ಮುನಿಯಪ್ಪ ಕುತಂತ್ರದೆದುರು ಡಾ.ಸುಧಾಕರ್ ಅತಂತ್ರ

Union Minister KH Muniyappa - Sudhakar Babu political war intensifies
ಚಿಂತಾಮಣಿ, ಮಾರ್ಚ್ 25: ಕೋಲಾರದ ಕೆಎಚ್ ಮುನಿಯಪ್ಪ ಅವರ ಕುತಂತ್ರಗಳ ವಿರುದ್ಧ ಬಹಿರಂಗ ಯುದ್ಧ ಸಾರಿದ್ದ ಕಾಂಗ್ರೆಸ್‌ ಪಕ್ಷದ ಸ್ಥಳೀಯ ಶಾಸಕ ಡಾ ಎಂಸಿ ಸುಧಾಕರ್‌ ಅತಂತ್ರವಾಗಿದ್ದಾರೆ. ಮುಸುಕಿನ ಗುದ್ದಾಟದಲ್ಲಿ ತೊಡಗಿದ್ದ ಕೇಂದ್ರ ಸಚಿವ ಮುನಿಯಪ್ಪಗೆ ವಾಣಿ ಕೃಷ್ಣಾರೆಡ್ಡಿ ಕೈಹಿಡಿದಿರುವುದು ಸಕಾಲಿಕವಾಗಿ ಕಂಡುಬಂದಿದೆ.

ಇತ್ತೀಚೆಗೆ ನಡೆದ ಸ್ಥಳೀಯ ನಗರಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ವಿರುದ್ಧವೇ ಬಂಡಾಯದ ಬಾವುಟ ಹಾರಿಸಿ ಬೆಂಬಲಿಗರನ್ನು ಸ್ವತಂತ್ರವಾಗಿ ಕಣಕ್ಕೆ ಇಳಿಸಿದ್ದು ಯುವ ನಾಯಕ ಡಾ ಸುಧಾಕರ್‌ ಅವರಿಗೆ ಮುಳುವಾಗಿದೆ. ಇದರಿಂದ ಸಿಟ್ಟಿಗೆದ್ದ ಕಾಂಗ್ರೆಸ್‌ ಅವರಿಗೆ ಬಾಗಿಲು ಮುಚ್ಚಲಿದೆ ಎಂದು ನಂಬಲಾಗಿದೆ.

ಇದಕ್ಕೆ ಮತ್ತಷ್ಟು ರೆಕ್ಕೆ ಪುಕ್ಕಬಂದಿದ್ದು, ವಿಧಾನಸಭಾ ಚುನಾವಣೆಯಲ್ಲಿ ಪಕ್ಷದ ಅಧಿಕೃತ ಅಭ್ಯರ್ಥಿಯನ್ನಾಗಿ ಇತ್ತೀಗಷ್ಟೇ ಪಕ್ಷಕ್ಕೆ ಸೇರ್ಪಡೆಯಾಗಿರುವ ಮಾಜಿ ಸಚಿವ ದಿ. ಕೆಎಂ ಕೃಷ್ಣಾರೆಡ್ಡಿ ಅವರ ಪುತ್ರಿ ವಾಣಿ ಕೃಷ್ಣಾರೆಡ್ಡಿಗೆ ಟಿಕೆಟ್‌ ನೀಡಲು ಕಾಂಗ್ರೆಸ್‌ ನಿರ್ಧರಿಸಿದೆ. ಅದಕ್ಕೆ ಪಕ್ಷದ ಹೈಕಮಾಂಡ್‌ ಕೂಡ ಸಮ್ಮತಿ ಸೂಚಿಸಿದೆ ಎಂದು ಪಕ್ಷದ ಮೂಲಗಳು ತಿಳಿಸಿವೆ.

ಮೂಲಗಳ ಪ್ರಕಾರ ವಾಣಿ ಕೃಷ್ಣಾರೆಡ್ಡಿಗೆ ಕಾಂಗ್ರೆಸ್‌ ಬಿ ಫಾರಂ ಸಿಗುವುದು ಖಚಿತವಾಗಿದ್ದು, ಶಾಸಕ ಸುಧಾಕರ್‌ ಅವರಿಗೆ ಕಾಂಗ್ರೆಸ್‌ ಬಾಗಿಲು ಬಂದ್ ಆಗಿದೆ ಎಂದು ಹೇಳಲಾಗುತ್ತಿದೆ. ಕಳೆದ ನಗರಸಭಾ ಚುನಾವಣೆಯಲ್ಲಿ ಜೆಡಿಎಸ್‌ ತನ್ನ ಬೆಂಬಲಿಗರಿಗೆ ಬಿ ಫಾರಂ ಕೊಡಲಿಲ್ಲವೆಂದು ವಾಣಿ ಕೃಷ್ಣಾರೆಡ್ಡಿ ಅವರು ದಿಢೀರನೆ ಕೇಂದ್ರ ಸಚಿವ ಕೆಎಚ್ ಮುನಿಯಪ್ಪ,

ಮಾಜಿ ವಿಧಾನ ಸಭಾಧ್ಯಕ್ಷ ಶ್ರೀನಿವಾಸಪುರ ರಮೇಶ ಕುಮಾರ್‌, ಶಾಸಕ ವಿ ಮುನಿಯಪ್ಪ ಅವರ ಸಮ್ಮುಖದಲ್ಲಿ ಕಾಂಗ್ರೆಸ್‌ಗೆ ಸೇರ್ಪಡೆಯಾಗಿದ್ದರು. ಅಲ್ಲದೇ ವಾಣಿ ಕೃಷ್ಣಾರೆಡ್ಡಿ ಅವರನ್ನು ಪಕ್ಷಕ್ಕೆ ಸೇರಿಸಿಕೊಂಡರೆ ಬಿ ಫಾರಂ ನೀಡುವುದರ ಕುರಿತು ಮೊದಲೇ ಒಪ್ಪಂದವಾಗಿತ್ತು ಎನ್ನಲಾಗಿದೆ.

ಇತರೆ ಮೂಲಗಳ ಪ್ರಕಾರ, ಡಾ ಎಂಸಿ ಸುಧಾಕರ್‌ ಅವರು ಚುನಾವಣೆಯಲ್ಲಿ ಸ್ವತಂತ್ರವಾಗಿ ಸ್ಪರ್ಧಿಸುವ ಸಾಧ್ಯತೆಯೂ ಇದೆ. ಅಥವಾ ಯಾವುದಾರೊಂದು ರಾಜಕೀಯ ಪಕ್ಷದ (ಜೆಡಿಎಸ್) ಕೈಹಿಡಿಯುವ ಸಾಧ್ಯತೆಯೂ ಇದೆ.

'ಕಾಂಗ್ರೆಸ್ಸಿನಲ್ಲಿ ಮುನಿಯಪ್ಪ ಇರಬೇಕು; ಇಲ್ಲವೇ ನಾವು ಇರಬೇಕು' ಎಂಬ ಘೋಷವಾಕ್ಯದೊಂದಿಗೆ ಜಂಟಿಯಾಗಿ ಡಾ. ಎಂಸಿ ಸುಧಾಕರ ಬಾಬು ಹಾಗೂ ಗೌರಿಬಿದನೂರು ಶಾಸಕ ಎನ್ಎಚ್ ಶಿವಶಂಕ ರೆಡ್ಡಿ ಒಟ್ಟಿಗೆ ಜೆಡಿಎಸ್ ಸೇರುವ ಲಕ್ಷಣಗಳಿವೆ.

ನೀವೇ ಆಗಿರಿ ಕರ್ನಾಟಕದ ಗುರು | ಮತ ಹಾಕ್ತೀನಂತ ಪ್ರಮಾಣ ಮಾಡಿ

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+