ನಾಲ್ವರು ಅಪ್ರಾಪ್ತೆಯರ ಮೇಲೆ ಬಲಾತ್ಕಾರ

Three minor girls raped in MP
ಸಿಧಿ, ಜೂ.13: ಮೂರು ಪ್ರತ್ಯೇಕ ಪ್ರಕರಣಗಳಲ್ಲಿ ಮೂವರು ಅಪ್ರಾಪ್ತ ವಯಸ್ಕರ ಮೇಲೆ ಅತ್ಯಾಚಾರ ನಡೆದಿರುವುದು ಬೆಳಕಿಗೆ ಬಂದಿದ್ದು, ಆರೋಪಿಗಳನ್ನು ಬಂಧಿಸುವಲ್ಲಿ ಮಧ್ಯಪ್ರದೇಶ ಪೊಲೀಸರು ಯಶಸ್ವಿಯಾಗಿದ್ದಾರೆ.

ರಾಷ್ಟ್ರೀಯ ಕ್ರೈಂ ರೆಕಾರ್ಡ್ ಹೊರ ಹಾಕಿರುವ ಅಂಕಿ ಅಂಶಗಳಲ್ಲಿ ಮಧ್ಯಪ್ರದೇಶದ ಸ್ಥಿತಿ ಪರ್ವಾಗಿಲ್ಲ ಎನ್ನಬಹುದಾದರೂ ಸರಣಿಯಂತೆ ನಡೆದ ಈ ಅತ್ಯಾಚಾರ ಪ್ರಕರಣದಿಂದ ಜನತೆ ಬೆಚ್ಚಿ ಬಿದ್ದಿದ್ದಾರೆ.

ಮೂವರು ಆರೋಪಿಗಳಾದ ಕಮಲೇಶ್ ರಾವತ್(18), ಗುಲಾಬ್ ಕೊಲ್ (19) ಇಬ್ಬರು ಸದಾ ಗ್ರಾಮದಲ್ಲಿ ಇಬ್ಬರು ಅಪ್ರಾಪ್ತ ವಯಸ್ಕರನ್ನು ಊರಿನ ಹೊರಕ್ಕೆ ಎಳೆದುಕೊಂಡು ಹೋಗಿ ಅತ್ಯಾಚಾರ ಎಸಗಿ ಪರಾರಿಯಾಗಿದ್ದರು. ಆದರೆ, ಆರೋಪಿಗಳು ಪಕ್ಕದೂರಿಗೆ ತೆರಳುವಷ್ಟರಲ್ಲಿ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾರೆ.

ಇದೇ ರೀತಿಯ ಪ್ರಕರಣವೊಂದರಲ್ಲಿ ಶಂಕರ್ ಗದಾರಿಯಾ ಎಂಬ 20 ವರ್ಷದ ವ್ಯಕ್ತಿ, 17 ವರ್ಷ ವಯಸ್ಸಿನ ಹರ್ದಿಯಾ ಗ್ರಾಮದ ಯುವತಿಯನ್ನು ಇದೇ ರೀತಿ ಊರ ಹೊರಗಿನ ನಿರ್ಜನ ಪ್ರದೇಶಕ್ಕೆ ಎಳೆದೊಯ್ದು ಬಲಾತ್ಕಾರ ಮಾಡಿದ್ದಾನೆ.

ವಿಚಾರಣೆ ವೇಳೆ ಚಾಲೆಂಜ್ ಗಾಗಿ ನಾವು ರೇಪ್ ಮಾಡಿದೆವು ಎಂದು ಇಬ್ಬರು ಆರೋಪಿಗಳು ಹೇಳಿದ್ದನ್ನು ಕೇಳಿದ ಪೊಲೀಸರು ಅಚ್ಚರಿಗೊಂಡಿದ್ದಾರೆ. ಮೂವರು ಆರೋಪಿಗಳನ್ನು ವಿಚಾರಣೆಗೆ ಒಳಪಡಿಸಲಾಗಿದ್ದು, ತನಿಖೆ ಮುಂದುವರೆದಿದೆ.

ಕೋಲ್ಕತ್ತಾ: ಪಶ್ಚಿಮ ಬಂಗಾಳದ ನಾಡಿಯಾ ಜಿಲ್ಲೆಯಲ್ಲಿ 13 ವರ್ಷದ ಶಾಲಾ ಬಾಲಕಿಯನ್ನ ರೇಪ್ ಮಾಡಿ ಕೊಲೆ ಮಾಡಿರುವ ಕೃತ್ಯ ಬೆಳಕಿಗೆ ಬಂದಿದೆ.... ಸಾಮೂಹಿಕ ಅತ್ಯಾಚಾರಕ್ಕೊಳಗಾದ ವಿದ್ಯಾರ್ಥಿನಿ ಶವ ಗೆಡೆ ಎಂಬ ಗ್ರಾಮದಲ್ಲಿ ಪತ್ತೆಯಾಗಿದೆ.ಮೂವರು ಆರೋಪಿಗಳ ಪೈಕಿ ಬಿಮಲ್ ಸರ್ದಾರ್ ಎಂಬಾತನನ್ನ ಪೊಲೀಸರು ಬಂಧಿಸಿದ್ದಾರೆ. ಇನ್ನಿಬ್ಬರು ಆರೋಪಿಗಳ ಹುಡುಕಾಟ ಜಾರಿಯಲ್ಲಿದೆ ಎಂದು ಪೊಲೀಸರು ಹೇಳಿದ್ದಾರೆ.

ಏಳನೇ ತರಗತಿ ಓದುತ್ತಿದ್ದ ಈ ಬಾಲಕಿ ಶಾಲೆಯಿಂದ ಮನೆಗೆ ತೆರಳುತ್ತಿದ್ದಾಗ ಮಳೆ ಬರಲು ಆರಂಭಿಸಿದೆ. ರಸ್ತೆ ಬದಿಯಲ್ಲಿದ್ದ ರೇಲ್ವೆ ಶೆಡ್.ವೊಂದರಲ್ಲಿ ನಿಂತಿದ್ದಾಳೆ. ಬಾಲಕಿಯ ಪಕ್ಕದ ಮನೆಯವನಾದ 22 ವರ್ಷದ ಯುವಕ ಬಿಮಲ್ ಸರ್ದಾರ್ ಅದೇ ದಾರಿಯಲ್ಲಿ ಬಂದಿದ್ದಾನೆ. ಛತ್ರಿ ಹಿಡಿದುಕೊಂಡಿದ್ದ ಆತ, ಬಾಲಕಿಯನ್ನ ಮನೆಯವರೆಗೂ ಕರೆದುಕೊಂಡು ಹೋಗುವುದಾಗಿ ನಂಬಿಸಿದ್ದಾನೆ.

ಆದರೆ, ಸ್ವಲ್ಪ ದೂರ ಸಾಗುತ್ತಿದ್ದಂತೆ ಇನ್ನಿಬ್ಬರು ಯುವಕರು ಅಲ್ಲಿಗೆ ಬಂದಿದ್ದಾರೆ. ನಂತರ, ಬಿಮಲ್ ಸರದಾರ್ ಸೇರಿ ಆ ಮೂವರೂ ಯುವಕರು ವಿದ್ಯಾರ್ಥಿನಿಯ ಮೇಲೆ ಒಬ್ಬೊಬ್ಬರಾಗಿ ಮೂವರೂ ಅತ್ಯಾಚಾರ ಎಸಗಿ ಬಳಿಕ ಕತ್ತುಹಿಸುಕಿ ಹತ್ಯೆಗೈದಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+