ಗುಜರಾತ್ ಫಲಿತಾಂಶ ರಾಜ್ಯದಲ್ಲಿ ಪುನಾರಾವರ್ತನೆ

ಬಿಜೆಪಿಯ ಸುಳ್ಯ ಮಂಡಲ ಸಮಿತಿ ವತಿಯಿಂದ ಮಂಗಳವಾರ ಸುಳ್ಯದ ಕೇರ್ಪಳ ದುರ್ಗಾಪರಮೇಶ್ವರಿ ಕಲಾ ಮಂದಿರದಲ್ಲಿ ವಿಧಾನಸಭಾ ಕ್ಷೇತ್ರದ ಚುನಾ ವಣೆಯ ಪೂರ್ವ ತಯಾರಿಗಾಗಿ ನಡೆದ ಬಿಜೆಪಿ ಕಾರ್ಯಕರ್ತರ ಬೃಹತ್ ಸಮಾವೇಶದಲ್ಲಿ ಅವರು ಮಾತನಾಡುತ್ತಿದ್ದರು.
ಮೋದಿ ಪ್ರಧಾನಿ : ಈ ಚುನಾವಣೆ ಭವಿಷ್ಯದ ದೃಷ್ಟಿಯಿಂದ ದೇಶ ರಕ್ಷಣೆಯ ಚುನಾವಣೆಯೂ ಆಗಿದೆ. ಇಲ್ಲಿ ಬಿಜೆಪಿ ಗೆಲ್ಲುತ್ತದೆ, ಮುಂದೆ ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ ದೇಶದ ಪ್ರಧಾನಿಯಾಗುತ್ತಾರೆ ಎಂದು ಹೇಳಿದ ಡಿವಿಎಸ್, ಮೋದಿ ನಡೆದ ದಾರಿಯಲ್ಲೇ ಅಂಗಾರರೂ ನಡೆದು ಮಾದರಿ ಹಾಕಿಕೊಟ್ಟಿದ್ದಾರೆ ಎಂದು ಶ್ಲಾಘಿಸಿದರು.
ಸಮಾವೇಶವನ್ನು ಉದ್ಘಾಟಿಸಿ ಮಾತನಾಡಿದ ರಾಜ್ಯ ಬಿಜೆಪಿ ಮಹಿಳಾ ಮೋರ್ಚಾ ಉಪಾಧ್ಯಕ್ಷೆ ಸುಲೋಚನಾ ಜಿ.ಭಟ್, ಸಾಧನೆಗಳ ಮೂಲಕ ಚುನಾವಣೆಯನ್ನು ಗೆಲ್ಲುವ ತಾಕತ್ತಿಲ್ಲದ ಕಾಂಗ್ರೆಸ್, ಅಪಪ್ರಚಾರದ ಮೂಲಕ ಚುನಾವಣೆ ಗೆಲ್ಲಲು ಹೊರಟಿದೆ.
ಆದರೆ ಕಾಂಗ್ರೆಸ್ ಮಾಡುತ್ತಿರುವ ಹಗರಣಗಳನ್ನು, ಬಿಜೆಪಿಯ ಅಭಿವೃದ್ಧಿ ಕಾರ್ಯ ಗಳನ್ನು ಜನ ನೋಡುತ್ತಿದ್ದಾರೆ. ಟಿಕೆಟ್ ಗಾಗಿ ಕಿತ್ತಾಡುತ್ತಿರುವ ಕಾಂಗ್ರೆಸಿಗರನ್ನು ನೋಡಿದರೆ ಅವರ ಅಧಿಕಾರ ದಾಹ ಅರ್ಥವಾಗುತ್ತದೆ. ನಮ್ಮ ಪಕ್ಷದಲ್ಲಿ ಗೊಂದಲ ಇದ್ದಿರಬಹುದು, ಆದರೆ ಅಭಿವೃದ್ಧಿಯಲ್ಲಿ ಕೊರತೆ ಇರಲಿಲ್ಲ. ಹೀಗಾಗಿ ಮುಂದಿನ ಚುನಾವಣೆಯಲ್ಲಿಯೂ ಬಿಜೆಪಿಯೇ ಗೆಲುವು ಸಾಧಿಸುತ್ತದೆ ಎಂದರು.
ಕುದುರೆ ಕಟ್ಟಿ ನೋಡಲಿ: ಸಂಸದ ನಳಿನ್ ಕುಮಾರ್ ಕಟೀಲ್ ಮಾತನಾಡಿ, ಬಿಜೆಪಿ ಬಿಟ್ಟ ಅಶ್ವ ಮೇಧದ ಕುದುರೆಯನ್ನು ಕಟ್ಟಿ ಹಾಕುವುದಾಗಿ ಕಾಂಗ್ರೆಸ್ ನಾಯಕರೊಬ್ಬರು ಹೇಳಿದ್ದಾರೆ. ಆದರೆ ಅವರು ಕಟ್ಟಿದ ಕುದುರೆಯನ್ನು ಅವರ ಹೆಡೆಮುರಿ ಕಟ್ಟಿ ಬಿಡಿಸಿಕೊಂಡು ಬರಲು ಬಿಜೆಪಿ ಕಾರ್ಯಕರ್ತರಿಗೆ ಶಕ್ತಿಯಿದೆ ಎಂದರು.
ವಿಧಾನ ಪರಿಷತ್ ಸದಸ್ಯ ಮೋನಪ್ಪ ಭಂಡಾರಿ, ಶಾಸಕ ಹಾಗೂ ಅಭ್ಯರ್ಥಿ ಎಸ್.ಅಂಗಾರ, ಬಿಜೆಪಿ ಮಂಡಲ ಸಮಿತಿ ಮಾಜಿ ಅಧ್ಯಕ್ಷ ಎ.ವಿ.ತೀರ್ಥರಾಮ, ಪ್ರಚಾರ ಸಮಿತಿ ಅಧ್ಯಕ್ಷ ಎನ್.ಎ. ರಾಮಚಂದ್ರ ಮೊದಲಾದವರು ಮಾತನಾಡಿದರು. ನ.ಸೀತಾರಾಮ ರಾಷ್ಟ್ರೀಯ ಆಂದೋಲನದ ಮಾಹಿತಿ ನೀಡಿದರು












Click it and Unblock the Notifications