ದೆಹಲಿ ಹಸುಳೆಯ ಮೇಲೆ ಭೀಕರ ಅತ್ಯಾಚಾರ

ನವದೆಹಲಿ, ಏ.19: ರಾಜಧಾನಿ ದೆಹಲಿ ಮತ್ತೊಮ್ಮೆ ಕೆಟ್ಟ ಕಾರಣಕ್ಕೆ ವಿಶ್ವದ ಗಮನ ಸೆಳೆದಿದೆ. ಪ್ಯಾರಾ ಮೆಡಿಕಲ್ ವಿದ್ಯಾರ್ಥಿನಿ ರೇಪ್ ಪ್ರಕರಣದ ನಂತರ ಐದು ವರ್ಷದ ಹಸುಳೆ ಮೇಲಿನ ಅತ್ಯಾಚಾರ ಪ್ರಕರಣ ಜಗತ್ತನ್ನು ಬೆಚ್ಚಿ ಬೀಳಿಸಿದೆ. ಇಲ್ಲಿನ ಗಾಂಧೀನಗರ ಪ್ರದೇಶದಲ್ಲಿ 5ರ ಹರೆಯದ ಬಾಲಕಿಯೊಬ್ಬಳನ್ನು ನೆರೆಮನೆಯಾತ ಎರಡು ದಿನಗಳ ಕಾಲ ನಿರಂತರವಾಗಿ ಲೈಂಗಿಕ ಶೋಷಣೆಗೊಳಪಡಿಸಿದ ಪ್ರಕರಣ ಇದೀಗ ಬೆಳಕಿಗೆ ಬಂದಿದೆ. ಬಾಲಕಿಯನ್ನು ಕಿಡ್ನಾಪ್ ಮಾಡಿ ಭೀಕರವಾಗಿ ಅತ್ಯಾಚಾರ ಎಸಗಲಾಗಿದೆ.

ಮಾಧ್ಯಮಗಳ ವರದಿಗಳ ಪ್ರಕಾರ ಈ ಬಾಲಕಿ ಏಪ್ರಿಲ್ 15ರಂದು ಅಪಹರಣಕ್ಕೊಳಗಾಗಿದ್ದಳು. ಈಕೆಯನ್ನು ಅಪಹರಿಸಿದ ನೆರೆಮನೆಯಾತ ಎರಡು ದಿನಗಳ ಕಾಲ ಆಕೆಯನ್ನು ಅತ್ಯಾಚಾರಕ್ಕೊಳಪಡಿಸಿದ್ದಾನೆ. ಸುಮಾರು ನಾಲ್ಕು ದಿನಗಳ ನಂತರ ಈ ಪ್ರಕರಣ ಬೆಳಕಿಗೆ ಬಂದಿದೆ.

Delhi shame: 'Candle, bottle poked into rape victim's genitals'

ಬಾಲಕಿಯ ಮೇಲೆ ಅತ್ಯಾಚಾರವೆಸಗಿದ 30ರ ಹರೆಯದ ವ್ಯಕ್ತಿ ಬಾಲಕಿಯ ಮನೆಯಿರುವ ಕಟ್ಟಡದ ಕೆಳ ಅಂತಸ್ತಿನಲ್ಲಿ ವಾಸವಾಗಿದ್ದು, ಇದೀಗ ತಲೆಮರೆಸಿಕೊಂಡಿದ್ದಾನೆ. ಈತನ ಬಗ್ಗೆ ಹೆಚ್ಚಿನ ವಿವರಗಳನ್ನು ನೀಡಲು ಪೊಲೀಸರು ನಿರಾಕರಿಸಿದ್ದಾರೆ.

ಬುಧವಾರ ರಾತ್ರಿ ಪಕ್ಕದ ಮನೆಯಿಂದ ಬಾಲಕಿಯ ಅಳು ಕೇಳಿಸಿದ್ದು, ಬಾಲಕಿಯ ಹೆತ್ತವರು ಆಕೆಯನ್ನು ದುಷ್ಕರ್ಮಿಯ ಕೈಯಿಂದ ರಕ್ಷಿಸಿದ್ದಾರೆ. ಕೆಲವೊಂದು ಮೂಲಗಳ ಪ್ರಕಾರ ಅತ್ಯಾಚಾರಕ್ಕೊಳಾದ ಬಾಲಕಿಯ ಕತ್ತು ಸೀಳಿದ್ದು, ಆಕೆಯ ಗುಪ್ತಾಂಗಗಳನ್ನೂ ಗಾಯಗೊಳಿಸಲಾಗಿದೆ. ಮರ್ಮಾಂಗದೊಳಗೆ 200 ಎಂಎಲ್ ಬಾಟಲ್ , ಎರಡು ಮೂರು ಮೊಂಬತ್ತಿಗಳನ್ನು ತುರುಕಿ ಗಾಯಗೊಳಿಸಲಾಗಿದೆ. ನನ್ನ ವೃತ್ತಿ ಜೀವನದಲ್ಲಿ ಇಂಥ ಪ್ರಕರಣವನ್ನು ನೋಡಿಲ್ಲ ಎಂದು ಸ್ವಾಮಿ ದಯಾನಂದ ಆಸ್ಪತ್ರೆಯ ಹಿರಿಯ ವೈದ್ಯಾಧಿಕಾರಿ ಆರ್ ಕೆ ಬನ್ಸಾಲ್ ಹೇಳಿದ್ದಾರೆ.

ತೀವ್ರ ಅಸ್ವಸ್ಥಳಾಗಿರುವ ಬಾಲಕಿಯನ್ನು ಶಹ್‌ದಾರಾದಲ್ಲಿರುವ ಸ್ವಾಮಿ ದಯಾನಂದ್ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಬಾಲಕಿಯ ಸ್ಥಿತಿ ಚಿಂತಾಜನಕವಾಗಿದೆ ಎಂದು ಹೇಳಲಾಗುತ್ತಿದೆ. ಇಷ್ಟೇ ಅಲ್ಲದೆ ತುಟಿ, ಕೆನ್ನೆ ಹಾಗೂ ಕತ್ತಿನ ಮೇಲೆ ಬಲವಾದ ಗಾಯಗಳಾಗಿದೆ. ರಕ್ತದೊತ್ತಡ ಇಳಿಮುಖವಾಗಿದೆ. ಆದರೆ, ತೀವ್ರ ನಿಗಾ ಘಟಕದಲ್ಲಿ ಇರಿಸಲಾಗಿದೆ 48 ಗಂಟೆಗಳ ನಿಗಾ ವಎಂದು ವೈದ್ಯರು ಹೇಳಿದ್ದಾರೆ.

ಈ ಪ್ರಕರಣದ ಬಗ್ಗೆ ಪೊಲೀಸರು ಕೇಸು ದಾಖಲಿಸಿದ್ದು, ತಲೆಮರೆಸಿರುವ ಆರೋಪಿಗಾಗಿ ಶೋಧ ಕಾರ್ಯ ಮುಂದುವರಿಸಿದ್ದಾರೆ. ಸಾರ್ವಜನಿಕರು ಘಟನೆಯನ್ನು ಖಂಡಿಸಿ ತೀವ್ರವಾದ ಪ್ರತಿಭಟನೆ ನಡೆಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+