ಅಣ್ಣನಂತಿದ್ದ ಮತ್ತು ಬರೆಸಿ ರೇಪ್ ಮಾಡ್ಬಿಟ್ಟ

ನವೀನ್ ಎಂಬಾತ ತನ್ನ ಪಕ್ಕದ ಮನೆ 'ತಂಗಿ'ಯ ಮೇಲೆ ಅತ್ಯಾಚಾರ ಎಸಗಿರುವ ಆರೋಪ ಎದುರಿಸುತ್ತಿದ್ದಾನೆ. ಯುವತಿಗೆ ಮತ್ತು ಬರಿಸುವ ಔಷಧ ನೀಡಿ ಈ ಕೃತ್ಯ ಎಸಗಿರುವ ಕಾಮಾಕ್ಷಿಪಾಳ್ಯದಲ್ಲಿ ಘಟನೆ ನಡೆದಿದೆ.
ನಂಬಿಕೆ ದ್ರೋಹ: ಕಾಮಾಕ್ಷಿಪಾಳ್ಯದಲ್ಲಿ ಆ ಯುವತಿ ಮತ್ತು ನವೀನ ಇಬ್ಬರೂ ಅಕ್ಕಪಕ್ಕದ ಮನೆಯವರು. ಹುಡುಗಿಯ ಮನೆಯವರೊಂದಿಗೆ ನವೀನ್ ಬಹಳ ಆಪ್ತನಾಗಿಬಿಟ್ಟಿದ್ದ ಹುಡುಗಿಯ ತಾಯಿಗೆ ಗಂಡು ಮಕ್ಕಳಿಲ್ಲದ ಕಾರಣದಿಂದ ನವೀನನನ್ನೇ ತಮ್ಮ ಮಗನಂತೆ ನೋಡಿಕೊಳ್ಳುತ್ತಿದ್ದರಂತೆ. ಆತನಿಗೆ ಆಟೋರಿಕ್ಷಾ ಮತ್ತು ಬೈಕ್ ಕೂಡ ಕೊಡಿಸಿದ್ದರಂತೆ.
ಅಣ್ಣ ತಂಗಿ ಪ್ರೇಮ ತಾರಕಕ್ಕೇರಿತ್ತು ಎನ್ನುತ್ತಾರೆ ನೆರೆ ಮನೆಯವರು. ಹುಡುಗಿ ತನ್ನ ಕೈ ಮೇಲೆ 'ನವೀನ್ ಅಣ್ಣಾ' ಎಂದು ಹಚ್ಚೆ ಹಾಕಿಸಿಕೊಂಡಿದ್ದಾಳೆ. ಆತನನ್ನ 'ಅಣ್ಣಾ' ಎಂತಲೇ ಕರೆಯುತ್ತಿದ್ದಳು. ಎಲ್ಲರಿಗೂ ಅದೇ ರೀತಿ ಪರಿಚಯಿಸುತ್ತಿದ್ದಳು. ಆತ ಕೂಡ ಆ ಹುಡುಗಿಯನ್ನ'ತಂಗಿ' ಎಂತಲೇ ಸಂಬೋಧಿಸುತ್ತಿದ್ದನಂತೆ. ಹೀಗಿರುವಾಗ ನವೀನನ ಮನಸಲ್ಲಿ ಆ ದುಷ್ಟ ಬುದ್ಧಿ ಹೇಗೆ ಬಂತೋ ದೇವರೇ ಬಲ್ಲ ಎಂದು ನೆರೆಹೊರೆಯವರು ಅಚ್ಚರಿಯಿಂದ ಮಾತನಾಡಿಕೊಳ್ಳುತ್ತಿದ್ದಾರೆ.
ನವೀನ್ ಬಹಳ ದಿನದಿಂದ ಹುಡುಗಿಯ ಮೇಲೆ ಕಣ್ಣುಹಾಕಿ ಮಾಸ್ಟರ್ ಪ್ಲಾನ್ ಮಾಡಿದ್ದ ಹಾಗೆ ತೋರುತ್ತಿದೆ. ಜ್ಯೂಸಿನಲ್ಲಿ ಮಂಪರು ಬರಿಸುವ ಔಷಧ ಹಾಕಿ ಆಕೆಗೆ ಕುಡಿಸಿ ಬಳಿಕ ಅತ್ಯಾಚಾರವೆಸಗಿದ್ದಾನೆ. ನಂತರ ಏನು ತಿಳಿಯದಂತೆ ನಡೆಸಿದ್ದಾನೆ. ಯುವತಿಯನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಲಾಗಿದ್ದು, ಅತ್ಯಾಚಾರ ಎಸೆಗಿರುವ ಬಗ್ಗೆ ವರದಿ ಬಂದ ನಂತರ ತಿಳಿಯಲಿದೆ. ಕಾಮಾಕ್ಷಿಪಾಳ್ಯ ಪೊಲೀಸ್ ಠಾಣೆಯಲ್ಲಿ ನವೀನ್ ವಿರುದ್ಧ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರೆದಿದೆ.












Click it and Unblock the Notifications