ನೀತಿ ಸಂಹಿತೆ : ಸರ್ಕಾರಕ್ಕೆ ಹೇಗೆ ಅನ್ವಯಿಸುತ್ತದೆ ?

karnataka
ಬೆಂಗಳೂರು, ಮಾ.21 : ರಾಜ್ಯ ಚುನಾವಣೆ ಘೋಷಣೆಗೊಂಡು ತಕ್ಷಣದಿಂದಲೇ ನೀತಿ ಸಂಹಿತೆ ಜಾರಿಯಾಗಿದೆ. ರಾಜ್ಯದಲ್ಲಿ ಚುನಾವಣಾ ನೀತಿ ಸಂಹಿತೆ ಜಾರಿಯಾದ ನಂತರ ಆಡಳಿತಾರೂಡ ಸರರ್ಕಾರಗಳು ಕೇವಲ ಉಸ್ತುವಾರಿ ಸರ್ಕಾರಗಳಾಗಿ ಬದಲಾಗುತ್ತವೆ. ಸರ್ಕಾರದ ಕಾರ್ಯಗಳ ಮೇಲೂ ನೀತಿ ಸಂಹಿತೆ ಪ್ರಭಾವ ಬೀರುತ್ತದೆ.

ನೀತಿ ಸಂಹಿತೆ ಜಾರಿಯಾದ ನಂತರ ಸರ್ಕಾರಗಳು ಕುಡಿಯುವ ನೀರು ಮತ್ತು ಪ್ರಕೃತಿ ವಿಕೋಪಗಳು ಸಂಭವಿಸಿದಾಗ ಮಾತ್ರ ಅನುದಾನ ಬಿಡುಗಡೆ ಮಾಡುವ ಅಧಿಕಾರ ಹೊಂದಿರುತ್ತವೆ. ಮತದಾರರನ್ನು ಒಲೈಸಲು ನೂತನ ಯೋಜನೆಗಳನ್ನು ನೀತಿ ಸಂಹಿತೆ ಜಾರಿಯಲ್ಲಿರುವ ಸಂದರ್ಭದಲ್ಲಿ ಘೋಷಿಸುವಂತಿಲ್ಲ.

ಕರ್ನಾಟದಲ್ಲಿ ಮೇ 5ರಂದು ವಿಧಾನಸಭೆ ಚುವಾವಣೆ ನಡೆಯಲಿದೆ. ಬುಧವಾರದಿಂದಲೇ ನೀತಿ ಸಂಹಿತೆ ಜಾರಿಯಾಗಿದೆ. ಇದರಿಂದಾಗಿ ನೂತನ 43 ತಾಲೂಕುಗಳ ಘೋಷಣೆ, ರೈತರ ಸಾಲಮನ್ನಾ, ಸರ್ಕಾರಿ ನೌಕರರಿಗೆ ಬೋನಸ್ ಮುಂತಾದ ನೂತನ ಯೋಜನೆಗಳನ್ನು ಸರ್ಕಾರ ಘೋಷಣೆ ಮಾಡುವಂತಿಲ್ಲ. ಹಾಗಾದರೆ ಬನ್ನಿ ಸರ್ಕಾರ ನೀತಿ ಸಂಹಿತೆ ಜಾರಿಯಲ್ಲಿರುವಾಗ ಯಾವ ಕೆಲಸಗಳನ್ನು ಮಾಡಬಹುದು ನೋಡೋಣ.
ಈ ಕಾರ್ಯಗಳನ್ನು ಮಾಡುವಂತಿಲ್ಲ
* ಸಚಿವ ಸಂಪುಟ ಸಭೆ ನಡೆಸುವುದು
* ಅಧಿಕಾರಿಗಳ ಸಭೆ ನಡೆಸಿ ನೂತನ ಯೋಜನೆ ಪ್ರಕಟಿಸುವುದು
* ಸರಕಾರಿ ಕಾರ್ಯಕ್ರಮ ನಡೆಸುವುದು
* ದೇವಸ್ಥಾನ, ಮಠ, ಚರ್ಚ್ ಮುಂತಾದವುಗಳನ್ನು ಪ್ರಚಾರಕ್ಕೆ ಬಳಸಿಕೊಳ್ಳುವುದು.
* ಸರಕಾರಿ ವಾಹನ, ಕಟ್ಟಡ, ಪ್ರವಾಸಿ ಮಂದಿರಗಳನ್ನು ಬಳಸಿ ಪ್ರಚಾರ ಮಾಡುವುದು.
* ಮಾಧ್ಯಮಗಳಲ್ಲಿ ಸರ್ಕಾರಿ ಜಾಹೀರಾತು ನೀಡುವುದು.

ಈ ಕೆಲಸಗಳನ್ನು ಮಾಡಬಹುದು

*ಪ್ರಕೃತಿ ವಿಕೋಪಗಳು ಸಂಭವಿಸಿದರೆ ಪರಿಹಾರ ಕೈಗೊಳ್ಳಬಹುದು.
* ಚುನಾವನಾ ಆಯೋಗ ಅನುಮತಿ ನೀಡಿದರೆ ನೌಕರರ ವರ್ಗಾವಣೆ ಮಾಡಬಹುದು.
* ಜಿಲ್ಲಾ, ತಾಲೂಕು ಕೇಂದ್ರದ ಪ್ರವಾಸಿ ಮಂದಿರಗಳನ್ನು ವಾಸ್ತವ್ಯಕ್ಕೆ ಮಾತ್ರ ಬಳಸಬಹುದು.
* ಎಲ್ಲಾ ಪಕ್ಷದ ನಾಯಕರಿಗೂ ಪ್ರವಾಸಿ ಮಂದಿರಗಳು ಸಿಗುವಂತೆ ಜಿಲ್ಲಾಡಳಿತದ ವಶಕ್ಕೆ ಒಪ್ಪಿಸುವುದು.
* ಈಗಾಗಲೇ ಆರ್ಥಿಕ ಇಲಾಖೆಯ ಅನುಮೋದನೆ ದೊರಕಿದ ಯೋಜನೆಗಳಿಗೆ ನೀತಿ ಸಂಹಿತೆ ಅನ್ವಯವಾಗುವುದಿಲ್ಲ.

ಈ ನೀತಿ ಸಂಹಿತೆ ಕೇವಲ ಆಡಳಿತಾರೂಡ ಸರ್ಕಾರಕ್ಕೆ ಮಾತ್ರ ಅನ್ವಯವಾಗುತ್ತದೆ. ಪಕ್ಷದ ಅಭ್ಯರ್ಥಿಗಳಿಗೆ ಮತ್ತು ರಾಜಕೀಯ ಪಕ್ಷಗಳಿಗೆ ಚುನಾವಣಾ ಆಯೋಗ ಪ್ರತ್ಯೇಕ ನೀತಿ ಸಂಹಿತೆ ಅನ್ವಯವಾಗುತ್ತದೆ. (ರಾಜ್ಯ ಚುನಾವಣಾ ವೇಳಾಪಟ್ಟಿ ನೋಡಿ)

ನೀವೇ ಆಗಿರಿ ಕರ್ನಾಟಕದ ಗುರು | ಮತ ಹಾಕ್ತೀನಂತ ಪ್ರಮಾಣ ಮಾಡಿ

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+