ಫಣೀಶ್ ಮೇಲೆ ಕಾನೂನು ಸಮರಕ್ಕೆ ರೊಯಿಜ್ ಸಜ್ಜು
ಕ್ಯಾಲಿಫೋರ್ನಿಯಾ, ಮೇ.23: ಅರಸೆಲಿ ರೊಯಿಜ್ ಅವರೊಡನೆ ಅನುಚಿತವಾಗಿ ವರ್ತಿಸಿ ಲೈಂಗಿಕ ಕಿರುಕುಳ ಹೊಂದಿದ ಆರೋಪದ ಮೇಲೆ ಫಣೀಶ್ ಮೂರ್ತಿ ಅವರು ಐಗೇಟ್ ತೊರೆಯಬೇಕಾಯಿತು. ಈಗ ರೊಯಿಜ್ ಅವರು ಗರ್ಭಿಣಿಯಾಗಿದ್ದು, ಫಣೀಶ್ ವಿರುದ್ಧ ಲಕ್ಷಾಂತರ ಡಾಲರ್ ಗಳ ಮೊಕದ್ದಮೆ ಹೂಡಲು ಸಜ್ಜಾಗಿದ್ದಾರೆ ಎಂದು ತಿಳಿದು ಬಂದಿದೆ.
ರೋಯಿಜ್ ಅವರು ಬೇಡದ ಗರ್ಭವನ್ನು ತೆಗೆಸಲು ನಿರಾಕರಿಸಿದ್ದು, ಅಬಾರ್ಷನ್ ಗೆ ಒಪ್ಪಿಲ್ಲ. ರೊಯಿಜ್ ಅವರನ್ನು ಕೆಲಸದಿಂದ ತೆಗೆದು ಹಾಕಲು ಫಣೀಶ್ ಯತ್ನಿಸಿದ್ದರು. ಜೊತೆ ಸಂಬಂಧವನ್ನು ಗುಪ್ತವಾಗಿ ಇರಿಸಿಕೊಳ್ಳಲು ಯೋಜಿಸಿದ್ದರು ಎಂದು ರೋಯಿಜ್ ಪರ ಕಾನೂನು ಸಂಸ್ಥೆ ಐಮಾನ್ ಸ್ಮಿತ್ ಅಂಡ್ ಮರ್ಸಿ ಪತ್ರಿಕಾ ಹೇಳಿಕೆ ನೀಡಿದೆ.

ಈ ಘಟನೆ ನಂತರ ಮೂರ್ತಿ ಅವರು ಐಗೇಟ್ ಬೋರ್ಡಿಗೆ ಈ ವಿಷಯ ತಿಳಿಸಿದರು. ಅಷ್ಟರಲ್ಲಿ ಬೋರ್ಡ್ ಸದಸ್ಯರಿಗೆ ಇವರಿಬ್ಬರ ಸಂಬಂಧದ ಬಗ್ಗೆ ಮಾಹಿತಿ ಸಿಕ್ಕಿತ್ತು. ಈಗ ರೋಯಿಜ್ ಪರವಾಗಿ ಕಾನೂನು ಸಮರ ನಡೆಸುತ್ತಿದ್ದೇವೆ ಮೂರ್ತಿ ಹಾಗೂ ಐಗೇಟ್ ವಿರುದ್ಧ ಕ್ರಮಕ್ಕೆ ಆಗ್ರಹಿಸುತ್ತ್ತೇವೆ ಎಂದು ಕಾನೂನು ಸಂಸ್ಥೆ ಹೇಳಿದೆ.
ಇದಕ್ಕೂ ಮುನ್ನ ಫೋರ್ಬ್ ಇಂಡಿಯಾ ಜೊತೆ ಮಾತನಾಡುತ್ತಾ ಮೂರ್ತಿ ಅವರು, ಸತ್ಯಕ್ಕೆ ಎರಡು ಮುಖಗಳಿರುತ್ತದೆ. ಪ್ರಕರಣ ಈಗ ಕೋರ್ಟ್ ಮೆಟ್ಟಿಲೇರುವ ಹಂತದಲ್ಲಿದೆ ಹೀಗಾಗಿ ನಾನು ಹೆಚ್ಚು ಪ್ರತಿಕ್ರಿಯಿಸಲಾರೆ ಎಂದಿದ್ದರು. ರೋಯಿಜ್ ಸದ್ಯಕ್ಕೆ ಮೆಡಿಕಲ್ ರಜೆ ಪಡೆದಿದ್ದಾರೆ. ಫ್ರಿಮಾಂಟ್ ನಿವಾಸದಲ್ಲಿ ಕುಳಿತು ವಿಡಿಯೋ ಕಾನ್ಫರೆನ್ಸ್ ಮೂಲಕ ಮೂರ್ತಿ ತಮ್ಮ ರಾಜೀನಾಮೆ ಬಗ್ಗೆ ಸಾರ್ವಜನಿಕ ಹೇಳಿಕೆ ನೀಡಿದ್ದರು.
ಫಸ್ಟ್ ಪೋಸ್ಟ್ ನ ವರದಿಗಾರರು ರೋಯಿಜ್ ಪರ ಕಾನೂನು ಸಂಸ್ಥೆಯೊಡನೆ ಮಾತನಾಡಿ ಕೆಲವು ಕುತೂಹಲ ಪ್ರಶ್ನೆಗಳನ್ನು ಕೇಳಿದ್ದಾರೆ.
ಪ್ರಶ್ನೆ : ಐಗೇಟ್ ಸೇರುವ ಮೊದಲು ರೋಯಿಜ್ ಹಾಗೂ ಮೂರ್ತಿಗೆ ಗೆಳತನವಿತ್ತಾ?
ಉತ್ತರ: ಇಲ್ಲ
ಪ್ರ: ಗರ್ಭಧಾರಣೆ ಬಗ್ಗೆ ರೋಯಿಜ್ ಗೆ ಯಾವಾಗ ತಿಳಿಯಿತು?
ಉ: ಮಾರ್ಚ್ 2013
ಪ್ರ: ತಮ್ಮಿಬ್ಬರ ಸಂಬಂಧದ ಬಗ್ಗೆ ಬೋರ್ಡ್ ಗೆ ಮೂರ್ತಿ ಯಾವಾಗ ಹೇಳಿದರು?
ಉ: ಮೇ 2, 2013
ಪ್ರ: ಐಗೇಟ್ ನಿಂದ ರೋಯಿಜ್ ಹೊರ ಹಾಕಲು ಫಣೀಶ್ ಯತ್ನಿಸಿದ್ದರೆ?
ಉ: ಹೌದು, ಐಗೇಟ್ ತೊರೆಯುವಂತೆ ಸೂಚಿಸಿದ್ದರು.
ರೋಯಿಜ್ ಪರ ವಕೀಲರು ನೀಡಿರುವ ಪತ್ರಿಕಾ ಹೇಳಿಕೆ ಪೂರ್ಣ ಪಾಠ ಇಲ್ಲಿದೆ












Click it and Unblock the Notifications