ರಾಮನವಮಿ ಪಾನಕ ಸೇವಿಸಿದ ಬಾಲಕಿ ಸಾವು

Girl dies in Bangalore after drinking panaka
ಬೆಂಗಳೂರು, ಏ. 20 : ಶ್ರೀರಾಮನವಮಿ ಪ್ರಯುಕ್ತ ಏ.19ರಂದು ವಿತರಿಸಲಾದ ಕಲುಷಿತ ನೀರಿನಿಂದ ತಯಾರಿಸಿದ ಪಾನಕ ಸೇವಿಸಿ ಅಸ್ವಸ್ಥಳಾಗಿದ್ದ ಗಂಗಾ ಎಂಬ 5 ವರ್ಷದ ಬಾಲಕಿ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಏ.20, ಶನಿವಾರ ಅಸುನೀಗಿದ್ದಾಳೆ.

ಮೈಸೂರು ರಸ್ತೆಯಲ್ಲಿರುವ ವಾಲ್ಮಿಕಿ ನಗರದ ಮಾರಮ್ಮ ದೇವಸ್ಥಾನದ ಬಳಿ ರಾಮನವಮಿ ಪ್ರಯುಕ್ತ ಶುಕ್ರವಾರ ಪಾನಕ, ಮಜ್ಜಿಗೆ, ಕೋಸಂಬರಿ ವಿತರಿಸಲಾಗಿತ್ತು. ಇದನ್ನು ಸೇವಿಸಿದ 50ಕ್ಕೂ ಹೆಚ್ಚು ಮಂದಿ ಅಸ್ವಸ್ಥರಾಗಿದ್ದು ಅವರನ್ನು ಕೂಡ ವಾಣಿ ವಿಲಾಸ, ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಲಾಗಿದೆ.

ಪಾನಿಕ ಸೇವಿಸಿದ ಹಲವಾರು ಮಂದಿ ಶುಕ್ರವಾರ ರಾತ್ರಿ ವಾಂತಿ ಮತ್ತು ಭೇದಿಯಿಂದ ನರಳಲು ಪ್ರಾರಂಭಿಸಿದ್ದಾರೆ. ಅವರನ್ನು ಕೂಡಲೆ ವಾಣಿ ವಿಲಾಸ ಮತ್ತು ವಿಕ್ಟೋರಿಯಾ ಆಸ್ಪತ್ರೆಗಳಿಗೆ ದಾಖಲಿಸಲಾಗಿದೆ. ಉಳಿದವರು ಚೇತರಿಸಿಕೊಳ್ಳುತ್ತಿದ್ದರೆ, ಶ್ರೀರಾಮನವಮಿಯ ಮರುದಿನ ಶನಿವಾರ ಗಂಗಾ ಶ್ರೀರಾಮನ ಪಾದ ಸೇರಿದ್ದಾಳೆ.

ಶುಕ್ರವಾರ ಮಾತ್ರವಲ್ಲ ನಗರದಾದ್ಯಂತ ಶನಿವಾರ ಕೂಡ ಪಾನಕ ಮತ್ತು ಕೋಸಂಬರಿಗಳನ್ನು ಸಾರ್ವಜನಿಕರಿಗೆ ವಿತರಿಸಲಾಗುತ್ತಿದೆ. ಉಳಿದ ಪ್ರದೇಶಗಳಲ್ಲಿ ಯಾವುದೇ ಅಹಿತಕರ ಘಟನೆ ನಡೆದ ವರದಿಯಾಗಿಲ್ಲ. ಆದರೆ, ವಾಲ್ಮಿಕಿ ನಗರದಲ್ಲಿ ವಿತರಿಸಲಾದ ಪಾನಕ ಮತ್ತು ಮಜ್ಜಿಗೆ ಕಲುಷಿತ ನೀರಿನಿಂದ ತಯಾರಿಸಿರಬಹುದು ಎಂದು ಶಂಕಿಸಲಾಗಿದೆ.

ಶ್ರೀರಾಮನವಮಿ ಪ್ರಯುಕ್ತ ಪೆಂಡಾಲುಗಳನ್ನು ಹಾಕಿ ಬೇಸಿಗೆಯ ಬಿಸಿಲಿಗೆ ಬೆಂದ ಜನರು ತಣ್ಣಗಾಗಲು ಪಾನಕ, ಮಜ್ಜಿಗೆ, ಕೋಸಂಬರಿಗಳನ್ನು ವಿತರಿಸುವುದು ವಾಡಿಕೆ. ನಗರದೆಲ್ಲೆಡೆ ಜನರು ಮುಗಿಬಿದ್ದು ಪಾನಕ, ಮಜ್ಜಿಗೆ ಸೇವಿಸಿ ರಾಮನವಮಿಯನ್ನು ಆಚರಿಸಿದ್ದಾರೆ. ವಾಲ್ಮಿಕಿ ನಗರದ ಘಟನೆಗೆ ಸಂಬಂಧಿಸಿದಂತೆ ಯಾರನ್ನು ಪೊಲೀಸರು ಬಂಧಿಸಿಲ್ಲ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+