ರಾಜರಾಜೇಶ್ವರಿ ನಗರ: ಯುವ ಟೆಕ್ಕಿ ನೇಣಿಗೆ ಶರಣು

ಹೊಳಲ್ಕೆರೆ ಮೂಲದ ಚೇತನ್ (26) ಸಾವಿಗೆ ಶರಣಾದವರು. ಇವರು ರಾಜರಾಜೇಶ್ವರಿ ನಗರದ ಬೆಮೆಲ್ ಬಡಾವಣೆ 5ನೇ ಹಂತದಲ್ಲಿ ವಾಸವಾಗಿದ್ದರು.
ಭಾನುವಾರ ರಾತ್ರಿ 10.30ಕ್ಕೆ ತಮ್ಮ ರೂಮಿನಲ್ಲಿ ಪ್ಲಾಸ್ಟಿಕ್ ಹಗ್ಗದಿಂದ ನೇಣು ಹಾಕಿಕೊಂಡು ಸಾವನ್ನಪ್ಪಿದ್ದಾರೆ. ರಾಜರಾಜೇಶ್ವರಿ ನಗರ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಇಂಜಿನಿಯರಿಂಗ್ ವಿದ್ಯಾರ್ಥಿ ಬಲಿ: ಮೈಸೂರು ರಸ್ತೆಯ ಖೋಡೆ ಕಾರ್ಖಾನೆ ಸಮೀಪ ಸಿಮೆಂಟ್ ಮಿಶ್ರಣ ಲಾರಿಯೊಂದು ಬೈಕಿಗೆ ಡಿಕ್ಕಿ ಹೊಡೆದು ಬೈಕ್ ಸವಾರ, ಇಂಜಿನಿಯರಿಂಗ್ ವಿದ್ಯಾರ್ಥಿ ಮೃತಪಟ್ಟ ದುರ್ದೈವಿ.
ಮೃತ ಸಂಜಯ್ ಜೀವನ್ (20) ಆರ್ ವಿ ಕಾಲೇಜಿನಲ್ಲಿ ಸಿವಿಲ್ ಇಂಜಿನಿಯರಿಂಗ್ ವಿದ್ಯಾರ್ಥಿ, ಜಯನಗರ 8ನೇ ಬ್ಲಾಕ್ ನಿವಾಸಿ.











Click it and Unblock the Notifications