ಸಿಎಂ ಸಿದ್ದು ಮಾಧ್ಯಮ ಸಲಹೆಗಾರರಾಗಿ ದಿನೇಶ್

ಪಿ.ಕೆ.ಶ್ರೀನಿವಾಸ್ ಸಲಹೆಗಾರರಾಗಿದ್ದರಿಂದ ಅಂದಿನ ಮುಖ್ಯಮಂತ್ರಿ ದೇವರಾಜ ಅರಸು ಅವರ ಸಾರ್ವಜನಿಕ ವ್ಯಕ್ತಿತ್ವ ಹೆಚ್ಚಾಗಿತ್ತು. ಜಗದೀಶ್ ಅವರು ಆಗಿನ ಸಿಎಂ ಯಡಿಯೂರಪ್ಪ ಅವರಿಗೆ ಆಗಾಗ ಕಿವಿ ಮಾತು ಹೇಳಿದ್ದು ಹೆಚ್ಚಿನ ಲಾಭ ತರಲಿಲ್ಲ ಎಂಬ ಮಾತು ಮಾಧ್ಯಮ ವಲಯದಲ್ಲಿದೆ. ಈಗ ದಿನೇಶ್ ಅವರ ಬಗ್ಗೆ ಕೂಡಾ ಕುತೂಹಲ ಹೆಚ್ಚಿದೆ.
ಮಾಧ್ಯಮಗಳ ಮುಂದೆ ನಡೆದುಕೊಳ್ಳುವ ರೀತಿ ನೀತಿ ಹೇಗಿರಬೇಕು? ಏನು ಹೇಳಬೇಕು? ಎಷ್ಟೂ ಹೇಳಬೇಕು? ಯಾವ ಮಾಧ್ಯಮ ಯಾವ ರೀತಿ ಚಿಂತಿಸುತ್ತಿದೆ. ಸರ್ಕಾರದ ಇಮೇಜ್ ಯಾವ ರೀತಿ ಉಳಿಸಿಕೊಳ್ಳಬೇಕು ಎಂಬ ಹಲವು ಅಂಶಗಳ ಬಗ್ಗೆ ಮುಖ್ಯಮಂತ್ರಿಗಳಿಗೆ ಮಾಧ್ಯಮ ಸಲಹೆಗಾರರು ಆಗಾಗ ತಿಳಿ ಹೇಳುತ್ತಿರುತ್ತಾರೆ.
ರಾಜ್ಯ ಕರಾವಳಿ ಭಾಗದ ಉಡುಪಿ ತಾಲೂಕಿನ ಮಟ್ಟು ಗ್ರಾಮದ ದಿನೇಶ್ ಅಮಿನ್ ಅವರು 1983ರಿಂದ ಪತ್ರಿಕಾರಂಗದಲ್ಲಿದ್ದಾರೆ. ಮುಂಗಾರು ಪತ್ರಿಕೆಯಲ್ಲಿ ದುಡಿದ ನಂತರ 1989ರಲ್ಲಿ 'ಪ್ರಜಾವಾಣಿ' ಸೇರಿದ ಮೇಲೆ ರಾಜಕೀಯ ವಿಶ್ಲೇಷಕರಾಗಿ ಜನಪ್ರಿಯತೆ ಗಳಿಸಿದರು. ದೇವರಾಜ್ ಅರಸ್ ಹೆಸರಿನ ಪ್ರಶಸ್ತಿ ಕೂಡಾ ಅವರನ್ನು ಹುಡುಕಿಕೊಂದು ಬಂದಿತ್ತು.
ಜಾತ್ಯಾತೀತ ನಿಲುವಿನ ದಿನೇಶ್ ತಮ್ಮ ಹೊಸ ಜವಾಬ್ದಾರಿಯಲ್ಲಿ ನಿರ್ವಹಿಸುವುದರ ಜೊತೆಗೆ ಪ್ರಜಾವಾಣಿ ಹುದ್ದೆಯನ್ನು ನಿರ್ವಹಿಸುತ್ತಾರಾ ಇಲ್ಲವಾ ಎಂಬ ಕುತೂಹಲ ಕೂಡಾ ಇದೆ. ದಿನೇಶ್ ಅವರಿಗೆ ಒನ್ ಇಂಡಿಯಾ ಕನ್ನಡ ತಂಡದಿಂದ ಶುಭ ಹಾರೈಕೆಗಳು.












Click it and Unblock the Notifications