'ಮಂತ್ರಿಯಾಗುವ ಆಸೆ ಇನ್ನು ನನಗಿಲ್ಲ'

no-more-wait-for-minister-post-disappointed-motamma
ಹಾಸನ, ಮೇ 27- ರಾಜ್ಯ ಕಾಂಗ್ರೆಸ್ ಮೊನ್ನೆ ಏಪ್ರಿಲ್ ತಿಂಗಳಲ್ಲಿ ವಿಧಾನಸಭೆ ಚುನಾವಣೆಗಾಗಿ ಒಂದು ಪಟ್ಟಿಯನ್ನು ಹಿಡಿದು ಪಕ್ಷಾಧ್ಯಕ್ಷೆ ಸೋನಿಯಾಗಾಂಧಿ ಅವರನ್ನು ಭೇಟಿಯಾಗಿತ್ತು. ಅದನ್ನು ನೋಡಿ ಕೆಂಡಾಮಂಡಲರಾದ ಸೋನಿಯಾ ಏನಿದು ಒಬ್ಬೇ ಒಬ್ಬ ಮಹಿಳೆಯ ಹೆಸರಿಲ್ಲ ಪಟ್ಟಿಯಲ್ಲಿ. ಈ ಪಟ್ಟಿಗೆ ನನ್ನ ಸಹಮತವಿಲ್ಲ ಎಂದು ಗದರಿಕೊಂಡಿದ್ದರು.

ಅದು ಮೇಲ್ಮನೆ ಸದಸ್ಯೆ ಮೋಟಮ್ಮ ಅವರ ಕಿವಿಗೆ ಬಿದ್ದಿದ್ದೇ ತಡ. 'ಅರೆ ತಾವೂ ಮಹಿಳೆಯೇ ಅಲ್ವಾ. ಮೇಡಂ ತಮ್ಮಂತಹವರ ಬಗ್ಗೆಯೇ ಅಲ್ವಾ ಮಾತನಾಡಿರುವುದು' ಎಂದು ಒಂದಷ್ಟು ಮಹಿಳಾಮಣಿಗಳನ್ನು ಕರೆದೊಯ್ದು ದೆಹಲಿಯಲ್ಲಿ ಬೀಡುಬಿಟ್ಟರು. ಚಾಪೆ, ದಿಂಬು ಹಾಸಿಕೊಂಡು ಜನಪಥ್ ರಸ್ತೆಯಲ್ಲೇ ಮಲಗಿದ್ದರು. ಹಾಗೆ ಅವರು ಪಾದರಸದಂತೆ ಸಕ್ರಿಯರಾಗಿದ್ದು ಮುಂದೆ ಪಕ್ಷ ಅಧಿಕಾರಕ್ಕೆ ಬಂದರೆ ತಮಗೆ ಮಂತ್ರಿ ಪದವಿ ದಕ್ಕಲಿ ಎಂಬ ಸದುದ್ದೇಶದಿಂದ.

ಆದರೆ ಇದೀಗ ಮೇಡಂ ಸೋನಿಯಾ ಅವರು ಮೇಡಂ ಮೋಟಮ್ಮ ಅವರಿಗೆ ಶ್ಯಾನೆ ನಿರಾಶೆಯನ್ನುಂಟುಮಾಡಿದ್ದಾರೆ. ಅದು ಅವರಿಗೂ ಅರ್ಥವಾದಂತಾಗಿದ್ದು ನನಗಿನ್ನು ಮಂತ್ರಿಗಿರಿ ಸಿಗುವ ನಿರೀಕ್ಷೆಯಿಲ್ಲ ಎಂದು 'ಕೈ' ಚೆಲ್ಲಿದ್ದಾರೆ.

ಕಾಂಗ್ರೆಸ್ಸಿನಲ್ಲಿ ಹಿರಿಯಾಳು ಎಂಬ ಕಾರಣಕ್ಕೆ ನನ್ನನ್ನು ಗುರುತಿಸುತ್ತದೆ ಅಂದುಕೊಂಡಿದ್ದೆ. ಕಳೆದ ವಾರ ನಡೆದ ಮೊದಲ ಸಂಪುಟ ವಿಸ್ತರಣೆಯಲ್ಲಿ ಮಂತ್ರಿ ಸ್ಥಾನ ಸಿಗುತ್ತದೆ ಎಂಬ ನಿರೀಕ್ಷೆ ಹುಸಿಯಾಗಿದೆ. ಮುಂದೆ ಸಿಗುತ್ತದೆ ಎಂಬ ಆಸೆ ಕೈಬಿಟ್ಟಿದ್ದೇನೆ ಎಂದು ವಿಧಾನಪರಿಷತ್ ಸದಸ್ಯೆ ಮೋಟಮ್ಮ ಅವರು ವಿಷಾದದಿಂದ ಹೇಳಿದ್ದಾರೆ.

ಇರುವ ಅವಕಾಶದಲ್ಲೇ ನನಗೆ ನೀಡಿರುವ ಅಧಿಕಾರ ಸಾಕು ಎಂದು ಹೈಕಮಾಂಡಿಗೆ ಅನಿಸಿರಬೇಕು ಅಥವಾ ಸಿಎಂ ನಿರ್ಧಾರವೋ ಗೊತ್ತಿಲ್ಲ ಎಂದು ಗುಪ್ತಗಾಮಿನಿಯಂತೆ ತಮ್ಮ ದುಃಖವನ್ನು ಹೊರಹಾಕಿದ್ದಾರೆ. 'ಸಿದ್ದರಾಮಯ್ಯನವರು ಮುಖ್ಯಮಂತ್ರಿಯಾಗಲು ತಮ್ಮ ಕೊಡುಗೆಯೂ ಇದೆ' ಎಂದು ಮೋಟಮ್ಮ ಅವರು ಇತ್ತೀಚೆಗೆ ಹೇಳಿದ್ದು ಗಮನಾರ್ಹ.

'ಹಾಗಂತ ನನಗೇನೂ ಬೇಸರವಾಗಿಲ್ಲ. ಮಂತ್ರಿ ಪದವಿ ಕೈತಪ್ಪಿತು ಎಂದು ಕೈಕಟ್ಟಿಕೊಂಡು ಕುಳಿತುಕೊಳ್ಳುವುದಿಲ್ಲ. ಪಕ್ಷಕ್ಕಾಗಿ ಎಂದಿನಂತೆ ದುಡಿಯುತ್ತೇನೆ' ಎಂದು ಮೋಟಮ್ಮ ಅವರು ಸ್ಪಷ್ಟಪಡಿಸಿದರು.

ಯಾರು ಬೇಕಾದರೂ ಸಚಿವರಾಗಬಹುದು:
'ಮುಂದೊಂದು ದಿನ ತಂಗಡಗಿ ಡ್ರೈವರ್ ಸಹ ಸಚಿವರಾಗಬಹುದು. ಯಾರಿಗೆ ಗೊತ್ತು, ಇದು ಪ್ರಜಾಪ್ರಭುತ್ವ' ಎಂದು ಹಿರಿಯ ಶಾಸಕ ಬಸವರಾಜ ರಾಯರೆಡ್ಡಿ ಅವರು ತಮಗೆ ಮಂತ್ರಿ ಪದವಿ ನೀಡದಿರುವುದಕ್ಕೆ ತೀವ್ರ ಅತೃಪ್ತಿ ವ್ಯಕ್ತಪಡಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+