ಯಡಿಯೂರಪ್ಪ ಒಂಟಿ ಸಲಗ : ಆಯನೂರು ಮಂಜುನಾಥ್

ಶಿವಮೊಗ್ಗದಲ್ಲಿ ಭಾನುವಾರ ಮಾತನಾಡಿದ ಅವರು, ಒಂಟಿ ಸಲಗವಾಗಿರುವ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಬಿಜೆಪಿಗೆ ಯಾವುದೇ ಸ್ಪರ್ಧೆ ನೀಡಲಾರರು ಎಂದು ಅವರು ಭವಿಷ್ಯ ನುಡಿದಿದರು. ತಮ್ಮ ಬಳಿ ನಾಯಕರಿಲ್ಲದೆ ಕೊನೆಗಳಿಗೆಯಲ್ಲಿ ನಾಯಕರನ್ನು ಪಕ್ಷಕ್ಕೆ ಸೇರಿಸಿಕೊಳ್ಳಲು ಪ್ರಯತ್ನಿಸುತ್ತಿದ್ದಾರೆ ಎಂದು ದೂರಿದರು.
ಎಲ್ಲರಿಂದಲೂ ರಾಜೀನಾಮೆ ಪಡೆದ ಯಡಿಯೂರಪ್ಪ, ತಮ್ಮ ಪುತ್ರ ಬಿಜೆಪಿ ಸಂಸದ ರಾಘವೇಂದ್ರರಿಂದ ಮಾತ್ರ ರಾಜೀನಾಮೆ ಪಡೆದಿಲ್ಲ. ಏಕೆಂದರೆ ಅವರು ರಾಜೀನಾಮೆ ನೀಡಿದರೆ ಗೆಲುವು ಸಾಧಿಸುವುದಿಲ್ಲ ಎಂದು ವ್ಯಂಗ್ಯವಾಡಿದರು.
ವಿಧಾನಸಭಾ ಚುನಾವಣೆ ನಂತರ ಯಡಿಯೂರಪ್ಪ ಬಿಜೆಪಿಗೆ ಮರಳಿದ್ದಾರೆ. ಒಂದು ಬಾರಿ ಸೋತರೆ ಅವರಿಗೆ ತಮ್ಮ ತಪ್ಪಿನ ಅರಿವಾಗಲಿದೆ. ನಂತರ ಬೇರೆ ದಾರಿ ಕಾಣದೆ ಬಿಜೆಪಿಗೆ ಮರಳುತ್ತಾರೆ ಎಂದು ಹೇಳಿದರು.
ಜಿಲ್ಲೆಯ ಎಲ್ಲಾ ಬಿಜೆಪಿ ವಿಧಾನಸಭಾ ಕ್ಷೇತ್ರದ ಅಭ್ಯರ್ಥಿಗಳು ತಾವು ಚುನಾವಣೆಯಲ್ಲಿ ಅಕ್ರಮ ಎಸಗುವುದಿಲ್ಲ ಎಂದು ಪ್ರಮಾಣ ಮಾಡಲಿದ್ದಾರೆ ಎಂದು ಅವರು ತಿಳಿಸಿದರು. ಅಭ್ಯರ್ಥಿಗಳ ಪಟ್ಟಿ ಅಂತಿಮವಾಗಿದ್ದು, ಏಪ್ರಿಲ್ ಮೊಲದ ವಾರದಲ್ಲಿ ಬಿಡುಗಡೆ ಮಾಡಲಾಗುವುದು ಎಂದರು.
ಡಿವಿಎಸ್ ಆಯ್ಕೆಗೆ ಸಂತಸ : ಬಿಜೆಪಿ ರಾಷ್ಟ್ರೀಯ ಉಪಾಧ್ಯಕ್ಷರಾಗಿ ಮಾಜಿ ಮುಖ್ಯಮಂತ್ರಿ ಡಿ.ವಿ.ಸದಾನಂದಗೌಡ ಆಯ್ಕೆಯಾಗಿರುವುದಕ್ಕೆ ಸಂತಸ ವ್ಯಕ್ತಪಡಿಸಿದ ಅವರು, ಸದಾನಂದಗೌಡರು ಹುದ್ದೆಯನ್ನು ಸಮರ್ಥವಾಗಿ ನಿರ್ವಹಿಸಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ನೀವೇ ಆಗಿರಿ ಕರ್ನಾಟಕದ ಗುರು | ಮತ ಹಾಕ್ತೀನಂತ ಪ್ರಮಾಣ ಮಾಡಿ












Click it and Unblock the Notifications