ಚಿತ್ರ ಸುದ್ದಿ: ವಿಶ್ವ ಹಾಲು ದಿನಾಚರಣೆ, ಇನ್ನಷ್ಟು

ಬೆಂಗಳೂರು, ಜೂ.1: ವಿಶ್ವ ಹಾಲು ದಿನಾಚರಣೆಯನ್ನು ಜೂ.1 ರಂದು ಎಲ್ಲೆಡೆ ಆಚರಿಸಲಾಗುತ್ತಿದೆ. ಎಲ್ಲಾ ಬಗೆಯ ಪೌಷ್ಟಿಕಾಂಶಗಳನ್ನು ಹೊಂದಿರುವ ಹಲವಾರು ದೇಶಗಳ ದೈನಂದಿನ ಆಹಾರವಾಗಿ ಹಾಲು ಬಳಕೆಯಲ್ಲಿದೆ.

ಪ್ರತಿ ಲೀಟರ್ ಪೆಟ್ರೋಲ್ ದರದಲ್ಲಿ 75 ಪೈಸೆ ಏರಿಕೆಯಾಗಿದೆ. ಇಷ್ಟು ದಿನ ಇಳಿಕೆಯತ್ತ ಮುಖ ಮಾಡಿದ್ದ ಪೆಟ್ರೋಲ್ ಬೆಲೆ ದಿಢೀರ್ ಏರಿಕೆಯಾಗಿದೆ. ಪ್ರತಿ ಲೀಟರ್ ಪೆಟ್ರೋಲ್ ದರದಲ್ಲಿ 75 ಪೈಸೆ ಏರಿಕೆಯಾಗಿದ್ದು, ಶುಕ್ರವಾರ (ಮೇ.31) ಮಧ್ಯರಾತ್ರಿಯಿಂದಲೇ ನೂತನ ದರ ಜಾರಿಗೆ ಬರಲಿದೆ.

ಉಳಿದಂತೆ ಎವೆರೆಸ್ಟ್ ಸಾಹಸಿಗಳಾದ ಅರುಣಿಮಾ ಸಿನ್ಹಾ ಹಾಗೂ ಅವಳಿ ಸೋದರಿಯರು ಮನೆಗೆ ಮರಳಿದಾಗ ಸಿಕ್ಕ ಸಂಭ್ರಮದ ಚಿತ್ರಗಳಿದೆ. ಒರಿಸ್ಸಾ ಮೂಲದ ಎಸ್ ಕೆ ಚೌಧುರಿ ಬಿಎಸ್ ಎಫ್ ವಾಹನವನ್ನು ಎಳೆಯುವ ಸಾಹಸ ಮಾಡುತ್ತಿದ್ದಾರೆ ನೋಡಿ.. ಬೆಂಗಳೂರಿನಲ್ಲಿ ಮಳೆ, ಓಕ್ಲಾಹಮಾದಲ್ಲಿ ಪ್ರವಾಹ, ಇಂಗ್ಲೆಂಡಿನಲ್ಲಿ ಶುರುವಾದ ಚಾಂಪಿಯನ್ ಟ್ರೋಫಿ ಅಭ್ಯಾಸ ಪಂದ್ಯಗಳ ಚಿತ್ರ ಎಲ್ಲವೂ ನಿಮ್ಮ ಮುಂದಿದೆ..

ವಿಶ್ವ ಹಾಲು ದಿನಾಚರಣೆ

ವಿಶ್ವ ಹಾಲು ದಿನಾಚರಣೆ

ಸೂರತ್: ಜೂನ್.1 ರಂದು ಎಲ್ಲೆಡೆ ವಿಶ್ವ ಹಾಲು ದಿನಾಚರಣೆ ನಡೆಯುತ್ತಿದ್ದು ತನ್ನಿಮಿತ್ತ ಮೇಕೆಯೊಂದು ತನ್ನ ಮರಿಗೆ ಹಾಲು ನೀಡುತ್ತಿರುವ ದೃಶ್ಯ

ಶ್ರೀನಿ ಅಕ್ಕ ಪಕ್ಕದವರು ಔಟ್

ಶ್ರೀನಿ ಅಕ್ಕ ಪಕ್ಕದವರು ಔಟ್

ಬಿಸಿಸಿಐ ಅಧ್ಯಕ್ಷ ಎನ್ ಶ್ರೀನಿವಾಸನ್ ಅವರ ಎಡಬದಿ ಕುಳಿತಿರುವ ಅಜಯ್ ಶಿರ್ಕೆ, ಬಲಬದಿಯಲ್ಲಿರುವ ಸಂಜಯ್ ಜಗದಾಳೆ ಇಬ್ಬರು ಬಿಸಿಸಿಐಗೆ ರಾಜೀನಾಮೆ ಸಲ್ಲಿಸಿ ಹೊರನಡೆದಿದ್ದಾರೆ. ಬಿಸಿಸಿಐ ತುರ್ತು ಕಾರ್ಯಕಾರಿ ಸಭೆ ಭಾನುವಾರ ನಡೆಯುವ ಸಾಧ್ಯತೆಯಿದೆ.

ಗಿನ್ನೆಸ್ ವೀರನ್ ಕೂದಲು ಗಟ್ಟಿ

ಗಿನ್ನೆಸ್ ವೀರನ್ ಕೂದಲು ಗಟ್ಟಿ

ಶ್ರೀನಗರ: ನಾಲ್ಕು ಬಾರಿ ಗಿನ್ನೆಸ್ ಬುಕ್ ಆಫ್ ರೆಕಾರ್ಡ್ ನಲ್ಲಿ ದಾಖಲೆ ಬರೆದಿರುವ ಒಡಿಸಾ ಮೂಲದ ಎಸ್ಕೆ ಚೌಧುರಿ ಅವರು ಗಡಿ ಭದ್ರತಾ ಪಡೆ(ಬಿಎಸ್ ಫ್) ವಾಹನವನ್ನು ತಮ್ಮ ಕೂದಲಿಗೆ ಕಟ್ಟಿ ಎಳೆಯುತ್ತಿದ್ದಾರೆ.

ಶತಕವೀರ ಮಾರ್ಟಿನ್

ಶತಕವೀರ ಮಾರ್ಟಿನ್

ಲಂಡನ್: ನ್ಯೂಜಿಲೆಂಡ್ ನ ಮಾರ್ಟಿನ್ ಗಪ್ಟಿಲ್ ಶತಕ ಬಾರಿಸಿದ ಸಂಭ್ರಮದಲ್ಲಿ ಕೈ ಎತ್ತಿದ್ದಾರೆ.ಶನಿವಾರ ಲಾರ್ಡ್ ಮೈದಾನದಲ್ಲಿ ನಡೆದ ಮೊದಲ ಏಕದಿನ ಪಂದ್ಯದಲ್ಲಿ ಇಂಗ್ಲೆಂಡ್ ವಿರುದ್ಧ ನ್ಯೂಜಿಲೆಂಡ್ ತಂಡ ಐದು ವಿಕೆಟ್ ಗಳ ಸುಲಭ ಜಯ ದಾಖಲಿಸಿದೆ.

ಪ್ರವಾಹದಲ್ಲಿ ಕಾರುಗಳು

ಪ್ರವಾಹದಲ್ಲಿ ಕಾರುಗಳು

ಓಕ್ಲಹಾಮ ನಗರ: ಶುಕ್ರವಾರ ತಡರಾತ್ರಿ ಪ್ರವಾಹಕ್ಕೆ ಸಿಲುಕಿದ ವಾಹನಗಳು. ಇತ್ತೀಚೆಗೆ ಚಂಡಮಾರುತ ದಾಳಿಗೆ ಸಿಲುಕಿದ್ದ ಓಕ್ಲಹಾಮದಲ್ಲಿ ಭಾರಿ ಮಳೆ ಸುರಿದಿದೆ.

ಎವೆರೆಸ್ಟ್ ಸಾಧಕಿ ಅರುಣಿಮಾ

ಎವೆರೆಸ್ಟ್ ಸಾಧಕಿ ಅರುಣಿಮಾ

ರಾಂಚಿ: ಬಿರ್ಸಾ ಮುಂಡಾ ಏರ್ ಪೋರ್ಟ್ ಗೆ ಬಂದಿಳಿಸಿದ ಎವೆರೆಸ್ಟ್ ಆರೋಹಿಗಳಾದ ಅರುಣಿಮಾ ಸಿನ್ಹಾ ಹಾಗೂ ಸುಸೆನ್ ಮಹಾತೋ ಅವರಿಗೆ ಭರ್ಜರಿ ಸ್ವಾಗತ ಸಿಕ್ಕಿದೆ.

ಅರುಣಿಮಾ ಅವರು ಕೃತಕ ಕಾಲು ಬಳಸಿ ಎವೆರೆಸ್ಟ್ ಹತ್ತಿ ಇಳಿಯುವಲ್ಲಿ ಯಶಸ್ವಿಯಾಗಿದ್ದರು.
ಎವೆರೆಸ್ಟ್ ಸಾಧಕಿ ಸೋದರಿಯರು

ಎವೆರೆಸ್ಟ್ ಸಾಧಕಿ ಸೋದರಿಯರು

ಡೆಹ್ರಾಡೂನ್: ಅವಳಿ ಸೋದರಿಯರಾದ ತಾಶಿ ಅಹಗೂ ನುಂಗ್ಶಿ ಮಲ್ಲಿಕ್ ಅವರು ತಮ್ಮ ಪೋಷಕರಿಗೆ ಎವೆರೆಸ್ಟ್ ಪರ್ವತಾರೋಹಣದ ಚಿತ್ರಗಳನ್ನು ತೋರಿಸುತ್ತಿದ್ದಾರೆ.

ವಿಶ್ವ ಹಾಲು ದಿನಾಚರಣೆ

ವಿಶ್ವ ಹಾಲು ದಿನಾಚರಣೆ

ಪಾಟ್ನ: ಸಂಜಯ್ ಗಾಂಧಿ ಬಯೋಲಾಜಿಕಲ್ ಪಾರ್ಕ್ ನಲ್ಲಿ ನವಜಾತ ಶಿಶುವಿಗೆ ಹಾಲುಣಿಸುತ್ತಿರುವ ಖಡ್ಗಮೃಗ

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+