ಶಿವಮೊಗ್ಗ : ಶಿಕಾರಿಪುರಕ್ಕೆ ಯಡಿಯೂರಪ್ಪ ಕಿಂಗ್

20 ಸಾವಿರಕ್ಕೂ ಅಧಿಕರ ಮತಗಳ ಅಂತರದಿಂದ ಗೆಲುವು ಸಾಧಿಸಿರುವ ಯಡಿಯೂರಪ್ಪ ಬಿಜೆಪಿ, ಕಾಂಗ್ರೆಸ್ ಮತ್ತು ಜೆಡಿಎಸ್ ಅಭ್ಯರ್ಥಿಗಳಿಗೆ ಸರಿಯಾಗಿ ಸೋಲಿನ ರುಚಿ ತೋರಿಸಿದ್ದಾರೆ. ಆದರೆ, ಕೆಜೆಪಿ ಪಕ್ಷದ ಮುಖಂಡರಾದ ಸಿ.ಎಂ.ಉದಾಸಿ, ಶೋಭಾ ಕರಂದ್ಲಾಜೆ, ಎಂ.ಪಿ.ರೇಣುಕಾಚಾರ್ಯ ಸೋಲು ಅನುಭವಿಸಿರುವುದು ಯಡಿಯೂರಪ್ಪ ಅವರನ್ನು ಚಿಂತೆಗೆ ದೂಡಿದೆ.
ರಾಜ್ಯ ರಾಜಕಾರಣದ ಪ್ರಭಾವಿ ನಾಯಕ ಬಿ.ಎಸ್.ಯಡಿಯೂರಪ್ಪ ಶಿಕಾರಿಪುರ ಕ್ಷೇತ್ರದಲ್ಲಿ ಪಕ್ಷವನ್ನೂ ಮೀರಿ ಬೆಳೆದಿರುವ ನಾಯಕ ಎಂಬುದು ಚುನಾವಣೆ ಗೆಲುವಿನಿಂದ ಸಾಬೀತಾಗಿದೆ. ಆದರೆ, ಕೆಜೆಪಿ ಪಕ್ಷ ಸರ್ಕಾರ ರಚಿಸಲಿದೆ ಎಂಬ ಯಡಿಯೂರಪ್ಪ ಮಾತು ಸುಳ್ಳಾಗಿದ್ದು, ರಾಜ್ಯದ ಮತದಾರ ಪ್ರಭುಗಳು ಕಾಂಗ್ರೆಸ್ ಕೈ ಕುಲುಕಿದ್ದಾರೆ.
ಕಳೆದ ಚುನಾವಣೆಯಲ್ಲಿ ಎಸ್.ಬಂಗಾರಪ್ಪ ಅವರ ವಿರುದ್ಧ 45 ಸಾವಿರಕ್ಕೂ ಅಧಿಕರ ಮತಗಳಿಂದ ಜಯಗಳಿಸಿದ್ದರು. ಅದಕ್ಕೆ ಹೋಲಿಸಿದರೆ ಈ ಬಾರಿಯ ಗೆಲುವಿನ ಅಂತರ ಕಡಿಮೆ ಯಾಗಿದೆ.
ಯಾರು ಎಷ್ಟು ಮತ ಪಡೆದರು
ಬಿ.ಎಸ್.ಯಡಿಯೂರಪ್ಪ - 69126
ಶಾಂತ ವೀರಪ್ಪ ಗೌಡ - 44701
ಹೆಚ್.ಟಿ.ಬಳಿಗಾರ್ - 15007












Click it and Unblock the Notifications