ಬೆಂಗಳೂರಿನಲ್ಲಿ ಚಾಕುವಿನಿಂದ ಇರಿದು ಮಹಿಳೆ ಹತ್ಯೆ

ಮೃತಳಾಗಿರುವ ಮಹಿಳೆಯನ್ನು ಭಾರತಿ (48) ಎಂದು ಗುರುತಿಸಲಾಗಿದೆ. ಆಕೆಯ ಕತ್ತಿಗೆ ಮತ್ತು ಹೊಟ್ಟೆಗೆ ಚಾಕುವಿನಿಂದ ತಿವಿಯಲಾಗಿದ್ದು, ಸನಿಹದ ಆಸ್ಪತ್ರೆಯಲ್ಲಿ ಆಕೆ ಅಸುನೀಗಿದ್ದಾಳೆ. ಆಕೆಯ ಕಿವಿಯೋಲೆ ನಾಪತ್ತೆಯಾಗಿದೆ.
ಪ್ರತ್ಯಕ್ಷದರ್ಶಿಗಳ ಪ್ರಕಾರ, ಬಾಗಲಕುಂಟೆಯಲ್ಲಿರುವ ಮಾರಮ್ಮನ ದೇವಸ್ಥಾನದ ಬಳಿಯಿರುವ ಭಾರತಿಯ ಮನೆಯ ಬಳಿ ಈ ಘಟನೆ ನಡೆದಿದೆ. ಸುಮಾರು 1.30ರ ಹೊತ್ತಿಗೆ ಯುವಕನೊಬ್ಬ ಆಕೆಗೆ ಹರಿತವಾದಿ ಚಾಕುವಿನಿಂದ ಚುಚ್ಚಿ ಪರಾರಿಯಾಗಿದ್ದಾನೆ.
ಪೊಲೀಸರ ಪ್ರಕಾರ, ಬಾಡಿಗೆಗೆ ಸಂಬಂಧಿಸಿದಂತೆ ಮಹಿಳೆ ಮತ್ತು ಯುವಕನ ನಡುವೆ ಸಂಭವಿಸಿದ ಜಗಳ ಕೊಲೆಯಲ್ಲಿ ಪರ್ಯವಸಾನವಾಗಿದೆ. ಭಾರತಿ ಆ ಯುವಕನಿಗೆ ಮನೆಯನ್ನು ಒಂದೂವರೆ ಸಾವಿರ ರು.ಗೆ ಬಾಡಿಗೆ ನೀಡಿದ್ದಳು. ಆತನಿಂದ 6 ಸಾವಿರ ರು. ಮುಂಗಡ ಹಣ ಕೂಡ ಪಡೆದಿದ್ದಳು.
ಈ ವಿಷಯಕ್ಕೆ ಸಂಬಂಧಿಸಿದಂತೆ ಅವರಿಬ್ಬರ ನಡುವೆ ಕಿತ್ತಾಟವಾಗಿದೆ. ಆತ ಮುಂಗಡ ಹಣ ವಾಪಸ್ ಕೇಳಿದ್ದರೂ ಭಾರತಿ ತಿರುಗಿ ನೀಡಿರಲಿಲ್ಲ. ಇದರಿಂದ ರೊಚ್ಚಿಗೆದ್ದ ಯುವಕ ಕೊಲೆ ಮಾಡಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ.
ಪೀಣ್ಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಕೊಲೆ ಮಾಡಿದವನ ಹುಡುಕಾಟದಲ್ಲಿ ತೊಡಗಿದ್ದಾರೆ. ಭಾರತಿಯ ಗಂಡ ಅಂಚೆ ಕಚೇರಿಯಲ್ಲಿ ಕೆಲಸ ಮಾಡುತ್ತಿದ್ದಾರೆ.












Click it and Unblock the Notifications