ದ್ವೇಷದ ಕೆನ್ನಾಲಿಗೆ: 5 ಮಂದಿ ಸಜೀವ ದಹನ

ಇಂದು ಬೆಳಗಿನ ಜಾವ ಮೈಸೂರಿನ ಅಜೀಜ್ ಸೇಠ್ ನಗರದ ಬಿಡಿ ಮೊಹಲ್ಲಾದಲ್ಲಿ ಈ ದುರ್ಘಟನೆ ಸಂಭವಿಸಿದೆ. ಇನ್ನೂ ಮೂವರಿಗೆ ತೀವ್ರ ಗಾಯಗಳಾಗಿದ್ದು, ಸಮೀಪದ ಕೆಆರ್ ಆಸ್ಪತ್ರೆಗೆ ದಾಖಲಿಸಲಾಗಿದೆ.
ಮನೆಯ ಹೊರಗಿನಿಂದ ಚಿಲಕ ಹಾಕಿ ಬೆಳಗಿನ ಜಾವ 3.30ರಲ್ಲಿ ಮನೆಗೆ ಬೆಂಕಿ ಹಚ್ಚಲಾಗಿದೆ. ಅಗ್ನಿಶಾಮಕ ದಳ ಘಟನಾ ಸ್ಥಳಕ್ಕೆ ಧಾವಿಸಿದ ನಂತರವೇ ಗ್ಯಾಸ್ ಸಿಲಿಂಡರ್ ಸ್ಫೋಟಿಸಿದೆ ಎಂದು ತಿಳಿದುಬಂದಿದೆ.
ಉದಯಗಿರಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಮನೆಯ ಯಜಮಾನ ಹಣದ ವ್ಯವಹಾರ ನಡೆಸುತ್ತಿದ್ದರು ಎನ್ನಲಾಗಿದೆ. ಅಮೀರ್ ಜಾನ್(80), ಫರ್ವೀನ್(30), ರಿಜ್ವಾನ್(45) ಅರ್ಬಿನಾ(10) ಹಾಗೂ ಎರಡು ವರ್ಷದ ಅರಾನ್ ಮೃತಪಟ್ಟಿದ್ದಾರೆ. ರೇಷ್ಮಾ ಬಾನು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಅಬ್ದುಲ್ ಶರೀಫ್ ಎಂಬಾತ ಹಣದ ವೈಷಮ್ಯದ ಹಿನ್ನೆಲೆಯಲ್ಲಿ ಮನೆಗೆ ಪೆಟ್ರೋಲ್ ಸರಿದು ಬೆಂಕಿ ಹಚ್ಚಿದ್ದಾನೆ ಎನ್ನಲಾಗಿದೆ.












Click it and Unblock the Notifications