ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೈ ಅಧಿಕಾರಕ್ಕೆ, ಪರಮೇಶ್ವರ್ ಗೆ ಸೋಲು

|
Google Oneindia Kannada News

Parameshwar
ತುಮಕೂರು, ಮೇ 8 : ಕಾಂಗ್ರೆಸ್ ಪಕ್ಷ ರಾಜ್ಯದಲ್ಲಿ ಅಧಿಕಾರದ ಗದ್ದುಗೆ ಹಿಡಿಯುವುದು ಖಚಿತವಾದರೂ ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್ ಅವರು ಮಾತ್ರ ಸೋಲು ಅನುಭವಿಸಿದ್ದಾರೆ. ಕೈಗೆ ಬಂದ ತುತ್ತು ಬಾಯಿಗೆ ಬರಲಿಲ್ಲ ಎಂಬಂತಹ ಪರಿಸ್ಥಿತಿ ಪರಮೇಶ್ವರ್ ಅವರದ್ದಾಗಿದೆ.

2008ರ ಚುನಾವಣೆಯಲ್ಲಿ ಕೊರಟಗೆರೆ ಕ್ಷೇತ್ರದಿಂದ ಗೆಲುವು ಸಾಧಿಸಿ ವಿಧಾನಸಭೆ ಪ್ರವೇಶಿಸಿದ್ದ ಪರಮೇಶ್ವರ್, ಕಾಂಗ್ರೆಸ್ ಸಾರಥ್ಯ ವಹಿಸಿಕೊಂಡಿದ್ದರು. ಈ ಬಾರಿಯ ಚುನಾವಣೆಯನ್ನು ಅವರ ನೇತೃತ್ವದಲ್ಲಿಯೇ ಎದುರಿಸಲಾಗಿತ್ತು. ಆದರೆ, ಪಕ್ಷಕ್ಕೆ ಬಹುಮತ ದೊರೆತರೂ ಪರಮೇಶ್ವರ್ ಸೋತಿದ್ದಾರೆ.

ಮೊದಲ ಮೂರು ಸುತ್ತಿನ ಮತ ಎಣಿಕೆಯಲ್ಲಿ ಪರಮೇಶ್ವರ್ ಮುನ್ನಡೆ ಸಾಧಿಸಿದ್ದರು. ಆದರೆ, ನಂತರ ಜೆಡಿಎಸ್ ಅಭ್ಯರ್ಥಿ ಸುಧಾರಕ್ ಲಾಲ್ ಪರಮೇಶ್ವರ್ ಅವರಿಗಿಂತ ಮುನ್ನಡೆ ಸಾಧಿಸಿದರು. ಪರಮಶ್ವರ್ ಪ್ರತಿ ಸ್ಪರ್ಧೆ ಒಡ್ಡಲು ಸಾಧ್ಯವಿಲ್ಲದಂತೆ ಸುಧಾಕರ್ ಲಾಲ್ 7000 ಮತಗಳ ಅಂತರ ಕಾಯ್ದಕೊಂಡರು.

ಕೊನೆಯ ಸುತ್ತಿನ ವರೆಗೂ ಮುನ್ನಡೆ ಕಾಯ್ದಕೊಂಡ ಸುಧಾಕರ್ ಲಾಲ್ ಪರಮೇಶ್ವರ್ ಅವರನ್ನು ಸೋಲಿಸಿದರು. ಮಧುಗಿರಿ ಕ್ಷೇತ್ರದಿಂದ ಸ್ಪರ್ಧಿಸುತ್ತಿದ್ದ ಪರಮೇಶ್ವರ್ ಕ್ಷೇತ್ರ ಪುನರ್ ವಿಂಗಡನೆಯ ನಂತರ ಕೊರಟಗೆರೆ ಕ್ಷೇತ್ರಕ್ಕೆ ಬಂದಿದ್ದರು.

ಮೂರು ಬಾರಿ ಮಧುಗಿರಿಯಿಂದ ಗೆಲುವು ಸಾಧಿಸಿ ವಿಧಾನಸಭೆ ಪ್ರವೇಶಿಸಿದ್ದ ಪರಮೇಶ್ವರ್, 2008ರ ಚುನಾವಣೆಯಲ್ಲಿ ಕೊರಟಗೆರೆ ಕ್ಷೇತ್ರದಿಂದ ಗೆದಿದ್ದರು. ಕ್ಷೇತ್ರದಲ್ಲಿ ಪರಮೇಶ್ವರ್ ಕೆಲಸ ಮಾಡಿಲ್ಲ ಎಂಬ ಆರೋಪ ಪರಮಶ್ವರ್ ಅವರ ಮೇಲೆ ಕೇಳಿಬಂದಿತ್ತು.

ಕೆಪಿಸಿಸಿ ಅಧ್ಯಕ್ಷ ಎಂಬ ಪಟ್ಟವನ್ನು ಪರಿಗಣಿಸದೇ ಮತದಾರರು ಪರಮೇಶ್ವರ್ ಅವರಿಗೆ ಸೋಲಿನ ರುಚಿ ತೋರಿಸಿದ್ದಾರೆ. ರಾಜ್ಯದಲ್ಲಿ ಪಕ್ಷ ಅಧಿಕಾರ ಪಡೆದರೂ ತಾವು ಗೆಲುವು ಸಾಧಿಸಲಿಲ್ಲ ಎಂಬ ಕೊರಗು ಪರಮೇಶ್ವರ್ ಅವರನ್ನು ಕಾಡಲಿದೆ.

ಯಾರು ಎಷ್ಟು ಮತ ಪಡೆದರು

ಸುಧಾಕರ್ ಲಾಲ್ - 72229
ಜಿ.ಪರಮೇಶ್ವರ್ - 54074

ಸೋತವರು ಮತ್ತು ಗೆದ್ದವರ ಪಟ್ಟಿ ನೋಡಿಸೋತವರು ಮತ್ತು ಗೆದ್ದವರ ಪಟ್ಟಿ ನೋಡಿ

English summary
Karnataka assembly Election 2013 Results. In Tumkur district Koratagere constituency JDS candidate Sudakarlal defeated KPCC president G.Parameshwar. Congress get majority in election, but unfortunately G.Parameshwar lost his constituency.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X