ಐಗೇಟ್: ಫಣೀಶ್ ಮೂರ್ತಿ- ರೋಜ್ ಗೆ ಹೆಣ್ಣುಮಗು

ಆದರೆ ಇದೀಗ ಮಾಧ್ಯಮ ವರದಿಗಳ ಪ್ರಕಾರ ಪರಿಸ್ಥಿತಿಯಿಂದ ಎಸ್ಕೇಪ್ ಆಗಲು ಸಾಧ್ಯವಿಲ್ಲದಂತೆ 49 ವರ್ಷದ ಸ್ತ್ರೀಲೋಲ ಫಣೀಶ್ ಗೆ ಆತಂಕಕಾರಿ ಸಂಗತಿಯೊಂದು ಹೊರಬಿದ್ದಿದೆ. ಏನಪಾ ಅಂದರೆ ಸದರಿ ಮಹಿಳಾ ಉದ್ಯೋಗಿ (Araceli Roiz) ಗರ್ಭಿಣಿಯಾಗಿದ್ದು, ಆಕೆಯ ಮಡಿಲಲ್ಲಿರುವುದು ಹೆಣ್ಣು ಮಗು ಎಂದು ಪತ್ರಿಕೆಯೊಂದು ವರದಿ ಮಾಡಿದೆ.
ಮೊನ್ನೆ ಮೊನ್ನೆಯವರೆಗೂ ಅಂದರೆ ಮೇ 14ರವರೆಗೂ ಎಲ್ಲವೂ ಸುಸೂತ್ರವಾಗಿಯೇ ನಡೆದಿತ್ತು. ಆದರೆ ಆ ಜೋಡಿಯ ಮಧ್ಯೆ ಆಮೇಲೆ ಅದೇನಾಯಿತೋ ಎಲ್ಲವೂ ಖುಲ್ಲಂ ಖುಲ್ಲಾ ಆಗಿದೆ. ಇದಕ್ಕೆ ಪುಷ್ಠಿ ನೀಡುವಂತೆ Facebook ಖಾತೆಯಲ್ಲಿ ಅರಾಸೆಲಿ ರೋಜ್ ಮತ್ತು ಫಣಿ ಮಧ್ಯೆ ಹರಿದಾಡಿರುವ ಪೋಸ್ಟಿಂಗಿಗಳಲ್ಲಿ ತಮಗೆ ಹೆಣ್ಣು ಮಗು ಆಗುತ್ತಿರುವ ಬಗ್ಗೆ ಹೇಳಿಕೊಂಡಿದ್ದಾರೆ ಎಂದು ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿದೆ.
ಆದರೆ ಈಗ ಇಬ್ಬರ ನಡುವಣ ಸಂಬಂಧ ಕಹಿಯಾಗಿದೆ. ಅರಾಸೆಲಿ ರೋಜ್ ವಕೀಲರನ್ನು ನೇಮಿಸಿಕೊಂಡಿದ್ದು ಫಣಿ ವಿರುದ್ಧ ಕಾನೂನಾತ್ಮಕ ಹೋರಾಟ ನಡೆಸುವುದಾಗಿ ಘೋಷಿಸಿದ್ದಾಳೆ. ಕ್ಯಾಲಿಫೋರ್ನಿಯಾದ ಕಾನೂನು ಸೇವಾ ಸಂಸ್ಥೆ ಫಣಿ ವಾದ ಸರಣಿಯನ್ನು ತಳ್ಳಿ ಹಾಕಿದ್ದು ತನ್ನ ಕಕ್ಷಿದಾರಳು ಗರ್ಭವತಿಯಾಗಿದ್ದು, ಹೆಣ್ಣು ಮಗುವಿಗೆ ಜನ್ಮ ನೀಡಲಿದ್ದಾರೆ ಎಂದು ಹೇಳಿಕೊಂಡಿದೆ.
ಮೊದಲು ತಮ್ಮ ಸಂಬಂಧವನ್ನು ಮುಚ್ಚಿಹಾಕಲು ಗರ್ಭ ತೆಗೆಸಿಹಾಕು ಎಂದಿದ್ದ ಫಣಿ, ರೋಜ್ ಅದಕ್ಕೆ ಒಪ್ಪಿಗೆ ಸೂಚಿಸದಿದ್ದಾಗ ಅಟ್ ಲೀಸ್ಟ್ ಕೆಲಸ ಬಿಟ್ಟುಬಿಡು. ಅದರಿಂದ ನನ್ನ ಸಿಇಒ ಸ್ಥಾನ ಉಳಿಸಿಕೊಳ್ಳಬಹುದು ಎಂದೂ ಗೋಗರೆದಿದ್ದರಂತೆ.
ಕಂಪನಿಗೂ ಪೀಕಲಾಟ: ಫಣಿ ಈ ಹಿಂದೆಯೂ ಇನ್ಫೋಸಿಸ್ ನಲ್ಲಿದ್ದಾಗ ಇಂತಹುದೇ 'ಅವಘಡ' ಮಾಡಿಕೊಂಡಿದ್ದರು. ಹಾಗಾಗಿ ಫಣಿ ತಮ್ಮ ಕಂಪನಿಯಲ್ಲಿ ಹೇಗೆ ನಡೆಸುಕೊಳ್ಳುತ್ತಿದ್ದಾರೆ ಎಂಬುದರ ಬಗ್ಗೆ ಐಗೇಟ್ ಎಚ್ಚರ ವಹಿಸಬೇಕಿತ್ತು. ಹಾಲಿ ಪ್ರಕರಣದಲ್ಲಿ, ಅಮೆರಿಕದ ಕಾನೂನುರೀತ್ಯ ಫಣಿ ಜತೆಗೆ ಐಗೇಟ್ ಸಹ ಬಾಧ್ಯಸ್ಥವಾಗುತ್ತದೆ' ಎಂದು ರೋಜ್ ವಕೀಲರು ಹೇಳಿದ್ದಾರೆ.












Click it and Unblock the Notifications