಿದ್ದಾರೆ.

ಯಾತ್ರಿಗಳಿಗೆ ಮಳೆ ಖುಷಿ

ಯಾತ್ರಿಗಳಿಗೆ ಮಳೆ ಖುಷಿ

ಆಗ್ರಾ: ಮಳೆ ನಡುವೆ ಪ್ರೇಮ ಸೌಧ ತಾಜ್ ಮಹಲ್ ನೋಡುತ್ತಿರುವ ಯಾತ್ರಿಗಳು

ಇಂದಿರಾಗಾಂಧಿ ಏರ್ ಪೋರ್ಟ್

ಇಂದಿರಾಗಾಂಧಿ ಏರ್ ಪೋರ್ಟ್

ನವದೆಹಲಿ: ಅತಿ ಸುಂದರ, ಸುರಕ್ಷಿತ ಏರ್ ಪೋರ್ಟ್ ಎನಿಸಿರುವ ದೆಹಲಿಯ ಐಜಿಐ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಮೂರನೇ ಟರ್ಮಿನಲ್ ನಲ್ಲಿ ನೀರು ಹೊರ ದಬ್ಬುತ್ತ್ರಿರುವ ಸಿಬ್ಬಂದಿಗಳು

ಐಜಿಐನಲ್ಲಿ ನೀರು

ಐಜಿಐನಲ್ಲಿ ನೀರು

ನವದೆಹಲಿ:ಇಂದಿರಾಗಾಂಧಿ ಏರ್ ಪೋರ್ಟಿಗೆ ನುಗ್ಗಿದ ನೀರು ಹೊರ ಹಾಕುತ್ತಿರುವ ಸಿಬ್ಬಂದಿ

ಲೋಕಲ್ ಟ್ರೈನ್ ನಿಲ್ಲಲ್ಲ

ಲೋಕಲ್ ಟ್ರೈನ್ ನಿಲ್ಲಲ್ಲ

ಮುಂಬೈ: ಎಂಥಾ ಮಳೆ ಬಿದ್ದರೂ ಲೋಕಲ್ ಟ್ರೈನ್ ನಿಲ್ಲಲ್ಲ. ಮಳೆ ನಡುವೆ ಸಾಗಿರುವ ಸ್ಥಳೀಯ ರೈಲು

ಲೋಕಲ್ ಟ್ರೈನ್ ಕಣ್ರಿ

ಲೋಕಲ್ ಟ್ರೈನ್ ಕಣ್ರಿ

ಮುಂಬೈ ಲೋಕಲ್ ಟ್ರೈನ್ ಮತ್ತೊಂದು ಕಡೆಯಿಂದ ಕಂಡಿದ್ದು ಹೀಗೆ

ಮಳೆ ಮಾರುತ ಎಲ್ಲಿದೆ?

ಮಳೆ ಮಾರುತ ಎಲ್ಲಿದೆ?

ಉತ್ತರದಲ್ಲಿ ನೈರುತ್ಯ ಮುಂಗಾರು ಮಳೆ ಮಾರುತಗಳು ಎಲ್ಲಿಂದ ಎಲ್ಲಿಗೆ ಸಾಗಿದೆ ಎಂಬುದರ ಚಿತ್ರಣ ಪಿಟಿಐ ಗ್ರಾಫಿಕ್ಸ್

ಫರೀದಾಬಾದ್ ನಲ್ಲಿ ನರ್ತನ

ಫರೀದಾಬಾದ್ ನಲ್ಲಿ ನರ್ತನ

ಫರೀದಾಬಾದ್: ಮಳೆ ನಡುವೆ ಸಾಗಿರುವ ವಾಹನಗಳು , ಮಳೆ ಕಂಡು ಖುಷಿಯಾಗಿ ಕುಣಿಯುತ್ತಿರುವ ಬಾಲಕ

ಮುಂಬೈ ಮಳೆ ಚಿತ್ರ

ಮುಂಬೈ ಮಳೆ ಚಿತ್ರ

ಮುಂಬೈ; ಮಳೆ ನಡುವೆ ಸಂಸಾರವನ್ನು ಕರೆದೊಯ್ಯುತ್ತಿರುವ ವ್ಯಕ್ತಿ

ಮುಂಬೈ ಮಳೆ ಚಿತ್ರ

ಮುಂಬೈ ಮಳೆ ಚಿತ್ರ

ಮುಂಬೈ: ಮಳೆ ನಡುವೆ BEST ಸಾರಿಗೆ ವಾಹನ ಹಾಗೂ ಇತರೆ ವಾಹನಗಳು ಸಾಗಿವೆ

ಹರಿದ್ವಾರದಲ್ಲಿ ಗೋಳು

ಹರಿದ್ವಾರದಲ್ಲಿ ಗೋಳು

ಯಾತ್ರಿಗಳಿಗೆ ಸೂಕ್ತ ನೆಲೆ ಇಲ್ಲದೆ ನೀರು ತುಂಬಿದ ರಸ್ತೆಯಲ್ಲಿ ನೆಲೆ ಹುಡುಕಿಕೊಂಡು ಹೊರಟ್ಟಿದ್ದಾರೆ. ಭಾರೀ ಮಳೆಯಿಂದಾಗಿ ಹೊರ ರಾಜ್ಯಗಳ ಸಂಪರ್ಕ ಕಡಿತಗೊಂಡಿವೆ. ಪ್ರಮುಖ ರಸ್ತೆಗಳು, ಹೆದ್ದಾರಿಗಳು ಬಂದ್ ಆಗಿವೆ.

ಇನ್ನೂ ಎರಡು ದಿನಗಳ ಕಾಲ ಮಳೆ ಸುರಿಯುವ ಲಕ್ಷಣಗಳಿವೆ ಎಂದು ಹವಾಮಾನ ಇಲಾಖೆ ಎಚ್ಚರಿಸಿದೆ. ಜನಜೀವನ ಬಹುತೇಕ ಅಸ್ತವ್ಯಸ್ತಗೊಂಡಿದ್ದು ಶಾಲಾಕಾಲೇಜುಗಳು, ಸರ್ಕಾರಿ ಕಚೇರಿಗಳಿಗೆ ರಜೆ ಘೋಷಿಸಲಾಗಿದೆ.

ವಿದ್ಯುತ್, ದೂರವಾಣಿ, ಮೊಬೈಲ್ ಸಂಪರ್ಕ ಕಡಿತಗೊಂಡಿದ್ದು ಪರಿಹಾರ ಕಲ್ಪಿಸಲು ರಕ್ಷಣಾಪಡೆಗಳಿಗೆ ಸಾಧ್ಯವಾಗದ ಪರಿಸ್ಥಿತಿ ನಿರ್ಮಾಣವಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+