ಭಾರತೀಯ ಮೂಲದ ಮಹಿಳೆ, ಮಕ್ಕಳು ನಿಗೂಢ ಸಾವು

ಹೀನಾ ಸೋಲಂಕಿ(34) ಹಾಗೂ ಅವರ ಇಬ್ಬರು ಪುತ್ರಿಯರಾದ ಪ್ರೀಶ್ (4) ಹಾಗೂ ಜ್ಯಾಸ್ಮಿನ್(9)ರ ಶವಗಳು ಲಂಡನ್‌ನ ರುಯಿಸ್ಲಿಪ್‌ನಲ್ಲಿರುವ ಅವರ ನಿವಾಸದಲ್ಲಿ ಶುಕ್ರವಾರ ನಿಗೂಢ ರೀತಿಯಲ್ಲಿ ಪತ್ತೆಯಾಗಿವೆ ಎಂದು ಪೊಲೀಸರು ತಿಳಿಸಿದ್ದಾರೆ.
'ಈ ಸಂದರ್ಭದಲ್ಲಿ ಸಾವಿನ ಬಗ್ಗೆ ಸ್ಪಷ್ಟವಾಗಿ ವಿವರಿಸಲು ಸಾಧ್ಯವಿಲ್ಲ. ಮೃತರು ಭಾರತೀಯ ಮೂಲದವರು ಎಂದು ತಿಳಿದು ಬಂದಿದೆ. ತನಿಖೆ ಮುಂದುವರೆದಿದೆ ಎಂದು ಸ್ಕಾಟ್ಲೆಂಡ್‌ನ ವಕ್ತಾರರು ಹೇಳಿದ್ದಾರೆ ಎಂದು ಸ್ಥಳೀಯ ಮಾಧ್ಯಮವೊಂದು ವರದಿ ಮಾಡಿದೆ. ಶವಗಳ ಬಳಿ ಕಂಡು ಬಂದಿರುವ ಸೂಟ್‌ಕೇಸ್ ಹಾಗೂ ಕೆಲವು ಪ್ರಣಾಳಗಳನ್ನು ಪೊಲೀಸರು ವಶಕ್ಕೆ ತೆಗೆದುಕೊಂಡಿರುವುದಾಗಿ ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.
ಹೀನಾ 42ರ ಹರೆಯದ ತಮ್ಮ ಪತಿ ಕಲ್ಪೇಶ್‌ರ ಹೆತ್ತವರೊಂದಿಗೆ ವಾಸಿಸುತ್ತಿದ್ದು, ಘಟನೆಯ ಸಂದರ್ಭದಲ್ಲಿ ಅವರು ಮನೆಯಲ್ಲಿರಲಿಲ್ಲ ಎನ್ನಲಾಗಿದೆ. ಹೀನಾ, 2002ರವರೆಗೆ ಸೌತ್ ಗುಜರಾತ್ ಯೂನಿವರ್ಸಿಟಿಯ ವಿದ್ಯಾರ್ಥಿಯಾಗಿದ್ದರು ಎಂಬುದಾಗಿ ಅವರ ಫೇಸ್‌ಬುಕ್ ಖಾತೆಯಿಂದ ತಿಳಿದುಬಂದಿದೆ. ಸಾವಿನ ನಿಖರ ಕಾರಣ ಇನ್ನೂ ತಿಳಿದು ಬಂದಿಲ್ಲ.
ಮಾಧ್ಯಮಗಳ ವರದಿ ಪ್ರಕಾರ ಆರ್ಥಿಕ ಸಂಕಷ್ಟ ಎದುರಿಸುತ್ತಿದ್ದ ಸೋಲಂಕಿ ಅವರು ವಿಷಕಾರಿ ಅನಿಲ ಬಳಸಿ ತಾವು ಆತ್ಮಹತ್ಯೆ ಮಾಡಿಕೊಂಡಿದ್ದಲ್ಲದೆ ಮಕ್ಕಳನ್ನು ಸಾವಿನ ದವಡೆಗೆ ನೂಕಿದರು. ಸೋಲಂಕಿ ಅವರ ನೆರೆ ಮನೆಯವರು ಕೆಟ್ಟ ವಾಸನೆ ಬಂದ ಮೇಲೆ ಪೊಲೀಸರಿಗೆ ವಿಷಯ ತಿಳಿಸಿದ್ದಾರೆ.
ಹೀನಾ ಸೋಲಂಕಿ ಅವರ ಮರಣೋತ್ತರ ಪರೀಕ್ಷೆ ನಡೆದ ಮೇಲೆ ಅವರ ದೇಹದಲ್ಲಿ ರಾಸಾಯನಿಕ ವಸ್ತು ಇದ್ದಿರಬಹುದಾದ ಶಂಕೆಗೆ ಉತ್ತರ ಸಿಗಲಿದೆ. ಅವರ ಪತಿ ಕಲ್ಪೇಶ್ ಅವರನ್ನು ವಿಚಾರಣೆಗೆ ಒಳಪಡಿಸಲಾಗಿದೆ. ಮನೆಯ ಸುತ್ತ ಮುತ್ತ ಕೆಮಿಕಲ್ ವಸ್ತು ಇಡುವ ಕವರ್ ಗಳು ಸಿಕ್ಕಿದೆ.
ಹೀನಾ ಅವರಿಗೂ ಕೆಮಿಕಲ್ ಗೂ ಏನು ಸಂಬಂಧವಿಲ್ಲ. ರಾಸಾಯನಿಕಗಳ ಬಗ್ಗೆ ಆಕೆಗೆ ಏನು ತಿಳಿದಿಲ್ಲ. ಆಕೆ ಸಂಸಾರ ಚೆನ್ನಾಗಿತ್ತು. ಕಲ್ಪೇಶ್ ಭಾರತಕ್ಕೆ ರಜೆ ಮೇಲೆ ಬಂದಾಗ ಈ ದುರ್ಘಟನೆ ನಡೆದಿರುವುದು ನಮಗೆಲ್ಲ ಶಾಕ್ ಆಗಿದೆ. ಮುಂದಿನ ತಿಂಗಳು ಹೀನಾ ಹೊಸ ಸಂಸ್ಥೆಯಲ್ಲಿ ಉದ್ಯೋಗಕ್ಕೆ ಸೇರಬೇಕಾಗಿತ್ತು. ಎಂದು ಹೀನಾ ಅವರ ಗೆಳತಿಯೊಬ್ಬರು ಹೇಳಿದ್ದಾರೆ.












Click it and Unblock the Notifications