ಕರ್ನಾಟಕ ಸಿಇಟಿ ಕೌನ್ಸಲಿಂಗ್ 2013 ವೇಳಾಪಟ್ಟಿ
ಬೆಂಗಳೂರು, ಜೂ.3: ಸಾಮಾನ್ಯ ಪ್ರವೇಶ ಪರೀಕ್ಷೆ ಶ್ರೇಯಾಂಕ(Rank) ಆಧಾರದ ಮೇಲೆ ವೃತ್ತಿಪರ ಕೋರ್ಸ್ ಗಳಿಗೆ ಪ್ರವೇಶ ಪ್ರಕ್ರಿಯೆ ಜೂ.5 ರಿಂದ ಆರಂಭಗೊಳ್ಳಲಿದೆ. ಸೋಮವಾರದಿಂದ ಪ್ರಮಾಣ ಪತ್ರ ಪರಿಶೀಲನೆ ಪ್ರಕ್ರಿಯೆ ಶುರುವಾಗಿದೆ.
ಸೋಮವಾರ ಮತ್ತು ಮಂಗಳವಾರ ವಿಶೇಷ ವಿಭಾಗ(ವಿಕಲಚೇತನ, ಎನ್ ಸಿಸಿ ಹಾಗೂ ಕ್ರೀಡಾ ಕೋಟ) ಅಭ್ಯರ್ಥಿಗಳ ಪ್ರಮಾಣ ಪತ್ರ ಪರಿಶೀಲನೆ ನಡೆಸಲಾಗುತ್ತದೆ. ಜೂ.5 ರಂದು ಸಿಇಟಿ ಶ್ರೇಯಾಂಕ ಆಧಾರದ ಮೇಲೆ ಪ್ರಮಾಣ ಪತ್ರ ಪರಿಶೀಲನೆ ನಡೆಯಲಿದೆ.
ಅಭ್ಯರ್ಥಿ ತಂದಿರುವ ಎಲ್ಲಾ ಡಾಕ್ಯುಮೆಂಟ್ಸ್ ಸರಿಯಾಗಿದ್ದರೆ ಆನ್ ಲೈನ್ ಮೂಲಕ ಕೌನ್ಸಲಿಂಗ್ ನಡೆಸಲಾಗುತ್ತದೆ.

ಹಲವು ವೃತ್ತಿಪರ ಕೋರ್ಸ್ ಪ್ರವೇಶ ಪರೀಕ್ಷೆ ಬರೆದು ವಿವಿಧ ಶ್ರೇಯಾಂಕ ಹೊಂದಿರುವ ಅಭ್ಯರ್ಥಿಗಳು ಒಂದು ವಿಷಯ ಗಮನಿಸಬೇಕು. ಸುಮಾರು 8 ಸಿಇಟಿ ಬರೆದು ಶ್ರೇಯಾಂಕ ಗಳಿಸಿದರೂ ಕನಿಷ್ಠ ಶ್ರೇಯಾಂಕ ಪಡೆದದ್ದು ಮಾತ್ರ ಪರಿಗಣಿಸಲಾಗುತ್ತದೆ.
ಮೆಡಿಕಲ್, ಇಂಜಿನಿಯರಿಂಗ್, NATA, ISH ಹಾಗೂ H, ಆಹಾರ ವಿಜ್ಞಾನ, ಕೃಷಿ, ಬಿ. ಟೆಕ್ Vet Sci rank ಗಳಲ್ಲಿ ಒಂದನ್ನು ಮಾತ್ರ ಕೌನ್ಸಲಿಂಗ್ ಸಂದರ್ಭದಲ್ಲಿ ಪರಿಗಣಿಸಲಾಗುತ್ತದೆ.
ಮೇ1 ಬುಧವಾರ ಮತ್ತು ಮೇ 2ರ ಗುರುವಾರ 287 ಕೇಂದ್ರಗಳಲ್ಲಿ ಪರೀಕ್ಷೆ ನಡೆದಿತ್ತು. 1.39 ಲಕ್ಷ ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದರು. ಹೊರನಾಡು ಮತ್ತು ಗಡಿನಾಡ ಕನ್ನಡಿಗರಿಗೆ ಮೇ 3ರಂದು ಪರೀಕ್ಷೆ ನಡೆಸಲಾಗಿತ್ತು.
ಈ ಪೈಕಿ 1.10 ಲಕ್ಷ ವಿದ್ಯಾರ್ಥಿಗಳು ಜೀವಶಾಸ್ರ್ರ ವಿಷಯ ಪರೀಕ್ಷೆ ಬರೆದಿದ್ದರು ಹಾಗೂ 1.22 ಲಕ್ಷ ವಿದ್ಯಾರ್ಥಿಗಳು ಗಣಿತ ವಿಷಯ ಪರೀಕ್ಷೆ ಬರೆದಿದ್ದರು ಎಂದು ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಮಾಹಿತಿ ನೀಡಿದೆ.
ಈ ಪೈಕಿ 38,623 ಮೆಡಿಕಲ್ ಹಾಗೂ ಡೆಂಟಲ್, 68,943 ಅಭ್ಯರ್ಥಿಗಳು ಭಾರತೀಯ ವೈದ್ಯ ಶಾಸ್ತ್ರ(ಆಯುರ್ವೇದ, ಸಿದ್ದ..ಇತ್ಯಾದಿ)ಮತ್ತು ಹೋಮಿಯೋಪತಿ ಪ್ರವೇಶ ಬಯಸಿದ್ದಾರೆ. ಜೂ.5 ರಿಂದ 23 ರ ತನಕ ವಿವಿಧ ಕೇಂದ್ರಗಳಲ್ಲಿ ಕೌನ್ಸಲಿಂಗ್ ನಡೆಯಲಿದ್ದು, ಶ್ರೇಯಾಂಕ ಆಧಾರದ ಮೇಲೆ ಯಾವ rank ಹೊಂದಿದವರು ಯಾವತ್ತು ಕೌನ್ಸಲಿಂಗ್ ಗೆ ಬರಬೇಕು ಎಂಬುದನ್ನು ನೋಡಿ












Click it and Unblock the Notifications