ಸಂಜು ಶಿಕ್ಷೆ ಮನ್ನಾ ಮಾಡಬಾರದು : ಅಣ್ಣಾ ಹಜಾರೆ

Sanjay should not be pardoned
ನವದೆಹಲಿ, ಮಾ. 23 : ಮಾರ್ಚ್ 12, 1993ರಂದು ಮುಂಬೈನಲ್ಲಿ ನಡೆದ ಸರಣಿ ಬಾಂಬ್ ಸ್ಫೋಟ ಪ್ರಕರಣದ ಆರೋಪಿ ಸ್ಥಾನದಲ್ಲಿದ್ದ ಖ್ಯಾತ ಬಾಲಿವುಡ್ ನಟ ಸಂಜಯ್ ದತ್ ಅವರಿಗೆ 5 ವರ್ಷಗಳ ಕಠಿಣ ಸಜೆಯನ್ನು ಸುಪ್ರೀಂ ಕೋರ್ಟ್ ನೀಡಿರುವುದು ಸರಿಯಾಗಿದ್ದು, ಯಾವುದೇ ಕಾರಣಕ್ಕೂ ಕ್ಷಮೆ ನೀಡಬಾರದು ಎಂದು ಸಾಮಾಜಿಕ ಕಾರ್ಯಕರ್ತ ಅಣ್ಣಾ ಹಜಾರೆ ಅವರು ಅಭಿಪ್ರಾಯ ಪಟ್ಟಿದ್ದಾರೆ.

ಭಾರತದ ಸರ್ವೋಚ್ಚ ನ್ಯಾಯಾಲಯ ಸರಿಯಾದ ತೀರ್ಪನ್ನೇ ನೀಡಿದೆ. ನ್ಯಾಯಾಲಯ ನೀಡಿರುವ ತೀರ್ಪಿನ ಕುರಿತಂತೆ ಮಾತನಾಡುವುದು ಮತ್ತು ತಲೆತೂರಿಸದಿರುವುದು ಒಳ್ಳೆಯದು ಅವರು ಅವರು ಶನಿವಾರ ದೆಹಲಿಯಲ್ಲಿ ಪತ್ರಕರ್ತರಿಗೆ ತಿಳಿಸಿದರು. ಆದರೆ, ಅವರನ್ನು ಪ್ರೀತಿಸುವ ಅಭಿಮಾನಿಗಳು, ಅವರಿಗೆ ಕ್ಷಮೆ ನೀಡಬೇಕೆಂದು ಕೇಳಿದ್ದರಲ್ಲಿ ತಪ್ಪೇನಿಲ್ಲ ಎಂದು ಅವರು ಹೇಳಿದರು.

ಟಾಟಾ ನ್ಯಾಯಾಲಯ ನೀಡಿದ್ದ ತೀರ್ಪನ್ನು ಎತ್ತಿಹಿಡಿದ ಸರ್ವೋಚ್ಚ ನ್ಯಾಯಾಲಯ, ಮಾರ್ಚ್ 21ರಂದು 53 ವರ್ಷದ ಸಂಜಯ್ ದತ್ ಅವರಿಗೆ 5 ವರ್ಷ ಸಜೆಯನ್ನು ಪ್ರಕಟಿಸಿತು. ಜನರನ್ನು ಹತ್ಯೆಗೈಯಲು ಬಳಸಬೇಕಾಗಿದ್ದ ಶಸ್ತ್ರಾಸ್ತ್ರಗಳನ್ನು ಅಕ್ರಮವಾಗಿ ಇಟ್ಟುಕೊಂಡಿದ್ದ ಸಂಜಯ್ ದತ್ ಅವರು ಈಗಾಗಲೆ ಒಂದೂವರೆ ವರ್ಷ ಜೈಲು ಶಿಕ್ಷೆ ಅನುಭವಿಸಿದ್ದರಿಂದ ಇನ್ನೂ ಮೂರುವರೆ ವರ್ಷ ಅವರು ಜೈಲಿನಲ್ಲಿ ಶಿಕ್ಷೆ ಅನುಭವಿಸಬೇಕಾಗಿದೆ.

ಸಂಜಯ್ ದತ್ ಅವರಿಗೆ ನೀಡಿದ್ದ ಶಿಕ್ಷೆಯನ್ನು ಸುಪ್ರೀಂಕೋರ್ಟ್ ಎತ್ತಿಹಿಡಿದಿರುವುದು ಮಹಾಪರಾಧ ಎನ್ನುವಂತೆ ಬಾಲಿವುಡ್ ವರ್ತಿಸುತ್ತಿದೆ. ರಾಜ್ಯಪಾಲರು ಮನಸ್ಸು ಮಾಡಿದರೆ ಶಿಕ್ಷೆಯನ್ನು ಮನ್ನಾ ಮಾಡಬಹುದು ಎಂಬ ಮಾತು ಕೇಳಿಬರುತ್ತಿದೆ. ಕೋರ್ಟ್ ನೀಡಿದ್ದ ತೀರ್ಪನ್ನು ಧಿಕ್ಕರಿಸಿ ರಾಜ್ಯಪಾಲರು ಶಿಕ್ಷೆ ಮನ್ನಾ ಮಾಡಬಹುದಾದರೆ ಸುಪ್ರೀಂಕೋರ್ಟ್ ಶಿಕ್ಷೆ ಪ್ರಕಟಿಸುವ ಅವಶ್ಯಕತೆಯಾದರೂ ಏನಿತ್ತು ಎಂಬ ವಾದ ಕೂಡ ಕೇಳಿಬರುತ್ತಿದೆ.

ಪ್ರೆಸ್ ಕೌನ್ಸಿಲ್ ಆಫ್ ಇಂಡಿಯಾದ ಚೇರ್ಮನ್ ನ್ಯಾಯಮೂರ್ತಿ ಮಾರ್ಕಡೇಯ್ ಕಾಟ್ಜು ಅವರು 'ಮುನ್ನಾಭಾಯ್' ಸಂಜಯ್ ಅವರ ಶಿಕ್ಷೆಯನ್ನು ಮನ್ನಾ ಮಾಡಬೇಕೆಂದು ಮಹಾರಾಷ್ಟ್ರ ರಾಜ್ಯಪಾಲರಿಗೆ ಪತ್ರ ಬರೆದಿದ್ದಾರೆ. ಅಲ್ಲದೆ, ಸಂಸದೆ ಜಯಾ ಬಚ್ಚನ್, ಸಂಜಯ್ ಜೊತೆ ಅನೇಕ ಚಿತ್ರ ಮಾಡಿರುವ ಬಾಲಿವುಡ್ ನಿರ್ದೇಶಕ ಮಹೇಶ್ ಭಟ್ ಮುಂತಾದವರು, ಸಂಜನ್‌ನಂಥ ಸಜ್ಜನನಿಗೆ ಇಂಥ ಶಿಕ್ಷೆ ಕೊಡಬಾರದಿತ್ತು ಎಂದು ಕೂಗು ಎಬ್ಬಿಸಿದ್ದಾರೆ.

ಸಂಜು ಪರವಾಗಿ ಜೈಲಿಗೆ ಹೋಗ್ತೀನಿ : ಈ ನಡುವೆ, ರಾಖಿ ಸಾವಂತ್ ಎಂಬ ಡ್ರಾಮಾ ಕ್ವೀನ್, ನ್ಯಾಯಾಲಯ ಒಪ್ಪುವುದಾದರೆ ಸಂಜಯ್ ದತ್ ಬದಲಾಗಿ ತಾನು ಜೈಲಿಗೆ ಹೋಗಲು ಸಿದ್ಧ ಎಂಬ ಅವಿವೇಕದ ಹೇಳಿಕೆಯನ್ನು ನೀಡಿದ್ದಾಳೆ. ತಾನು ಸದ್ಯಕ್ಕೆ ಏಕಾಂಗಿಯಾಗಿರುವದರಿಂದ ಕೆಲ ವರ್ಷಗಳನ್ನು ಜೈಲಿನಲ್ಲಿ ಕಳೆಯುವುದು ನನಗೆ ತೊಂದರೆಯಾಗದು ಎಂದು ಹೇಳಿಕೆ ನೀಡಿ ನಗೆಪಾಟಲಿಗೆ ಒಳಗಾಗಿದ್ದಾಳೆ.

1993ರ ಮಾರ್ಚ್ 12ರಂದು ಮುಂಬೈನಲ್ಲಿ ನಡೆದ 13 ಸರಣಿ ಬಾಂಬ್ ಸ್ಫೋಟದಲ್ಲಿ 250ಕ್ಕೂ ಹೆಚ್ಚು ಜನ ಅಸುನೀಗಿ, 700ಕ್ಕೂ ಹೆಚ್ಚು ಜನ ಗಾಯಗೊಂಡಿದ್ದರು. ವಿದೇಶಕ್ಕೆ ಪರಾರಿಯಾಗಿರುವ ದಾವೂದ್ ಇಬ್ರಾಹಿಂ ಗ್ಯಾಂಗ್ ಈ ದುಷ್ಕೃತ್ಯವನ್ನು ನಡೆಸಿತ್ತು. ಈ ಸಂದರ್ಭದಲ್ಲಿ ಸಂಜಯ್ ಅವರ ಮನೆಯಲ್ಲಿ ಎಕೆ 56 ರೈಫಲ್, 9 ಎಂಎಂ ಪಿಸ್ತೂಲು, ಗ್ರೆನೇಡ್ ಸಿಕ್ಕಿತ್ತು. ಟಾಡಾ ಸಂಬಂಧಿತ ಆರೋಪದಿಂದ ಅವರನ್ನು ಮುಕ್ತರನ್ನಾಗಿ ಮಾಡಲಾಗಿತ್ತಾದರೂ, ಶಸ್ತ್ರಾಸ್ತ್ರಗಳನ್ನು ಅಕ್ರಮವಾಗಿ ಇಟ್ಟುಕೊಂಡಿದ್ದಕ್ಕೆ ಅಪರಾಧಿ ಸ್ಥಾನದಲ್ಲಿ ನಿಂತಿದ್ದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+