ಚಿತ್ರಗಳಲ್ಲಿ : ಸಿದ್ದು ಸಂಭ್ರಮ, ಬಿಸಿಲು, ಬೆಂಕಿ
ಬೆಂಗಳೂರು, ಮೇ.9: ಕರ್ನಾಟಕ ವಿಧಾನಸಭೆ ಚುನಾವಣೆ 2013ರಲ್ಲಿ ಭರ್ಜರಿ ಫಲಿತಾಂಶ ಹೊರ ಹಾಕಿರುವ ಕಾಂಗ್ರೆಸ್ ಪಕ್ಷ ಅಧಿಕಾರ ಹಿಡಿಯುವ ಸಂಭ್ರಮದಲ್ಲಿದೆ. ಮುಖ್ಯಮಂತ್ರಿ ರೇಸ್ ನಲ್ಲಿ ಅಗ್ರಸ್ಥಾನದಲ್ಲಿರುವ ಸಿದ್ದರಾಮಯ್ಯ ಅವರು ಮೈಸೂರಿನ ವರುಣಾ ಕ್ಷೇತ್ರದಲ್ಲಿ ಸಂಭ್ರಮಿಸಿದ ದೃಶ್ಯ ನಿಮಗಾಗಿ ನೀಡುತ್ತಿದ್ದೇವೆ.
ಉಳಿದಂತೆ ಪಾಕಿಸ್ತಾನದಲ್ಲಿ ಸಾರ್ವತ್ರಿಕ ಚುನಾವಣೆ ಹಿನ್ನಲೆಯಲ್ಲಿ ಕ್ರೈಂ ರೇಟ್ ಹೆಚ್ಚುತ್ತಿದೆ. ಪ್ರಚಾರವೂ ಜೋರಾಗಿದೆ. ಮೊನ್ನೆ ವೇದಿಕೆಯಿಂದ ಕುಸಿದು ಬಿದ್ದು ಆಸ್ಪತ್ರೆ ಸೇರಿದ್ದ ಮಾಜಿ ಕ್ರಿಕೆಟಿಗ ರಾಜಕಾರಣಿ ಇಮ್ರಾನ್ ಖಾನ್ ಆರೋಗ್ಯ ಸ್ಥಿತಿ ಕೊಂಚ ಸುಧಾರಿಸಿದೆ.
ಈ ನಡುವೆ ಮುಲ್ತಾನ್ ನಲ್ಲಿ ಮಾಜಿ ಪ್ರಧಾನಿ ಯೂಸುಫ್ ರಾಜಾ ಗಿಲಾನಿ ಅವರ ಪುತ್ರನನ್ನು ಅಪರಿಚಿತ ಬಂದೂಕುಧಾರಿ ವ್ಯಕ್ತಿ ಅಪಹರಿಸಿದ್ದಾನೆ. ಪಾಕಿಸ್ತಾನ ಪೀಪಲ್ಸ್ ಪಾರ್ಟಿ ಮೆರವಣಿಗೆ ಸಂದರ್ಭದಲ್ಲಿ ಈ ಘಟನೆ ನಡೆದಿದೆ. ಅಪಹರಣ ವೇಳೆ ನಡೆದ ಗುಂಡಿನ ದಾಳಿಯಲ್ಲಿ ಗಿಲಾನಿ ಆಪ್ತ ಕಾರ್ಯದರ್ಶಿ ಮೊಹಿದ್ದೀನ್ ಸಾವನ್ನಪ್ಪಿದ್ದು ಸುಮಾರು 10 ಜನಕ್ಕೆ ಗಾಯಗಳಾಗಿದೆ.
ಉಳಿದಂತೆ, ಐಪಿಎಲ್ ನಲ್ಲಿ ಹೈದರಾಬಾದಿನ ಸನ್ ರೈಸರ್ಸ್ ವಿರುದ್ಧ ಬುಧವಾರ ನಡೆದ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ 77 ರನ್ ಗೆಲವು ಸಾಧಿಸಿತು. ಮೊದಲು ಬ್ಯಾಟ್ ಮಾಡಿದ್ದ ಚೆನ್ನೈ ನಿಗದಿತ 20 ಓವರ್ ಗಳಲ್ಲಿ 3 ವಿಕೆಟ್ ನಷ್ಟಕ್ಕೆ 223 ರನ್ ಗಳಿಸಿತ್ತು. ಈ ಮೊತ್ತವನ್ನು ಬೆನ್ನಟ್ಟಿದ ಹೈದರಾಬಾದ್, 20 ಓವರ್ ಗಳಲ್ಲಿ 8 ವಿಕೆಟ್ ಕಳೆದುಕೊಂಡು 146 ರನ್ ಗಳಿಸಿತು. ಇನ್ನಷ್ಟು ಸುದ್ದಿ ಚಿತ್ರಗಳನ್ನು ತಪ್ಪದೇ ನೋಡಿ

ಚಿತ್ರಗಳಲ್ಲಿ ನೋಡಿ ಇತ್ತೀಚಿನ ಸುದ್ದಿಗಳು
ಕಾಂಗ್ರೆಸ್ ಪಕ್ಷದ ಮುಖ್ಯಮಂತ್ರಿ ಅಭ್ಯರ್ಥಿ ಸಿದ್ದರಾಮಯ್ಯ ಅವರು ವರುಣಾ ಕ್ಷೇತ್ರದಲ್ಲಿ ಅಭಿಮಾನಿಗಳ ಜೊತೆ ಗೆಲುವಿನ ಸಂಭ್ರಮಾಚರಣೆಯಲ್ಲಿ ತೊಡಗಿರುವುದು

ಚಿತ್ರಗಳಲ್ಲಿ ನೋಡಿ ಇತ್ತೀಚಿನ ಸುದ್ದಿಗಳು
ಸೋತ ಮುಖಗಳು: ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಅವರು ರಾಜ್ಯಪಾಲರನ್ನು ಭೇಟಿ ಮಾಡಿ ರಾಜೀನಾಮೆ ಕೊಟ್ಟ ಹೊರ ಬಂದ ನಂತರ, ರಾಜ್ಯಾಧ್ಯಕ್ಷ ಪ್ರಹ್ಲಾದ್ ಜೋಶಿ, ಆರ್ ಅಶೋಕ್ ಅವರು ಜೊತೆ ಸುದ್ದಿಗಾರರನ್ನು ಎದುರಿಸಿದ್ದು ಹೀಗೆ

ಚಿತ್ರಗಳಲ್ಲಿ ನೋಡಿ ಇತ್ತೀಚಿನ ಸುದ್ದಿಗಳು
ಮಥುರಾ: ಇಲ್ಲಿನ ರಿಫೈನರಿ ಬಳಿ ಹೊತ್ತಿ ಉರಿದ ಟ್ಯಾಂಕರ್

ಚಿತ್ರಗಳಲ್ಲಿ ನೋಡಿ ಇತ್ತೀಚಿನ ಸುದ್ದಿಗಳು
ಹೈದರಾಬಾದ್: ಐಪಿಎಲ್ ಪಂದ್ಯದಲ್ಲಿ ಸನ್ ರೈಸರ್ಸ್ ಮೇಲೆ ಗೆದ್ದ ಸಂಭ್ರಮದಲ್ಲಿ ಚೆನ್ನೈ ಸೂಪರ್ ಕಿಂಗ್ಸ್

ಚಿತ್ರಗಳಲ್ಲಿ ನೋಡಿ ಇತ್ತೀಚಿನ ಸುದ್ದಿಗಳು
ನಾಗಾಲ್ಯಾಂಡ್ : ಮುಂಗಾರು ಆರಂಭಕ್ಕೂ ಮುನ್ನ ಪ್ರವಾಹ ಎದುರಿಸುತ್ತಿರುವ ರಾಜ್ಯ. ದಿಮಾಪುರದಲ್ಲಿ ಮಕ್ಕಳನ್ನು ರಕ್ಷಿಸುತ್ತಾ ಪ್ರವಾಹದಲ್ಲಿ ಸಾಗುತ್ತಿರುವ ಮಹಿಳೆ

ಚಿತ್ರಗಳಲ್ಲಿ ನೋಡಿ ಇತ್ತೀಚಿನ ಸುದ್ದಿಗಳು
ಮಾಸ್ಕೋ: ರಷ್ಯಾದ ಅಧ್ಯಕ್ಷ ವ್ಲಾದ್ಮಿಮಿರ್ ಪುಟೀನ್ ಅವರ ಜೊತೆ ಪ್ರಧಾನಿ ಡಿಮಿಟ್ರಿ ಮೆಡ್ವೆಡೆವ್(ಮಧ್ಯ) ಹಾಗೂ ರಕ್ಷಣಾ ಸಚಿವ ಸರ್ಗೆಯ್ ಶೊಗು ಅವರು 1945ರಲ್ಲಿ ಜರ್ಮನ್ನಿನ ನಾಜಿಗಳ ಮೇಲಿನ ವಿಜಯೋತ್ಸವದ ನೆನಪಿನ ವಿಕ್ಟರಿ ಡೇ ಪೆರೇಡ್ ನಲ್ಲಿ ಭಾಗವಹಿಸಿದಾಗ ಸೆರೆ ಸಿಕ್ಕ ದೃಶ್ಯ.

ಚಿತ್ರಗಳಲ್ಲಿ ನೋಡಿ ಇತ್ತೀಚಿನ ಸುದ್ದಿಗಳು
ಮುಲ್ತಾನ್ ನಲ್ಲಿ ಮಾಜಿ ಪ್ರಧಾನಿ ಯೂಸುಫ್ ರಾಜಾ ಗಿಲಾನಿ ಅವರ ಪುತ್ರನನ್ನು ಅಪರಿಚಿತ ಬಂದೂಕುಧಾರಿ ವ್ಯಕ್ತಿ ಅಪಹರಿಸಿದ್ದಾನೆ.

ಚಿತ್ರಗಳಲ್ಲಿ ನೋಡಿ ಇತ್ತೀಚಿನ ಸುದ್ದಿಗಳು
ರಾವಲ್ಪಿಂಡಿ: ಮೇ.11 ರ ಚುನಾವಣೆಗೆ ಆಟೋರಿಕ್ಷಾವನ್ನು ಚುನಾವಣಾ ಪ್ರಚಾರಕ್ಕೆ ಬಳಸಿಕೊಂಡಿರುವುದು ಹೀಗೆ

ಚಿತ್ರಗಳಲ್ಲಿ ನೋಡಿ ಇತ್ತೀಚಿನ ಸುದ್ದಿಗಳು
ನವದೆಹಲಿ: ರೈಸಿನಾ ಹಿಲ್ ಕಡೆಗೆ ಸಾಗುವ ರಾಜಪಥದಲ್ಲಿ ಬಿಸಿಲಿನ ಬೇಗೆಯಲ್ಲಿ ಕೊಡೆ ಹಿಡಿದು ನಡೆಯುತ್ತಿರುವ ಮಹಿಳೆಯರು. PTI Photo by Manvender Vashist












Click it and Unblock the Notifications