ಚಿತ್ರಗಳಲ್ಲಿ : ಸಿದ್ದರಾಮಯ್ಯಗೆ ಆಂಧ್ರದಲ್ಲಿ ಸನ್ಮಾನ
ಹೈದರಾಬಾದ್, ಜೂ.9: ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಗೆಲವು ಸಾಧಿಸಿದ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಆಂಧ್ರದಲ್ಲಿ ಶನಿವಾರ ಸನ್ಮಾನಿಸಲಾಯಿತು. ರಾಜ್ಯಸಭೆ ಸದಸ್ಯ ವಿ. ಹನುಮಂತರಾವ್ ಅವರು ಈ ಸನ್ಮಾನ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದರು.
ಆಂಧ್ರದ ಹಿಂದುಳಿದ ವರ್ಗದ ವಿವಿಧ ಸಂಸ್ಥೆಗಳೂ ಸಿದ್ದು ಅವರನ್ನು ಸನ್ಮಾನಿಸಿದವು. ಕಾರ್ಯಕ್ರಮದಲ್ಲಿ ಕರ್ನಾಟಕದ ಮಾಜಿ ಸಚಿವರಾದ ರೇವಣ್ಣ, ರೋಷನ್ ಬೇಗ್ ಸೇರಿದಂತೆ ಅನೇಕರು ಭಾಗವಹಿಸಿದ್ದರು.
ಕಾಂಗ್ರೆಸ್ ಪಕ್ಷದಿಂದ ಮಾತ್ರವೇ ಹಿಂದುಳಿದ ವರ್ಗಗಳು ಮತ್ತು ತುಳಿತಕ್ಕೊಳಗಾದ ವರ್ಗಗಳಿಗೆ ನ್ಯಾಯ ಒದಗಿಸಲು ಸಾಧ್ಯ. ಇದಕ್ಕೆ ನಾನೇ ಉದಾಹರಣೆ. ಬಡ ಹಿಂದುಳಿದ ವರ್ಗದಿಂದ ಬಂದ ನಾನು ಈಗ ರಾಜ್ಯದ ಮುಖ್ಯಮಂತ್ರಿಯಾಗಿದ್ದೂ ಹೀಗೇ ಎಂದರು.
ಉಳಿದಂತೆ, ಗೋವಾದಲ್ಲಿ ನಡೆದ ಬಿಜೆಪಿ ಕಾರ್ಯಕಾರಿ ಸಭೆ, ಫ್ರೆಂಚ್ ಓಪನ್ ಟೆನಿಸ್ ಗೆದ್ದ ಸೆರೆನಾ ವಿಲಿಯಮ್ಸ್, ಆಸ್ಟ್ರೇಲಿಯಾ ಬಗ್ಗು ಬಡಿದ ಇಂಗ್ಲೆಂಡ್, ಕುಡಿಯುವ ನೀರಿನ ಬವಣೆ, ಇಂಗ್ಲೆಂಡ್ ಸೈನ್ಯ ಇನ್ನಿತರ ಚಿತ್ರಗಳು ನಿಮ್ಮ ಮುಂದೆ...

ಕರ್ನಾಟಕ ಸಿಎಂಗೆ ಸನ್ಮಾನ
ಆಂಧ್ರದ ಹಿಂದುಳಿದ ವರ್ಗದ ವಿವಿಧ ಸಂಸ್ಥೆಗಳೂ ಸಿದ್ದು ಅವರನ್ನು ಸನ್ಮಾನಿಸಿದವು. ಕಾರ್ಯಕ್ರಮದಲ್ಲಿ ಕರ್ನಾಟಕದ ಮಾಜಿ ಸಚಿವರಾದ ರೇವಣ್ಣ, ರೋಷನ್ ಬೇಗ್ ಸೇರಿದಂತೆ ಅನೇಕರು ಭಾಗವಹಿಸಿದ್ದರು.

ಉಜ್ಜಯಿನಿಯಲ್ಲಿ ರಾಷ್ಟ್ರಪತಿ ಪ್ರಣಬ್
ಉಜ್ಜಯಿನಿ: ಕೋಲ್ಕತ್ತಾದ ಕಾಳಿ ಮಾತೆ ಪೂಜೆಯಲ್ಲಿ ಮಾತ್ರ ಕಾಣಿಸಿಕೊಳ್ಳುತ್ತಿದ್ದ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವರು ಇತ್ತೀಚೆಗೆ ದೇಗುಲಗಳ ಭೇಟಿ ಜಾಸ್ತಿ ಮಾಡಿಕೊಂಡಿದ್ದಾರೆ. ಶಿರಡಿ ನಂತರ ಮಧ್ಯಪ್ರದೇಶದ ಮಹಾಕಾಳ ಶಿವ ದೇಗುಲಕ್ಕೆ ತೆರಳಿ ಅಭಿಷೇಕ ಮಾಡಿದ್ದಾರೆ.

ಲಕ್ಕಿ ರೆಡ್ ದಿರಿಸು
ಬರ್ಮಿಂಗ್ ಹ್ಯಾಂ: ಚಾಂಪಿಯನ್ಸ್ ಟ್ರೋಫಿ ಮೊದಲ ಪಂದ್ಯದಲ್ಲಿ ಬಲಿಷ್ಠ ಆಸ್ಟ್ರೇಲಿಯಾ ತಂಡ ಮಣಿಸಿದ ಕುಕ್ ಪಡೆ ಗೆಲುವಿನ ಸಂಭ್ರಮದಲ್ಲಿ ಬೆಲ್ ಹಾಗೂ ಆಂಡರ್ಸನ್ ಗೆಲುವಿನ ರುವಾರಿಗಳಾದರು.

ಜಿಂಕೆ ತಾಯಿ ಮಗು
ನವದೆಹಲಿ: ಪ್ರಾಣಿ ಸಂಗ್ರಹಾಲಯದಲ್ಲಿ ಬಿಸಿಲಿನ ಬಳಲಿರುವ ಹರಿಣಗಳು

ಜಿಂಕೆಗಳ ಸಮೂಹ
ನವದೆಹಲಿ: ಇತ್ತೀಚೆಗೆ ಅಕಾಲಿಕ ಮಳೆ ಬಿದ್ದಿದ್ದು ಬಿಟ್ಟರೆ ದೆಹಲಿಯಲ್ಲಿ ಮತ್ತೆ ನೆತ್ತಿ ಸುಡುತ್ತಿದೆ. ಮೂಕ ಪ್ರಾಣಿಗಳ ರೋದನ ಹೇಳತೀರದಾಗಿದೆ.,

ಕೆನಡಾ ಜಿಪಿ ಎಫ್ 1
ಮಾಂಟ್ರಿಯಲ್: ಮಲ್ಯ ಒಡೆತನದ ಫೋರ್ಸ್ ಇಂಡಿಯಾ ಎಫ್ 1 ಡ್ರೈವರ್ ಜರ್ಮನಿಯ ಸುಟಿಲ್ ಶನಿವಾರ ಅಭ್ಯಾಸದ ವೇಳೆ 2ನೇ ಸ್ಥಾನಕ್ಕೇರಿ ಅಚ್ಚರಿ ಮೂಡಿಸಿದರು.

ಕುಡಿಯುವ ನೀರಿನ ಬವಣೆ
ಅಹಮದಾಬಾದ್: ಸೋರುತ್ತಿರುವ ನೀರಿನ ಪೈಪಿನಿಂದ ಸಿಕ್ಕಿದ್ದಷ್ಟು ನೀರು ಸಂಗ್ರಹಿಸುತ್ತಿರುವ ಸಾರ್ವಜನಿಕರು

ಅಹಮದಾಬಾದ್ ನ ಚಿತ್ರಣ
ಅಹಮದಾಬಾದ್: ಸೋರುತ್ತಿರುವ ನೀರಿನ ಪೈಪಿನಿಂದ ಸಿಕ್ಕಿದ್ದಷ್ಟು ನೀರು ಸಂಗ್ರಹಿಸುತ್ತಿರುವ ಸಾರ್ವಜನಿಕರು

ತೀರ್ಥಯಾತ್ರೆ
ಅಮೃತ್ ಸರ : ಲಾಹೋರ್ ನಲ್ಲಿರುವ ಗುರುದ್ವಾರಕ್ಕೆ ಹರಕೆ ಸಲ್ಲಿಸಲು ಹೊರಟ ಸಿಖ್ ಶಿರೋಮಣಿ ಗುರು ದ್ವಾರ ಪ್ರಭಂದಕ ಸಮಿತಿಯ ಸದಸ್ಯರು

ಸಾವಿತ್ರಿ ವ್ರತ
ಧನ್ ಬಾದ್: ಮಹಿಳೆಯರು ಅರಳಿ ಮರದ ಬಳಿ ಸಾಂಪ್ರದಾಯಿಕ ವಟ ಸಾವಿತ್ರಿ ವ್ರತದಲ್ಲಿ ತೊಡಗಿದ್ದಾರೆ.

ಲಂಡನ್ ಪೆರೇಡ್
ಲಂಡನ್: ಸೆಂಟ್ರಲ್ ಲಂಡನ್ ನಲ್ಲಿ ಶನಿವಾರ ಬ್ರಿಟಿಷ್ ಯೋಧರು ಮೆರವಣಿಗೆ ಹೊರಟ್ಟಿದ್ದು ಹೀಗೆ

ಲೂಟೆರಾ ಸಿನಿಮಾ ಪ್ರಚಾರ
ಲೂಟೆರಾ ಸಿನಿಮಾ ಪ್ರಚಾರದಲ್ಲಿ ಬಾಲಿವುಡ್ ನಟ ರಣವೀರ್ ಸಿಂಗ್ ಹಾಗೂ ನಟಿ ಸೋನಾಕ್ಷಿ ಸಿನ್ಹಾ

ಕಾಡ್ಗಿಚ್ಚು ಆರಿಸುವುದು
ರಜೌರಿ: ಅರಣ್ಯ ಪ್ರದೇಶದಲ್ಲಿ ಹಿಡಿದಿರುವ ಬೆಂಕಿಯನ್ನು ನಂದಿಸಲು ಸಿಬ್ಬಂದಿ ಸಾಹಸ ಪಡುತ್ತಿದ್ದಾರೆ.

ಬುಡಾಪೆಸ್ಟ್ ಚಿತ್ರ
ಹಂಗೇರಿ: ದನುಬೆ ನದಿ ನೀರಿನ ಪ್ರವಾಹಕ್ಕೆ ಮುಳುಗಿದ ಬುಡಾಪೆಸ್ಟ್ ನ ಸಂಸದೀಯ ಕಟ್ಟಡದ ವೈಮಾನಿಕ ಚಿತ್ರ

ಬೆತ್ತಲೆ ಮೆರವಣಿಗೆ
ಥೆಸ್ಸಾಲೊನಿಕಿ ನಗರದಲ್ಲಿ ಬಣ್ಣ ಬಳಿದುಕೊಂಡು ಬೆತ್ತಲಾಗಿ ಸೈಕಲ್ ಏರಿ ಮೆರವಣಿಗೆ ನಡೆಸಿದ 1000ಕ್ಕೂ ಹೆಚ್ಚು ಮಂದಿ. ಇದು ಗ್ರೀಸ್ ನಲ್ಲಿ ಬೈಸಿಕಲ್ ಬಳಕೆ ಜಾಗೃತಿ ಅಂಗವಾಗಿ ನಡೆದ ಕಾರ್ಯಕ್ರಮವಾಗಿದೆ.












Click it and Unblock the Notifications