ಚಾಮರಾಜಪೇಟೆ: ಜಮೀರ್ ವಿರುದ್ಧ ಶಹತಾಜ್ ಖಾನಂ

ಕೆಜೆಪಿ ಅಧ್ಯಕ್ಷ ಬಿಎಸ್ ಯಡಿಯೂರಪ್ಪ ಅವರು ಗುರುವಾರ ಸಂಜೆ ಸುದ್ದಿಗೋಷ್ಠಿಯಲ್ಲಿ ಈ ಪಟ್ಟಿ ಬಿಡುಗಡೆ ಮಾಡಿದ್ದಾರೆ. ಅಧಿಕೃತವಾಗಿ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಿದ ಮೊದಲ ಪಕ್ಷವಾಗಿ ಕೆಜೆಪಿ ಹೊರಹೊಮ್ಮಿದೆ. ಎಲ್ಲ 224 ಕ್ಷೇತ್ರಗಳಲ್ಲಿ ಏಕಾಂಗಿಯಾಗಿ ಸ್ಪರ್ಧಿಸುವುದಾಗಿ ಯಡಿಯೂರಪ್ಪ ಹೇಳಿದ್ದಾರೆ.
ಜೆಡಿಎಸ್ ಶಾಸಕ ಜಮೀರ್ ಅಹ್ಮದ್ ಪ್ರತಿನಿಧಿಸುವ ನಗರದ ಚಾಮರಾಜಪೇಟೆ ಕ್ಷೇತ್ರದಿಂದ ಕೆಜೆಪಿ ಅಭ್ಯರ್ಥಿಯಾಗಿ ಮಾಜಿ ಉಪ ಮೇಯರ್ ಶಹತಾಜ್ ಖಾನಂ ಕಣಕ್ಕಿಸಲಾಗಿದೆ. ತುಮಕೂರು ನಗರದಿಂದ ಹಾಲಿ ಸಂಸದ ಜಿಎಸ್ ಬಸವರಾಜು ಪುತ್ರ ಜ್ಯೋತಿ ಗಣೇಶ್ ಅಭ್ಯರ್ಥಿಯಾಗಿದ್ದಾರೆ.
ಆಶ್ಚರ್ಯಕರ ಸಂಗತಿ ಎಂದರೆ, ಬಸವಕಲ್ಯಾಣ ಕ್ಷೇತ್ರದ ಶಾಸಕ ಸ್ಥಾನಕ್ಕೆ ರಾಜಿನಾಮೆ ನೀಡಿ ಕೆಜೆಪಿಗೆ ಸೇರ್ಪಡೆಗೊಂಡಿದ್ದ ಬಸವರಾಜ ಪಾಟೀಲ ಅಟ್ಟೂರು ಅವರ ಹೆಸರು ಅಭ್ಯರ್ಥಿಗಳ ಪಟ್ಟಿಯಲ್ಲಿ ಇಲ್ಲ. ಅವರಿಗೆ ಟಿಕೆಟ್ ನೀಡುವ ಬಗ್ಗೆ ಮೊಟ್ಟ ಮೊದಲಿಗೆ ಬಹಿರಂಗವಾಗಿಯೇ ಪ್ರಕಟಿಸಲಾಗಿತ್ತು. ಯಡಿಯೂರಪ್ಪ ಅವರನ್ನು ಬೆಂಬಲಿಸಿ ರಾಜಿನಾಮೆ ನೀಡಲು ಮುಂದಾಗಿದ್ದ ಶಾಸಕರ ಪೈಕಿ ಅಟ್ಟೂರು ಅವರೇ ಮೊದಲಿಗರು.
ಈಗ ಪ್ರಕಟಗೊಂಡಿರುವ 69 ಅಭ್ಯರ್ಥಿಗಳೊಂದಿಗೆ ಇದೇ ತಿಂಗಳ 25ರಂದು ಸಭೆ ನಡೆಸಿ ಆಯಾ ಕ್ಷೇತ್ರಗಳ ಸಿದ್ಧತೆಯನ್ನು ಪರಿಶೀಲಿಸಲಾಗುವುದು. ಶುಕ್ರವಾರದಿಂದ ಮತ್ತೂಂದು ಸುತ್ತಿನ ರಾಜ್ಯ ಪ್ರವಾಸ ಆರಂಭಿಸಲಾಗುವುದು. ಬಳಿಕ, ಎರಡನೇ ಪಟ್ಟಿಯನ್ನು ಬಿಡುಗಡೆಗೊಳಿಸಲಾಗುವುದು ಎಂದು ಬಿಎಸ್ ವೈ ವಿವರಿಸಿದರು.
ಪರಿಶಿಷ್ಟ ಜಾತಿಯಿಂದ 14, ಪರಿಶಿಷ್ಟ ಪಂಗಡದಿಂದ 8, 3 ಮಹಿಳೆಯರು, 3 ಮುಸ್ಲಿಮರು ಮತ್ತು ಒಬ್ಬ ಕ್ರಿಶ್ಚಿಯನ್ ಗೆ ಟಿಕೆಟ್ ನೀಡಲಾಗಿದೆ.
ಬೆಂಗಳೂರು ಜಿಲ್ಲೆ
1. ರಾಜಾಜಿನಗರ - ಶೋಭಾ ಕರಂದ್ಲಾಜೆ
2. ದಾಸರಹಳ್ಳಿ - ಮರಿಸ್ವಾಮಿ
3. ಸರ್ವಜ್ಞ ನಗರ - ಮೈಕೇಲ್ ಫರ್ನಾಂಡಿಸ್
4. ಚಾಮರಾಜಪೇಟೆ - ಶಹತಾಜ್ ಖಾನಂ
5. ಶಾಂತಿನಗರ - ರಮೇಶ್ ಯಾದವ್
6. ಆನೇಕಲ್ - ಕೃಷ್ಣಮೂರ್ತಿ
ಚಾಮರಾಜನಗರ ಜಿಲ್ಲೆ:
1. ಕೊಳ್ಳೇಗಾಲ-ಮೀಸಲು - ಬಾಲರಾಜು
2. ಚಾಮರಾಜನಗರ - ಪ್ರೊ. ಮಲ್ಲಿಕಾರ್ಜುನಪ್ಪ
3. ಗುಂಡ್ಲುಪೇಟೆ - ನಿರಂಜನ
ಮೈಸೂರು ಜಿಲ್ಲೆ:
1. ನಂಜನಗೂಡು- ಪರಿಶಿಷ್ಟ ಪಂಗಡ - ಮಹಾದೇವಯ್ಯ
2. ಕೃಷ್ಣರಾಜ - ಎಚ್ ವಿ ರಾಜೀವ್
3. ವರುಣಾ - ಕಾಪು ಸಿದ್ದಲಿಂಗಸ್ವಾಮಿ
4. ಚಾಮುಂಡೇಶ್ವರಿ - ಅಪ್ಪಣ್ಣ
5. ಎಚ್ ಡಿ ಕೋಟೆ - ಡಾ. ಕೃಷ್ಣಸ್ವಾಮಿ
6. ಪಿರಿಯಾಪಟ್ಟಣ - ಬಸವರಾಜು
ಮಂಡ್ಯ ಜಿಲ್ಲೆ:
1. ಮಳವಳ್ಳಿ ಮೀಸಲು - ಮುನಿರಾಜು
ತುಮಕೂರು ಜಿಲ್ಲೆ:
1. ಚಿಕ್ಕನಾಯಕನಹಳ್ಳಿ - ಮಾಧುಸ್ವಾಮಿ
2. ತಿಪಟೂರು - ಲೋಕೇಶ್ವರ್
3. ತುರುವೇಕೆರೆ - ಮಸಾಲೆ ಜಯರಾಂ
4. ತುಮಕೂರು ನಗರ - ಜ್ಯೋತಿ ಗಣೇಶ್
5. ಕೊರಟಗೆರೆ- ಮೀಸಲು - ವಾಲೆ ಚಂದ್ರಯ್ಯ
6. ಪಾವಗಡ- ಮೀಸಲು - ಶ್ರೀರಾಮ್
ಚಿಕ್ಕಮಗಳೂರು ಜಿಲ್ಲೆ:
1. ತರೀಕೆರೆ - ಸುರೇಶ್
2. ಕಡೂರು - ಬೆಳ್ಳಿ ಪ್ರಕಾಶ್
ಶಿವಮೊಗ್ಗ ಜಿಲ್ಲೆ:
1. ಶಿವಮೊಗ್ಗ ಗ್ರಾಮಾಂತರ - ಜಿ ಬಸವಣ್ಯಪ್ಪ
2. ಶಿವಮೊಗ್ಗ - ರುದ್ರೇಗೌಡ
3. ಶಿಕಾರಿಪುರ - ಬಿಎಸ್ ಯಡಿಯೂರಪ್ಪ
4. ಸೊರಬ - ಹರತಾಳು ಹಾಲಪ್ಪ
ದಾವಣಗೆರೆ ಜಿಲ್ಲೆ:
1. ಹರಪನಹಳ್ಳಿ - ಕೊಟ್ರೇಶ್
2. ಹರಿಹರ - ಬಿಪಿ ಹರೀಶ್
3. ಚನ್ನಗಿರಿ - ಮಾಡಾಳ್ ವಿರೂಪಾಕ್ಷಪ್ಪ
ಹಾವೇರಿ ಜಿಲ್ಲೆ:
1. ಹಾನಗಲ್ - ಸಿಎಂ ಉದಾಸಿ
2. ಹಾವೇರಿ- ಮೀಸಲು - ನೆಹರೂ ಓಲೇಕಾರ
3. ಬ್ಯಾಡಗಿ - ಸುರೇಶಗೌಡ ಪಾಟೀಲ
4. ರಾಣೆಬೆನ್ನೂರು - ಜಿ ಶಿವಣ್ಣ
5. ಹಿರೇಕೆರೂರು - ಬಿಜಿ ಬಣಕಾರ್
ಬೀದರ್ ಜಿಲ್ಲೆ:
1. ಬೀದರ್ ದಕ್ಷಿಣ - ಡಾ. ಶೈಲೇಂದ್ರ ಬೆಲ್ದಾಳೆ
2. ಬೀದರ್ - ಗುರುಪಾದಪ್ಪ ನಾಗಮಾರಪಳ್ಳಿ
3. ಹುಮ್ನಾಬಾದ್ - ಅಶ್ರಫ್
4. ಭಾಲ್ಕಿ - ಬಿಕೆ ಸಿದ್ರಾಮ್
ಗುಲ್ಬರ್ಗಾ ಜಿಲ್ಲೆ:
1. ಅಫಜಲಪುರ - ಎಂವೈ ಪಾಟೀಲ್
2. ಕನಕಗಿರಿ - ಬಸವರಾಜ ದಡೇಸೂರ
3. ಚಿಂಚೋಳಿ -ಎಸ್ ಸಿ- ಸುನಿಲ್ ವಲ್ಯಾಪುರ
4. ಆಳಂದ - ಬಿ ಆರ್ ಪಾಟೀಲ್
5. ಗುಲ್ಬರ್ಗಾ ದಕ್ಷಿಣ - ಎಸ್ ಕೆ ಕಾಂತಾ
6. ಗುಲ್ಬರ್ಗಾ ಉತ್ತರ - ನಾಸೀರ್ ಹುಸೇನ್
7. ಗುರುಮಠ್ಕಲ್ - ವೆಂಕಟರೆಡ್ಡಿ ಮುದ್ನಾಳ್
8. ಚಿತ್ತಾಪುರ - ಗುರುನಾಥ
9. ಶಹಾಪುರ ಮೀಸಲು - ಗುರು ಪಾಟೀಲ್
ರಾಯಚೂರು ಜಿಲ್ಲೆ:
1. ಲಿಂಗಸಗೂರು ಮೀಸಲು - ಮುರಾರಿ
2. ಮಸ್ಕಿ - ಮಹದೇವಪ್ಪ ಪೊಲೀಸ್ ಪಾಟೀಲ್
3. ಸಿಂಧನೂರು - ರಾಜಶೇಖರ ಪಾಟೀಲ
ಯಾದಗಿರಿ ಡಾ. ವೀರಬಸಂತರೆಡ್ಡಿ
* ಸವದತ್ತಿ- ಯಲ್ಲಮ್ಮ
ಹುಬ್ಬಳ್ಳಿ ಧಾರವಾಢ ಪೂರ್ವ - ಶಂಕರಪ್ಪ ಬಿಜವಾಡ
2. ಧಾರವಾಡ - ನಿಜನಗೌಡ ಪಾಟೀಲ್
3. ಕುಂದಗೋಳ - ಎಸ್ ಐ ಚಿಕ್ಕನಗೌಡರ್
4. ಕಲಘಟಗಿ ಸಿಎಂ ನಿಂಬಣ್ಣವರ
ಬಿಜಾಪುರ ಜಿಲ್ಲೆ:
1. ನಾಗಠಾಣ - ವಿಠಲ್ ಕಟಕದೊಂಡ
ಚಿಕ್ಕಬಳ್ಳಾಪುರ ಜಿಲ್ಲೆ:
1. ಶಿಡ್ಲಘಟ್ಟ - ಶಿವಕುಮಾರ್ ಗೌಡ
2. ಚಿಕ್ಕಬಳ್ಳಾಪುರ - ಲಕ್ಷ್ಮೀಪತಿ ಬಾಬು
ಚಿತ್ರದುರ್ಗ ಜಿಲ್ಲೆ:
1. ಮೊಳಕಾಲ್ಮೂರು- ಮೀಸಲು ದಾಕ್ಷಾಯಿಣಮ್ಮ
2. ಚಳ್ಳಕೆರೆ- ಮೀಸಲು - ಕೆಟಿ ಕುಮಾರಸ್ವಾಮಿ
3. ಹೊಸದುರ್ಗ - ಲಿಂಗಮೂರ್ತಿ
4. ಹೊಳಲ್ಕೆರೆ- ಮೀಸಲು - ಎಂ ಚಂದ್ರಪ್ಪ
5. ದೇವರಹಿಪ್ಪರಗಿ - ರಾಜೂಗೌಡ ಪಾಟೀಲ್
ಬಳ್ಳಾರಿ ಜಿಲ್ಲೆ
1. ಸಂಡೂರು ಮೀಸಲು - ಬಿ ರವಿಪ್ರಕಾಶ್
2. ಕಂಪ್ಲಿ - ಎಚ್ ಡಿ ಬಸವರಾಜು
ನೀವೇ ಆಗಿರಿ ಕರ್ನಾಟಕದ ಗುರು | ಮತ ಹಾಕ್ತೀನಂತ ಪ್ರಮಾಣ ಮಾಡಿ












Click it and Unblock the Notifications