ಹೆಬ್ಬಗೋಡಿ; ಕೌಟುಂಬಿಕ ಕಲಹಕ್ಕೆ ಪತಿ, ಪತ್ನಿ ಬಲಿ

Husband kills Wife and kills self Hebbagodi
ಬೆಂಗಳೂರು, ಮಾ.24: ಹೊಸೂರು ಮುಖ್ಯರಸ್ತೆ ಎಲೆಕ್ಟ್ರಾನಿಕ್ ಸಿಟಿ ಬಳಿಯ ಹೆಬ್ಬಗೋಡಿಯಲ್ಲಿ ಕೌಟುಂಬಿಕ ಕಲಹಕ್ಕೆ ಪತಿ, ಪತ್ನಿ ಬಲಿಯಾಗಿರುವ ದುರ್ಘಟನೆ ನಡೆದಿದೆ.

26 ವರ್ಷದ ಶಿಲ್ಪಾ ಹಾಗೂ 31 ವರ್ಷ ನಾಗರಾಜ್ ನಿನ್ನೆ ರಾತ್ರಿ ಮೃತಪಟ್ಟ ದುರ್ದೈವಿಗಳು. ಕಳೆದ ರಾತ್ರಿ ಗಂಡ ಹೆಂಡತಿ ನಡುವೆ ತೀವ್ರವಾಗಿ ಜಗಳ ನಡೆದಿದೆ. ತಡ ರಾತ್ರಿಯಾದರೂ ಜಗಳ ಬಗೆ ಹರಿಯದೆ ವಿಕೋಪಕ್ಕೆ ತಿರುಗಿದೆ.

ಕೋಪದ ಭರದಲ್ಲಿ ಗಂಡ ನಾಗರಾಜ್ ಹೆಂಡತಿಯ ಕುತ್ತಿಗೆ ಹಿಸುಕಿ ಸಾಯಿಸಿದ್ದಾನೆ. ನಂತರ ಗಾಬರಿಗೊಂಡು ಫ್ಯಾನಿಗೆ ನೇಣು ಬಿಗಿದುಕೊಂಡು ತಾನು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

ಗಂಡ ಹೆಂಡತಿ ನಡುವೆ ಮದುವೆಯಾದಾಗಿನಿಂದಲೂ ಹಣಕಾಸು ವ್ಯವಹಾರಕ್ಕಾಗಿ ಕಿತ್ತಾಟ ನಡೆಯುತ್ತಿತ್ತು. ನಿನ್ನೆ ಕೂಡಾ ಇಬ್ಬರ ಮನೆ ಕಡೆಯವರು ಬಂದು ಸಂಧಾನ ನಡೆಸಲು ಯತ್ನಿಸಿ ವಿಫಲರಾಗಿದ್ದರು.

ಅಲ್ಲದೆ, ಶಿಲ್ಪಾ ಅವರ ಶೀಲದ ಮೇಲೆ ಇತ್ತೀಚೆಗೆ ನಾಗರಾಜ್ ಶಂಕೆ ವ್ಯಕ್ತಪಡಿಸಿ, ಆಗಾಗ ಚುಚ್ಚು ಮಾತಿನಿಂದ ಬೈದಾಡುತ್ತಿದ್ದರು ಎಂದು ತಿಳಿದು ಬಂದಿದೆ. ಮೇಲ್ನೋಟಕ್ಕೆ ಇದು ಕೌಟುಂಬಿಕ ಕಲಹಕ್ಕೆ ಉಂಟಾದ ಸಾವು ಎಂದು ತಿಳಿದು ಬಂದಿದೆ. ಪ್ರಕರಣ ದಾಖಲಿಸಿಕೊಳ್ಳಲಾಗಿದ್ದು, ತನಿಖೆ ಮುಂದುವರೆದಿದೆ ಎಂದು ಹೆಬ್ಬಗೋಡಿ ಠಾಣೆ ಪೊಲೀಸರು ಹೇಳಿದ್ದಾರೆ.

ನೀವೇ ಆಗಿರಿ ಕರ್ನಾಟಕದ ಗುರು | ಮತ ಹಾಕ್ತೀನಂತ ಪ್ರಮಾಣ ಮಾಡಿ

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+