ಯಡಿಯೂರಪ್ಪ ಇನ್ನು ಬಿಜೆಪಿಗೆ ವಾಪಸ್ ಬರೋಲ್ಲ

'ಸ್ವಚ್ಛ ಆಡಳಿತ ನೀಡಬೇಕು ಎಂಬ ಬದ್ಧತೆಗೆ ಕಟಿಬದ್ಧರಾಗಿ ಯಡಿಯೂರಪ್ಪ ಅವರ ವಿರುದ್ಧ ನಾವು ನಿರ್ಣಯ ತೆಗೆದುಕೊಂಡೆವು. ಅದು ಯಾವುದೇ ವ್ಯಕ್ತಿಯ ವಿರುದ್ಧ ತೆಗೆದುಕೊಂಡ ನಿರ್ಣಯವಲ್ಲ. ಅಕ್ರಮ ಗಣಿಗಾರಿಕೆ ಕುರಿತಾದ ಲೋಕಾಯುಕ್ತ ವರದಿ ಅದಕ್ಕೆ ಹೇತುವಾಯಿತು' ಎಂದು ನಾಯ್ಡು ಹೇಳಿದರು.
'ಕರ್ನಾಟಕದಲ್ಲಿ ಬಿಜೆಪಿ ಸೋತಿದ್ದಕ್ಕೆ ತನಗೇನೂ ಆಶ್ಚರ್ಯವಾಗಿಲ್ಲ' ಎಂದು ಹಿರಿಯ ನಾಯಕ ಎಲ್ ಕೆ ಆಡ್ವಾಣಿ ಅವರು ತಮ್ಮ ಬಲ್ಆಗ್ ನಲ್ಲಿ ಬರೆದುಕೊಂಡಿರುವ ಬಗ್ಗೆ ಪ್ರತಿಕ್ರಯಿಸಿದ ವೆಂಕಯ್ಯ ನಾಯ್ಡು, ಹೌದು ನಾವೇನೂ ಕಾಂಗ್ರೆಸ್ಸಿನಂತೆ ಅಲ್ಲ. ದಿಲ್ಲಿ ಮುಖ್ಯಮಂತ್ರಿ ಶೀಲಾ ದೀಕ್ಷಿತ್ ಅವರ ವಿರುದ್ಧ ಲೋಕಾಯುಕ್ತ ವರದಿ ಬಂದಿದ್ದರೂ ಆ ಪಕ್ಷ ಅವರ ವಿರುದ್ಧ ಯಾವುದೇ ಕ್ರಮ ಕೈಗೊಳ್ಳಲಿಲ್ಲ. ಆದರೆ ನಾವು ಲೋಕಾಯುಕ್ತ ವರದಿ ವ್ಯತಿರಿಕ್ತವಾಗಿ ಬರುತ್ತಿದ್ದಂತೆ ಅಂದಿನ ಸಿಎಂ ಯಡಿಯೂರಪ್ಪನವರನ್ನು ಕುರ್ಚಿಯಿಂದ ಇಳಿಸಿದೆವು' ಎಂದು ಹೇಳಿದರು.
ಯಡಿಯೂರಪ್ಪನವರ ಕೆಜೆಪಿ ಮೊದಲ ಪ್ರಯತ್ನದಲ್ಲೇ ಶೇ. 10ಕ್ಕೂ ಹೆಚ್ಚು ಮತಗಳಿಸಿಲ್ಲಾ ಎಂಬ ಪ್ರಶ್ನೆಗೆ ಎಚ್ಚರಿಕೆಯಿಂದ ಉತ್ತರಿಸಿದ ನಾಯ್ಡು, ಬಿಜೆಪಿಯ ಪ್ರಮುಖ ಸ್ಪರ್ಧಿ ಕಾಂಗ್ರೆಸ್ ಎಂದಷ್ಟೇ ಹೇಳಿ ಜಾರಿಕೊಂಡರು. ಸಣ್ಣಪುಟ್ಟ ಪಕ್ಷಗಳಿಗೆ ಮತ ಹಾಕುವುರಿಂದ ಕಾಂಗ್ರೆಸ್ಸಿಗೆ ವರವಾಯಿತು ಎಂಬುದನ್ನು ಮತದಾರರು ಅರಿತುಕೊಳ್ಳಬೇಕು ಎಂದೂ ವೆಂಕಯ್ಯ ನಾಯ್ಡು ಇದೇ ವೇಳೆ ಮಾರ್ಮಿಕವಾಗಿ ಹೇಳಿದರು.
ಕರ್ನಾಟಕದಲ್ಲಿ ಯುದ್ಧ ಗೆದ್ದ ಸಂತೋಷದಲ್ಲಿರುವ ಕಾಂಗ್ರೆಸ್ಸಿಗೆ ನಿಜವಾಗಿಯೂ ತಾಕತ್ತಿದ್ದರೆ ಈಗಲೇ ಲೋಕಸಭೆ ಚುನಾವಣೆ ನಡೆಸಲಿದೆ. ಜತೆಗೆ ಇನ್ನು 5 ರಾಜ್ಯಗಳಿಗೆ ಚುನಾವಣೆ ನಡೆಯಬೇಕಿದೆ. ಅದೂ ನಡೆದುಹೋಗಲಿ. ಗೆಲುವು ಯಾರದು? ಜನ ಯಾರ ಪರ ಇದ್ದಾರೆ ಎಂಬುದು ಕಾಂಗ್ರೆಸ್ಸಿಗೆ ಗೊತ್ತಾಗುತ್ತದೆ ಎಂದು ನಾಯ್ಡು ಸವಾಲೆಸೆದರು.












Click it and Unblock the Notifications