ಬೆಂಗಳೂರು ಸ್ಫೋಟ: ಟಾರ್ಗೆಟ್ ಇದ್ದಿದ್ದೇ ಬೇರೆ!

ಬಾಂಬ್ ಸ್ಫೋಟಕ್ಕೂ ಮುನ್ನ ಹಾಗೂ ಆ ನಂತರ ಉಮ್ಮಾ ಸದಸ್ಯರ ನಡುವೆ ಮೊಬೈಲ್ ಹಾಗೂ ಲ್ಯಾಂಡ್ ಲೈನ್ ಮೂಲಕ ನಡೆದಿರುವ ಸಂಭಾಷಣೆಯನ್ನು ಕಲೆ ಹಾಕಿರುವ ಪೊಲೀಸರಿಗೆ ಆಘಾತಕಾರಿ ಮಾಹಿತಿ ಸಿಕ್ಕಿದೆ.
ಬಿಜೆಪಿ ಕಚೇರಿ ಬಳಿ ಬಾಂಬ್ ಸ್ಫೋಟ ನಡೆದ ಐದೇ ನಿಮಿಷದಲ್ಲಿ ತಮಿಳುನಾಡಿಗೆ ಸಂದೇಶವೊಂದು ರವಾನೆಯಾಗಿದೆ. 'v r success. but could not reach target' ಎಂಬ ಉಗ್ರರ ಸಂದೇಶ ಬೆಂಗಳೂರು ಪೊಲೀಸರ ನಿದ್ದೆ ಕೆಡಿಸಿದೆ.
ಹಾಗಾದರೆ ಉಗ್ರರ ನಿಜವಾದ ಟಾರ್ಗೆಟ್ ಏನಾಗಿತ್ತು? ಯಾರಾಗಿದ್ದರು? ಇನ್ನೂ ಏನೆಲ್ಲ ಅನಾಹುತ ಸೃಷ್ಟಿಸಲಿದ್ದರು? ಬಿಜೆಪಿಯ ಹಿರಿಯ ನಾಯಕರೇ ಇವರ ನಿಜವಾದ ಟಾರ್ಗೆಟ್ ಆಗಿದ್ದರಾ? could not reach target ಅಂದರೆ ವಾಸ್ತವವೇನು? ಎಂದೆಲ್ಲಾ ಪೊಲೀಸರು ತಲೆ ಕೆಡಿಸಿಕೊಂಡಿದ್ದಾರೆ.
ಮದನಿ ಫ್ಯಾಕ್ಟರ್: ಅಬ್ದುಲ್ ನಾಸೀರ್ ಮದನಿ ಬಂಧನಕ್ಕೆ ಸೇಡು ತೀರಿಸಿಕೊಳ್ಳಲು ನಿಷೇಧಿತ ಉಮ್ಮಾ ಸಂಘಟನೆಯ ಶಂಕಿತ ಉಗ್ರರು ಬಿಜೆಪಿ ಕಚೇರಿ ಎದುರು ಬಾಂಬ್ ಸ್ಫೋಟಿಸುವ ದುಸ್ಸಾಹಸಕ್ಕೆ ಕೈಹಾಕಿದ್ದಾರೆ ಎಂಬ ಮಾಹಿತಿಯೂ ಸಿಕ್ಕಿದೆ.
1993ರಲ್ಲಿ ಅಲ್ ಉಮ್ಮಾ ಸಂಘಟನೆಯ ಸದಸ್ಯನಾಗಿದ್ದ. 3 ವರ್ಷಗಳ ಹಿಂದಿನ ಬೆಂಗಳೂರು ಸರಣಿ ಸ್ಫೋಟ ಪ್ರಕರಣದಲ್ಲಿ ಪರಪ್ಪನ ಅಗ್ರಹಾರ ಜೈಲಿನಲ್ಲಿ ಕೊಳೆಯುತ್ತಿದ್ದಾನೆ. ಆಗ ಆಡಳಿತದಲ್ಲಿದ್ದ ಬಿಜೆಪಿ ಸರಕಾರ ಮದನಿಯನ್ನು ಬಂಧಿಸಿದ್ದರಿಂದ ಸೇಡು ತೀರಿಸಿಕೊಳ್ಳಲು ಮಲ್ಲೇಶ್ವರದಲ್ಲಿರುವ ಪಕ್ಷದ ಕಚೇರಿ ಬಳಿ ಬಾಂಬ್ ಸ್ಫೋಟಕ್ಕೆ ಕೈಹಾಕಿದ್ದಾರೆ ಎಂಬ ತರ್ಕವನ್ನೂ ತಾಳೆಹಾಕಲಾಗುತ್ತಿದೆ.












Click it and Unblock the Notifications