ಫಿಕ್ಸಿಂಗ್ ಕೋಡ್: ಧೋನಿ -ಹೆಲಿಕಾಪ್ಟರ್, ಶ್ರೀ- ರೊಟ್ರು

ನವದೆಹಲಿ, ಮೇ. 30: ಸ್ಪಾಟ್ ಫಿಕ್ಸಿಂಗ್ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗಳ ಬೆನ್ನು ಹತ್ತಿರುವ ಮುಂಬೈ ಪೊಲೀಸರು, ಬುಕ್ಕಿಗಳು ಹಾಗೂ ಕ್ರಿಕೆಟರ್ ಗಳ ನಡುವಿನ ಸಂಪರ್ಕ ಜಾಲ ಕೊಂಡಿಯನ್ನು ಹುಡುಕಿದ್ದಾರೆ. ಭೂಗತ ಜಗತ್ತಿನ ಜೊತೆ ಸಂಪರ್ಕ ಹೊಂದಲು ಬಳಸುತ್ತಿದ್ದ ಕೋಡ್ ನೇಮ್ ಗಳನ್ನು ಮುಂಬೈ ಪೊಲೀಸರು ಬಹಿರಂಗ ಪಡಿಸಿದ್ದಾರೆ.

ಶ್ರೀಶಾಂತ್, ಗುರುನಾಥ್ ಸೇರಿದಂತ್ ಪ್ರಮುಖ ಆರೋಪಿಗಳ ಫೋನ್ ಕರೆಗಳನ್ನು ಡಿಕೋಡ್ ಮಾಡುತ್ತಿರುವ ಮುಂಬೈ ಪೊಲೀಸರಿಗೆ ಹಲವು ಕುತೂಹಲ ವಿಷಯಗಳು ಗೋಚರಿಸಿದೆ.ವಿಂದೂ ದಾರಾ ಸಿಂಗ್ ನೆರವಿನಿಂದ ಕ್ರೈಂ ಬ್ರ್ಯಾಂಚ್ ಪೊಲೀಸರಿಗೆ ಸಿಕ್ಕಿರುವ ಮಾಹಿತಿ ಪ್ರಕಾರ ಎಸ್ ಶ್ರೀಶಾಂತ್ ಗೆ 'ರೊಟ್ರು', ಗುರುನಾಥ್ ಮೇಯಪ್ಪನ್ ಗೆ 'ಗುರು' ಹಾಗೂ ವಿಂದೂ ಗೆ 'ಜಾಕ್' ಎಂದು ಕರೆಯಲಾಗುತ್ತಿದೆಯಂತೆ.

IPL spot fixing codes: Dhoni - Helicopter, Sreesanth - Rotru

ಈ ಬಗ್ಗೆ ವಿಸ್ತೃತ ವರದಿ ನೀಡಿರುವ ಟೈಮ್ಸ್ ಆಫ್ ಇಂಡಿಯಾ ಈ ಎಲ್ಲಾ ಮಾಹಿತಿಗಳು ಹಾಗೂ ಶ್ರೀಶಾಂತ್ ಬಳಿ ಇದ್ದ ಡೈರಿ, ಐಪ್ಯಾಡ್ ಗಳಲ್ಲಿ ಸಿಕ್ಕಿರುವ ಕೋಡ್ ಸಾಮ್ಯತೆ ಹೊಂದಿದೆ ಎಂದು ಪೊಲೀಸರು ಹೇಳಿದ್ದಾರೆ.

'lagaya Rs 5, khaya Rs 3' ಎಂದು ಗುರು ಹಾಗೂ ವಿಂದೂ ನಡುವಿನ ಸಂಭಾಷಣೆ ನಡೆದಿರುವುದು ದೃಢಪಟ್ಟಿದೆ. ಇದಕ್ಕೆ ಉತ್ತರವಾಗಿ ಶಾನು ಎಂಬ ಬುಕ್ಕಿ ಜಾಕ್ ಗೆ 2 gaya ಎಂದು ಉತ್ತರಿಸಿದ್ದಾನೆ. ಇದರ ಜೊತೆಗೆ ಬುಕ್ಕಿ ಪ್ರವೀಣ್ ಬೆಹ್ರಾ(PD) ಜೀರೋ ಬ್ಯಾಲೆನ್ಸ್ ಎಂದು ಮಾತಾಡಿಕೊಂಡಿದ್ದಾರೆ.

ಬುಕ್ಕಿಗಳ ಗುಪ್ತಪದಗಳಲ್ಲಿ ನಾಯಕ ಧೋನಿಗೆ 'ಹೆಲಿಕಾಪ್ಟರ್', ವೆಸ್ಟ್ ಇಂಡೀಸ್ ಕ್ರಿಕೆಟರ್ ಕ್ರಿಸ್ ಗೇಲ್ ಗೆ 'ರಾವಣ್', ಲಸಿಂಗ್ ಮಾಲಿಂಗಗೆ 'ಮಕ್ಕಿ', ಯುವರಾಜ್ ಸಿಂಗ್ ಗೆ 'ಮಾಡೆಲ್' ಎಂದು ಕೋಡ್ ನೀಡಲಾಗಿದೆ.

ಇದಲ್ಲದೆ, ಸಿನಿಮಾ ನಟಿ, ಮಾಡೆಲ್, ಕಾಲ್ ಗರ್ಲ್ಸ್ ಗಳಿಗೂ ಪ್ರತ್ಯೇಕ ಕೋಡ್ ಹೆಸರುಗಳನ್ನು ಬಳಸಲಾಗಿದೆ. ಗುರುನಾಥ್ ಬಳಸುತ್ತಿದ್ದ ಮೊಬೈಲ್ ನಲ್ಲಿ ಅನೇಕ ಕೋಡ್ ಪತ್ತೆಯಾಗಿದ್ದು ಇದರ ಮಾಲೀಕ ಕಮಲನಾಥ್ ಎಂಬುವರು ಎಂದು ತಿಳಿದು ಬಂದಿದೆ.

"PJ bhai 1 aaya chidiya" (ಪವನ್ ಜೈಪುರ), SJ bhai, Dilli-wale baba--zero balance(ದೆಹಲಿ ಮೂಲದ ಬುಕ್ಕಿ ಸಂಜಯ್ ಜೈಪುರ, ಬುಕ್ಕಿ ಟಿಂಕು(ಬಾಬಾ)) Victor boss - 0.25 aaya (ಚೆನ್ನೈ ಮೂಲದ ಹೊಟೆಲ್ ಉದ್ಯಮಿ ವಿಕ್ರಮ್ ಅಗರವಲ್ 25 ಪೈಸೆ ಬೆಟ್)

ಈ ಹಿಂದಿನ ಅಪ್ದೇಟ್ : ಸ್ಪಾಟ್ ಫಿಕ್ಸಿಂಗ್ ಪ್ರಕರಣದಲ್ಲಿ ಉತ್ತರ ಪ್ರದೇಶದ ಆಟಗಾರರು ಭಾಗಿಯಾಗಿದ್ದಾರೆ ಎಂದು ಸ್ಥಳೀಯ ಪೊಲೀಸರು ಅನುಮಾನ ಪಟ್ಟಿದ್ದು, ಆರ್ ಸಿಬಿ ತಂಡದ ಆರ್.ಪಿ ಸಿಂಗ್ ಸೇರಿದಂತೆ ಐಪಿಎಲ್ ನಲ್ಲಿ ಭಾಗವಹಿಸಿದ್ದ ಯುಪಿಯ 10 ಆಟಗಾರರ ಮೇಲೆ ಪೊಲೀಸರು ಕಣ್ಣಿಟ್ಟಿದ್ದಾರೆ. ಶಂಕಿತರಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಎಡಗೈ ಬ್ಯಾಟ್ಸ್ ಮನ್ ಸುರೇಶ್ ರೈನಾ ಪ್ರಮುಖವಾಗಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+