ಚಿತ್ರಗಳಲ್ಲಿ, ಭೂಕಂಪ, ಕ್ರಿಕೆಟ್, ಬೋಸ್ಟನ್ ನದ್ದೇ ಸುದ್ದಿ
ಬೆಂಗಳೂರು, ಏ.16: ಪಾಕಿಸ್ತಾನದಲ್ಲಿ ಭೂಕಂಪಿಸಿದ್ದು ಉತ್ತರ ಭಾರತದಲ್ಲಿ ಜನತೆ ತತ್ತರಗೊಳ್ಳುವಂತೆ ಮಾಡಿದೆ. ಕಚೇರಿಗಳಿಂದ ಆತಂಕಗೊಂಡು ಜನರು ಹೊರಕ್ಕೆ ಆಗಮಿಸಿದ ಚಿತ್ರ ಇಲ್ಲಿದೆ. ಉಳಿದಂತೆ 1993ರ ಮುಂಬೈ ಬಾಂಬ್ ಸ್ಫೋಟ ಪ್ರಕರಣದ ಆರೋಪಿ ನಟ ಸಂಜಯ್ ದತ್ ಶರಣಾಗಲು 6 ತಿಂಗಳ ಕಾಲಾವಕಾಶ ಕೇಳಿದ್ದಾರೆ.
ಬೋಸ್ಟನ್ ನಲ್ಲಿ ಸಂಭ್ರಮ ಹಾಳು ಮಾಡಿದ ಬಾಂಬ್ ಸ್ಫೋಟ, ಇಂಡಿಯನ್ ಪ್ರಿಮಿಯರ್ ಲೀಗ್ ನಲ್ಲಿ ಚೆನ್ನೈ ಸೂಪರ್ ಕಿಂಗ್ ಮಣಿಸಿದ ಪುಣೆ ವಾರಿಯರ್ಸ್ ಚಿತ್ರ ಮುಂತಾದವು ಇಂದಿನ ನ್ಯೂಸ್ ಚಿತ್ರಗಳ ಪ್ಯಾಕೇಜ್ ನಲಿ ಅಡಗಿದೆ.
ಅಕ್ಷರಗಳು ಹೇಳದ ಕಥೆಯನ್ನು ಚಿತ್ರಗಳ ಮೂಲಕ ಹೇಳ ಹೊರಟಿರುವ ಪ್ರಯತ್ನ ನಮ್ಮದು. ಮಾಮೂಲಿ ರಾಜಕೀಯ ಸಮಾರಂಭ ಚಿತ್ರಗಳು, ಸಿನಿಮಾ ಸುದ್ದಿಗಳ ನಡುವೆ ಮಿಸ್ ಆಗುವ ವಿಷಯಗಳನ್ನು ಆಯ್ದು ಕೊಡಲಾಗಿದೆ. ಕಳೆದ ಎರಡು ದಿನಗಳ ಪ್ರಮುಖ ಹಾಗೂ ಕುತೂಹಲ ಭರಿತ ಚಿತ್ರಗಳನ್ನು ನೀವು ನೋಡಬಹುದು.

ಚಿತ್ರಗಳಲ್ಲಿ ಕಂಡ ತುಣುಕು ಸುದ್ದಿ
ಪಾಕಿಸ್ತಾನದ ಕರಾಚಿಯಲ್ಲಿ ಮಂಗಳವಾರ ಸಂಭವಿಸಿದ ಭೂಕಂಪದ ಪ್ರಕೋಪಕ್ಕೆ ಬೆದರಿ ಕಚೇರಿಯಿಂದ ಹೊರಬಿದ್ದ ಜನ. ಇರಾನ್ ನಲ್ಲಿ ನೂರಾರು ಜನರನ್ನು ಬಲಿ ತೆಗೆದುಕೊಂಡ ಭೂಕಂಪ ಐವತ್ತಕ್ಕೂ ಮನೆ, ಕಚೇರಿಗಳನ್ನು ಧ್ವಂಸಗೊಳಿಸಿದೆ

ಚಿತ್ರಗಳಲ್ಲಿ ಕಂಡ ತುಣುಕು ಸುದ್ದಿ
ಲಂಡನ್ : ಮಾರ್ಕ್ ಥ್ಯಾಚರ್(ಬಲ) ಎಡದಲ್ಲಿ ಪತ್ನಿ ಸಾರಾ ಮಗ ಮೈಕಲ್ ಹಾಗೂ ಅಮಂಡಾ ಜೊತೆ ದಿವಂಗತ ಬ್ರಿಟಿಷ್ ಪ್ರಧಾನಿ ಮಾರ್ಗರೆಟ್ ಥ್ಯಾಚರ್ ಅವರ ಕುಟುಂಬ ಮನೆಯ ಮುಂದೆ ಗ್ರೂಪ್ ಫೋಟೊ

ಚಿತ್ರಗಳಲ್ಲಿ ಕಂಡ ತುಣುಕು ಸುದ್ದಿ
ಕೈರೊ:ಮಾಜಿ ಈಜಿಪ್ಟ್ ಅಧ್ಯಕ್ಷ ಹೋಸ್ನಿ ಮುಬಾರಕ್(84) ಅವರು ಕೋರ್ಟ್ ವಿಚಾರಣೆ ಮುಗಿಸಿಕೊಂಡು ಮಾಡಿ ಹೆಲಿಕಾಪ್ಟರ್ ಆಂಬ್ಯುಲೆನ್ಸ್ ಮೂಲಕ ಮಿಲಿಟರಿ ಆಸ್ಪತ್ರೆ ಬಳಿ ಬಂದಾಗ ವೈದ್ಯಕೀಯ ತಪಾಸಣೆ ನಡೆಸುತ್ತಿರುವ ದೃಶ್ಯ

ಚಿತ್ರಗಳಲ್ಲಿ ಕಂಡ ತುಣುಕು ಸುದ್ದಿ
ಬೋಸ್ಟನ್: ಬೋಸ್ಟನ್ ಮ್ಯಾರಥ್ಯಾನ್ ವೇಳೆಯಲ್ಲಿ ಗಾಯಗೊಂಡ ಮಹಿಳೆ. ಸೋಮವಾರ (ಏ.15) ಬಾಂಬ್ ಸ್ಫೋಟಕ್ಕೆ ಮೂವರು ಬಲಿಯಾದರು.

ಚಿತ್ರಗಳಲ್ಲಿ ಕಂಡ ತುಣುಕು ಸುದ್ದಿ
ಇಸ್ಲಾಮಾಬಾದ್ : ಮಾಜಿ ಕ್ರಿಕೆಟ್ ನಾಯಕ, ರಾಜಕಾರಣಿ ಇಮ್ರಾನ್ ಖಾನ್ ಅವರು ತೆಹ್ರೀಕ್ ಇ ಇನ್ಸಾಫ್ ಪಕ್ಷದ ಪರ ಸುದ್ದಿಗೋಷ್ಠಿಯಲ್ಲಿ ಕಾಣಿಸಿದ್ದು ಹೀಗೆ

ಚಿತ್ರಗಳಲ್ಲಿ ಕಂಡ ತುಣುಕು ಸುದ್ದಿ
ಗಾಂಧಿನಗರ : ನೂತನ ಕಚೇರಿ ಉದ್ಘಾಟನೆ ಸಂದರ್ಭದಲ್ಲಿ ದೀಪ ಬೆಳಗಿಸುತ್ತಿರುವ ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ

ಚಿತ್ರಗಳಲ್ಲಿ ಕಂಡ ತುಣುಕು ಸುದ್ದಿ
1993ರ ಮುಂಬೈ ಸ್ಫೋಟದ ಆರೋಪಿ ಬಾಲಿವುಡ್ ನಟ ಸಂಜಯ್ ದತ್ ಅವರಿಗೆ ಶರಣಾಗಲು ಏ.18ರ ಗಡುವು ನೀಡಲಾಗಿದೆ. 6 ತಿಂಗಳ ಕಾಲಾವಕಾಶ ಕೋರಿದ್ದಾರೆ.

ಚಿತ್ರಗಳಲ್ಲಿ ಕಂಡ ತುಣುಕು ಸುದ್ದಿ
ಚೆನ್ನೈ: ಚೆನ್ನೈ ಸೂಪರ್ಸೂಪರ್ ಕಿಂಗ್ಸ್ ನಾಯಕ ಎಂಎಸ್ ಧೋನಿ ಪತ್ನಿ ಸಾಕ್ಷಿ ಅವರು ಐಪಿಎಲ್ 6 ಪಂದ್ಯದ ವೇಳೆ ಕಾಣಿಸಿದ್ದು ಹೀಗೆ..ಪುಣೆ ವಿರುದ್ಧ ಚೆನ್ನೈ ಸೋಲು ಅನುಭವಿಸಿದೆ. PTI Photo by R Senthil Kumar

ಚಿತ್ರಗಳಲ್ಲಿ ಕಂಡ ತುಣುಕು ಸುದ್ದಿ
ಚೆನ್ನೈ ಸೂಪರ್ ಕಿಂಗ್ಸ್ ಸೋಲಿಸಿದ ಖುಷಿಯಲ್ಲಿ ಪುಣೆ ವಾರಿಯರ್ಸ್ ಸಾಂಪ್ರದಾಯಿಕ ಉಡುಗೆಯಲ್ಲಿರುವ ಚಿಯರ್ ಲೀಡರ್ಸ್ PTI Photo by R Senthil Kumar












Click it and Unblock the Notifications