ಮತ್ತೆರಡು ಬಿಜೆಪಿ ವಿಕೆಟ್ ಪತನ; ಇದೇ ವಾರ ಮತ್ತಷ್ಟು

ಇದರ ಜತೆಗೇ, ಚಾಮರಾಜನಗರದಿಂದ ಮೇಲ್ಮನೆಗೆ ಆಯ್ಕೆಯಾಗಿದ್ದ ಪ್ರೊ. ಕೆಆರ್ ಮಲ್ಲಿಕಾರ್ಜುನಪ್ಪ (ಚಿತ್ರದಲ್ಲಿರುವವರು) ತಮ್ಮ ಶಾಸಕ ಸ್ಥಾನಕ್ಕೆ ಇದೀಗತಾನೆ ರಾಜೀನಾಮೆ ಸಲ್ಲಿಸಿದ್ದಾರೆ. ನಿರೀಕ್ಷೆಯಂತೆ ಅವರು ಕೆಜೆಪಿ ಸೇರುತ್ತಿದ್ದು, ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಚಾಮರಾಜನಗರ ಕ್ಷೇತ್ರದಿಂದ ಸ್ಪರ್ಧಿಸುವುದಾಗಿ ಹೇಳಿದ್ದಾರೆ.
ಮೂರು ದಶಕಗಳ ಕಾಲ ಇವರು ನಾನಾ ಕಾಲೇಜಿನಲ್ಲಿ ಅರ್ಥಶಾಸ್ತ್ರ ಬೊಧಿಸಿದ್ದಾರೆ. ಪ್ರೊ. ಕೆಆರ್ ಮಲ್ಲಿಕಾರ್ಜುನಪ್ಪ ಅವರು ಆಹಾರ ಮತ್ತು ವಿಹಾರಧಾಮಗಳ ನಿಗಮದ ಅಧ್ಯಕ್ಷರೂ ಆಗಿದ್ದರು.
ನಿರೀಕ್ಷೆಯಂತೆ ದಾವಣಗೆರೆಯ ಚನ್ನಗಿರಿ ವಿಧಾನಸಭೆ ಕ್ಷೇತ್ರದ ಮಾಡಾಳ್ ಕೆ ವಿರೂಪಾಕ್ಷಪ್ಪ ಅವರು ನಿನ್ನೆ ಯಡಿಯೂರಪ್ಪ ಅವರ ಸಮ್ಮುಖದಲ್ಲಿ ಕೆಜೆಪಿಗೆ ಎಂಟ್ರಿ ಕೊಟ್ಟಿದ್ದಾರೆ.
ಇದೇ ವೇಳೆ, ಯಡಿಯೂರಪ್ಪನವರು ಮುಖ್ಯಮಂತ್ರಿಯಾಗಿದ್ದಾಗ ಅವರು ಕೈಗೊಂಡ ಅಭಿವೃದ್ಧಿ ಕಾಮಗಾರಿಗಳು ಜನಮಾನಸಲ್ಲಿ ಉಳಿದಿವೆ. ಹೀಗಾಗಿ ಅವರ ಅಭಿವೃದ್ಧಿ ಧೋರಣೆಯೇ ನಮಗೆ ದಿಕ್ಸೂಚಿಯಾಗಿದ್ದು, ಈ ಹಿನ್ನೆಲೆಯಲ್ಲಿ ಬಿಜೆಪಿ ತೊರೆದು ಅಧಿಕೃತವಾಗಿ ಕರ್ನಾಟಕ ಜನತಾ ಪಕ್ಷಕ್ಕೆ ಸೇರ್ಪಡೆಯಾಗುತ್ತಿರುವುದಾಗಿ ಶಾಸಕ ಮಾಡಾಳ ವಿರೂಪಾಕ್ಷಪ್ಪ ಘೋಷಿಸಿದ್ದಾರೆ.
ಈ ಮಧ್ಯೆ, ನಿರಾಣಿ, ರೇಣುಕಾ, ಕತ್ತಿ ಮುಂತಯಾದವರು ಹೋಲ್ ಸೇಲ್ ಆಗಿ ಕೆಜೆಪಿ ಸೇರಲಿದ್ದಾರೆ ಎಂದು ಕೆಜೆಪಿ ಪ್ರಧಾನ ಕಾರ್ಯದರ್ಶಿ ವೇಣೂರು ಧನಂಜಯ್ ಕುಮಾರ್ ತುಂಬು ಭರವಸೆಯಿಂದ ಹೇಳಿದ್ದಾರೆ.
ಕೆಜೆಪಿ ಅಧಿಕಾರಕ್ಕೆ ಬಂದರೆ...
ಕರ್ನಾಟಕ ಜನತಾ ಪಕ್ಷ ಅಧಿಕಾರಕ್ಕೆ ಬಂದರೆ ರಾಜ್ಯವನ್ನು ಅಭಿವೃದ್ಧಿ ಪಥದತ್ತ ಕೊಂಡೊಯ್ದು ಮಾದರಿ ರಾಜ್ಯವನ್ನಾಗಿ ರೂಪಿಸಲಾಗುವುದು ಎಂದು ಕೆಜೆಪಿ ಅಧ್ಯಕ್ಷ ಬಿಎಸ್ ಯಡಿಯೂರಪ್ಪ ಹೇಳಿದರು.
ಪಟ್ಟಣದ ಹೊರವಲಯದ ಶ್ರೀ ರಂಗನಾಥ ಸ್ವಾಮಿ ವಿದ್ಯಾಸಂಸ್ಥೆ ಆವರಣದಲ್ಲಿ ಮಂಗಳವಾರ ಏರ್ಪಡಿಸಿದ್ದ ಕೆಜೆಪಿ ಪಕ್ಷದ ಕಾರ್ಯಕರ್ತರ ಸಭೆಯಲ್ಲಿ ಅವರು ಮಾತನಾಡಿದರು.
ಬಸವಣ್ಣನ ತತ್ವ ಚಿಂತನೆ ಆಧಾರದಲ್ಲಿ ಸರ್ವರಿಗೂ ಸಮಪಾಲು-ಸಮಬಾಳು ಎಂಬ ನೀಡುವ ಉದ್ದೇಶದಿಂದ ಪಕ್ಷ ಕಟ್ಟಲಾಗಿದೆ. ಮತ್ತೆ ಯಡಿಯೂರಪ್ಪಗೆ ಆಶೀರ್ವಾದ ಮಾಡಿದರೆ ಎರಡು ಲಕ್ಷ ಕೋಟಿ ರೂ ಬಜೆಟ್ ಮಂಡಿಸಲಾಗುವುದು ಎಂದು ಭರವಸೆ ನೀಡಿದರು.
ಅಹಿಂದ ಮುಖಂಡ ಮುಕುಡಪ್ಪ, ಮಾಜಿ ಶಾಸಕ ಬಿಪಿ ಹರೀಶ್, ಕೆಪಿಎಂ ಶಿವಲಿಂಗಯ್ಯ, ರಾಜ್ಯ ಉಪಾಧ್ಯಕ್ಷ ಚಂದ್ರಾನಾಯ್ಕ, ಜಿಲ್ಲಾ ಸಂಚಾಲಕ ಜಗದೀಶ್, ಎಸ್‌ಎ ಸುಬಾನ್ ಮುಂತಾದರು ಉಪಸ್ಥಿತರಿದ್ದರು.
ನೀವೇ ಆಗಿರಿ ಕರ್ನಾಟಕದ ಗುರು | ಮತ ಹಾಕ್ತೀನಂತ ಪ್ರಮಾಣ ಮಾಡಿ












Click it and Unblock the Notifications