ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ತಮಿಳರ ಪಾಲಿಗೆ ಅನ್ನಪೂರ್ಣೆಯಾದ ಜಯಾ ಅಮ್ಮ

By Mahesh
|
Google Oneindia Kannada News

ಜನ ಸಾಮಾನ್ಯರಿಗೆ ಸುಲಭ ದರದಲ್ಲಿ ಊಟ ನೀಡುವ 'ಅಮ್ಮಾ ಕ್ಯಾಂಟೀನು'ಗಳು ಈಗ ತಮಿಳುನಾಡಿನ 10 ಊರುಗಳಲ್ಲಿಆರಂಭಗೊಳ್ಳಲಿದೆ. ಮುಖ್ಯಮಂತ್ರಿ ಜಯಲಲಿತಾ ಅವರು ಭಾನುವಾರ ಮಧುರೈ ನಗರದಲ್ಲಿ ಕ್ಯಾಂಟೀನು ಉದ್ಘಾಟಿಸಿದರು. ವಿಡಿಯೋ ಕಾನ್ಫರೆನ್ಸ್ ಮೂಲಕ ಮುಖ್ಯಮಂತ್ರಿ ಜೊತೆ ಜನ ಸಾಮಾನ್ಯರ ಅನುಭವವನ್ನು ಹಂಚಿಕೊಂಡಿದ್ದಾರೆ. ಎಲ್ಲರಿಗೂ ಸಲ್ಲುವ ಈ ಯೋಜನೆ ಮೂಲಕ ಜಯಾ ಅಮ್ಮ ಈಗ ಅನ್ನಪೂರ್ಣೆಯಾಗಿ ಕಾಣಿಸುತ್ತಿದ್ದಾರೆ.

ವರ್ಷದ ಆರಂಭದಲ್ಲಿ ಚೆನ್ನೈನಲ್ಲಿ ಶುರು ಮಾಡಿದ್ದ 1000 ಕ್ಯಾಂಟೀನುಗಳು ಭರ್ಜರಿ ಓಪನಿಂಗ್ ಪಡೆದುಕೊಂಡಿದೆ.ಎಲ್ಲಾ ವರ್ಗದ ಜನರ ಮೆಚ್ಚುಗೆ ಗಳಿಸಿದೆ. ಈ ಹಿನ್ನೆಲೆಯಲ್ಲಿ ಇತರ 9 ಪಟ್ಟಣಗಳಿಗೂ ವಿಸ್ತರಿಸಲಾಗಿದೆ.

ಈ ಕ್ಯಾಂಟೀನುಗಳ ಯಶಸ್ಸಿನ ಕಥೆ ಕೇಳುತ್ತಿದ್ದರೆ ಕರ್ನಾಟಕದಲ್ಲೂ ಈ ರೀತಿ ಕ್ಯಾಂಟೀನುಗಳನ್ನು ಸಿದ್ದರಾಮಯ್ಯ ಸರ್ಕಾರ ಏಕೆ ಆರಂಭಿಸಬಾರದು. ಬಡಬಗ್ಗರಿಗೆ ತಿಂಗಳಿಗೆ 30 ಕೆಜಿ ಅಕ್ಕಿ ಕೊಡುವ ಬದಲು ಊಟ ನೀಡುವ ಬಗ್ಗೆ ಸಿಎಂ ಸಿದ್ದು ಏಕೆ ಯೋಚಿಸಬಾರದು ಎಂಬ ಪ್ರಶ್ನೆ ಏಳುತ್ತದೆ.

ವಿಡಿಯೋ ಕಾನ್ಫೆರೆನ್ಸ್ ಮೂಲಕ ಸಿಎಂ ಜಯಲಲಿತಾ 'ಅಮ್ಮಾ ಉಣವಗಂ'ಗಳನ್ನ ಉದ್ಘಾಟಿಸಿದರು. ಮದುರೈ, ಕೊಯಂಬತ್ತೂರು, ತಿರುಚಿರಾಪಳ್ಳಿ, ತಿರುನೆಲ್ವೇಲಿ, ಸೇಲಂ, ತಿರುಪ್ಪೂರು, ತೂತ್ತುಕುಡಿ, ವೇಲೂರು ಮತ್ತು ಈರೋಡು ಪಟ್ಟಣಗಳಲ್ಲಿ ತಲಾ 10 "ಅಮ್ಮಾ ಉಣವಗಂ" ಕ್ಯಾಂಟೀನುಗಳು ಲಭ್ಯವಿರಲಿವೆ. ಚೆನ್ನೈ ನಗರದಲ್ಲಿ ಈಗಾಗಲೇ 200ಕ್ಕೂ ಹೆಚ್ಚು ಕ್ಯಾಂಟೀನುಗಳು ತಮ್ಮ ಶುಚಿ ರುಚಿ ಆಹಾರದ ಮೂಲಕ ಜನಪ್ರಿಯತೆ ಗಳಿಸಿದೆ.. ಜಯಾ ಅಮ್ಮ ಅವರ ಕ್ಯಾಂಟೀನು ಕಥೆ ಮುಂದಿನ ಸ್ಲೈಡ್ ಗಳಲ್ಲಿ ನಿಮ್ಮ ಮುಂದೆ.

1 ಇಡ್ಲಿಗೆ 1 ರು ಮಾತ್ರ

1 ಇಡ್ಲಿಗೆ 1 ರು ಮಾತ್ರ

ಜಯಾ ಅಮ್ಮಾ ಕ್ಯಾಂಟೀನುಗಳಲ್ಲಿ ಒಬ್ಬ ವ್ಯಕ್ತಿ ಕೇವಲ 10ರಿಂದ 20 ರುಪಾಯಿ ಖರ್ಚು ಮಾಡಿ ಮೂರು ಹೊತ್ತು ಊಟ ಮಾಡಬಹುದು. ಒಂದು ಇಡ್ಲಿಯ ದರ ಕೇವಲ 1 ರುಪಾಯಿ. ಅನ್ನ-ಸಾಂಬಾರ್ ಬೆಲೆ 5 ರು., ಮೊಸರನ್ನ 3 ರು.ಗೆ ದೊರಕುತ್ತದೆ.

ಉದ್ಘಾಟನೆಯಾಗುತ್ತಿದ್ದಂತೆಯೇ, ಈ ಕ್ಯಾಂಟೀನುಗಳು ಚೆನ್ನೈನಲ್ಲಿ ಭಾರೀ ಜನಪ್ರಿಯತೆ ಪಡೆದುಕೊಂಡಿವೆ. ಈ ಹೋಟೆಲುಗಳಲ್ಲಿ ಜನರು ಊಟಕ್ಕಾಗಿ ಸಾಲುಗಟ್ಟಿ ನಿಂತಿರುವ ದೃಶ್ಯ ಸಾಮಾನ್ಯವಾಗಿದೆ

ಹೆಚ್ಚಿದ ಮೆನು ಐಟಂಗಳು

ಹೆಚ್ಚಿದ ಮೆನು ಐಟಂಗಳು

ಅಮ್ಮಾ ಕ್ಯಾಂಟೀನುಗಳ ಜನಪ್ರಿಯತೆ ಹೆಚ್ಚಿದಂತೆಲ್ಲಾ ಇಡ್ಲಿ, ಅನ್ನ, ಮೊಸರನ್ನ ಐಟಂಗಳ ಜೊತೆಗೆ ಇನ್ನಷ್ಟು ಐಟಂಗಳನ್ನ ಸೇರಿಸುವಂತೆ ಒತ್ತಾಯಗಳು ಕೇಳಿಬರುತ್ತಿದ್ದವು.

ಈ ಹಿನ್ನೆಲೆಯಲ್ಲಿ, ಪೊಂಗಲ್, ಪಲಾವ್ ಮತ್ತು ಚಿತ್ರಾನ್ನಗಳನ್ನೂ ಆರಂಭಿಸಿದ್ದಾರೆ. 'ಅಮ್ಮಾ ಉಣವಗಂ'ನಲ್ಲಿ ಇನ್ನು ಮುಂದೆ ಇವೂ ಕೂಡ ಲಭ್ಯವಿರಲಿವೆ
ಟೆಕ್ಕಿಗಳಿಗೂ ಪ್ರಿಯವಾದ ಆಹಾರ

ಟೆಕ್ಕಿಗಳಿಗೂ ಪ್ರಿಯವಾದ ಆಹಾರ

ಬಡಬಗ್ಗರು, ಕೂಲಿಕಾರ್ಮಿಕರು ಮೊದಲಾದವರನ್ನ ಗುರಿಯಾಗಿಸಿಕೊಂಡು ವಿಶಿಷ್ಟ ಯೋಜನೆಯನ್ನು ಜಯಲಲಿತಾ ಅವರು ಆರಂಭಿಸಿದ್ದರು. ಆದರೆ, ಈ ಅಗ್ಗದ ಹೋಟೆಲುಗಳಲ್ಲಿ ಯಾರು ಬೇಕಾದರೂ ಹೋಗಿ ತಿನ್ನಬಹುದು.

ಚೆನ್ನೈನ ಅನೇಕ ಅಮ್ಮಾ ಕ್ಯಾಂಟೀನುಗಳಲ್ಲಿ ಸಾಫ್ಟ್ ವೇರ್ ಇಂಜಿನಿಯರ್ ಗಳು, ಸೇರಿದಂತೆ ವೃತ್ತಿಪರರು ಕೂಡ ಊಟ ಮಾಡುವುದು ಕಂಡು ಬಂದಿದೆ. ಶುಚಿ-ರುಚಿ, ಬಿಸಿಬಿಸಿಯಾಗಿ ಆಹಾರ ಸಿಗುವುದರಿಂದ ಕೆಲವೇ ದಿನಗಳಲ್ಲಿ ಈ ಕ್ಯಾಂಟೀನುಗಳು ಅತೀವ ಜನಪ್ರಿಯತೆ ಪಡೆದುಕೊಂಡಿವೆ

ಮಹಿಳಾ ಸಂಘಗಳ ಸಹಕಾರ

ಮಹಿಳಾ ಸಂಘಗಳ ಸಹಕಾರ

ಇದೀಗ, 9 ಪಟ್ಟಣಗಳಿಗೆ ಈ ಯೋಜನೆಯನ್ನ ವಿಸ್ತರಿಸಲಾಗಿದೆ. ಕ್ಯಾಂಟೀನು ಸಮಯ ಬೆಳಗ್ಗೆ 7 ಗಂಟೆಯಿಂದ 10 ಗಂಟೆ. ಮಧ್ಯಾಹ್ನ 12 ಗಂಟೆ ಇಂದ 3 ಗಂಟೆ. ಮಹಿಳಾ ಸ್ವಯಂ ಸೇವಾ ಸಂಘಗಳು ಪಾಲಿಕೆಗಳ ಜತೆ ಕೈಜೋಡಿಸಿ ಆಹಾರ ಹಂಚಿಕೆಯಲ್ಲಿ ತೊಡಗಿವೆ.

ಯಾರಿಗೆ ಖರ್ಚು ವೆಚ್ಚದ ಹೊಣೆ

ಯಾರಿಗೆ ಖರ್ಚು ವೆಚ್ಚದ ಹೊಣೆ

ಪ್ರತಿದಿನ ಬೆಳಗ್ಗಿನ ಅವಧಿಯಲ್ಲಿ 300 ರಿಂದ 500 ಜನ ಆಹಾರ ಸ್ವೀಕರಿಸುತ್ತಿದ್ದಾರೆ. ದಿನ ನಿತ್ಯಕ್ಕೆ 5000 ಇಡ್ಲಿ ಗಳನ್ನು ತಯಾರಿಸಲಾಗುತ್ತದೆ. ಪಾರ್ಸೆಲ್ ಸೌಲಭ್ಯ ಮಾತ್ರ ಇಲ್ಲ. ಕ್ಯಾಂಟೀನ್ ಯಶಸ್ವಿಯಾಗಿದ್ದು ಜಯಾ ಸರ್ಕಾರಕ್ಕೆ ಸಲ್ಲುತ್ತಿದ್ದೆ. ಆದರೆ, ಖರ್ಚು ವೆಚ್ಚದ ಹೊಣೆ ಮುನ್ಸಿಪಲ್ ಕಾರ್ಪೋರೇಷನ್ ಅಥವಾ ತಮಿಳುನಾಡು ಸರ್ಕಾರದ್ದೇ ಸ್ಪಷ್ಟವಾಗಿಲ್ಲ.

English summary
The Tamilnadu Chief Minister Jayalalithaa has announced 9 more Corporations will get the budget restaurants.TamilNadu Chief Minister J. Jayalalitha Ordered to 1000 Canteen opened for poor labours in Chennai Corporation. Here is success story of AMMA canteens
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X