ತುಂಟ ಬಾಲಕನಿಗೆ ಮದರಸಾದಲ್ಲಿ ಅಮಾನವೀಯ ಶಿಕ್ಷೆ

Naughty boy chained in Madarasa in Malavalli
ಮಳವಳ್ಳಿ, ಮೇ. 29 : ವಿಪರೀತ ತುಂಟನಾಗಿದ್ದಕ್ಕೆ ಹತ್ತು ವರ್ಷದ ಬಾಲಕನಿಗೆ ಮುಸ್ಲಿಂ ಶಾಲೆ ಮದರಸಾ ನೀಡಿದ ಶಿಕ್ಷೆಯೇನು ಗೊತ್ತಾ? 20 ಕಿ.ಗ್ರಾಂ. ತೂಕದ ಕಲ್ಲನ್ನು ಸರಪಳಿ ಹಾಕಿ ಆತನಿಗೆ ಕಟ್ಟಿ ಕೂಡಿಸಿದ್ದು!

ಈ ಅಮಾನವೀಯ ಘಟನೆ ನಡೆದಿದ್ದು ಮಂಡ್ಯ ಜಿಲ್ಲೆಯ ಮಳವಳ್ಳಿಯಲ್ಲಿ. ತೌಹಿತ್ ಎಂಬ 10 ವರ್ಷದ ಬಾಲಕನನ್ನು ಸರಪಳಿ ಬಂಧನದಿಂದ ಮಂಗಳವಾರ ರಕ್ಷಿಸಲಾಗಿದೆ. ಈ ಆಘಾತಕರ ಸುದ್ದಿಗಿಂತಲೂ ಆಘಾತಕರ ಸುದ್ದಿಯೆಂದರೆ, ಶಿಕ್ಷೆ ನೀಡಿದ್ದನ್ನು ಶಿಕ್ಷಕರು ಮತ್ತು ಪಾಲಕರು ಸಮರ್ಥಿಸಿಕೊಂಡಿದ್ದು.

ಬಾಲಕನಿಗೆ ಇಂಥ ಅಮಾನವೀಯ ಶಿಕ್ಷೆ ನೀಡಲಾಗಿದೆ ಎಂಬ ಸುದ್ದಿ ತಿಳಿಯುತ್ತಿದ್ದಂತೆ ತಹಶೀಲ್ದಾರ್ ರಾಜೇಶ್ ಅವರು ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಜೊತೆ ಶಾಲೆಗೆ ಭೇಟಿ ನೀಡಿ, ಪೊಲೀಸರ ಸಹಾಯದಿಂದ ಬಾಲಕನನ್ನು ರಕ್ಷಿಸಿದ್ದಾರೆ. ಆತನನ್ನು ಆತನ ತಾಯಿಯ ಸುಪರ್ದಿಗೆ ನೀಡಲಾಗಿದೆ.

ಬಾಲಕ ಮತ್ತು ಮದರಸಾ ವಿರುದ್ಧ ಬಾಲಕನನ್ನು ಅಮಾನವೀಯವಾಗಿ ಶಿಕ್ಷಿಸಿದ ಕಾರಣ ಗ್ರಾಮೀಣ ಠಾಣೆಯಲ್ಲಿ ಕೇಸು ದಾಖಲಿಸಲಾಗಿದೆ ಎಂದು ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಅಧ್ಯಕ್ಷ ವೆಂಕಟೇಶ್ ಹೇಳಿದ್ದಾರೆ. ಮಕ್ಕಳು ತುಂಟತನ ಮಾಡುವುದೇ ಇಲ್ಲವಾ? ತುಂಟ ಮಕ್ಕಳಿಗೆ ಇಂಥ ಶಿಕ್ಷೆ ನೀಡಿದ್ದು ಎಷ್ಟು ಸರಿ?

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+