ಬಿಎಸ್ವೈ ಇನ್ನೆಂದಿಗೂ ಬಿಜೆಪಿಗೆ ಮರಳುವುದಿಲ್ಲ: ಶೋಭಾ

Karnataka Assembly elections- BS Yeddyurappa wont return to BJP Shobha Karandlaje
ಬಿಜಾಪುರ , ಮಾರ್ಚ್ 20: ರಾಜ್ಯದ ಸರ್ವರೋಗಕ್ಕೂ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಮದ್ದು ಎಂದು ಮೊನ್ನೆ ಇಂಜೆಕ್ಷನ್ ನೀಡಿದ್ದ ಶೋಭಾ ಕರಂದ್ಲಾಜೆ ಅವರು ಬಿಎಸ್ವೈ ಇನ್ನೆಂದಿಗೂ ಬಿಜೆಪಿಗೆ ಮರಳುವುದಿಲ್ಲ ಎಂದು ಮಾಜಿ ಸಚಿವೆ ಶೋಭಾ ಕರಂದ್ಲಾಜೆ ಸ್ಪಷ್ಟಪಡಿಸಿದ್ದಾರೆ.

ಯಡಿಯೂರಪ್ಪ ಮತ್ತು ಕರ್ನಾಟಕ ಜನತಾ ಪಕ್ಷದ ಹೈಕಮಾಂಡ್ ಎನಿಸಿರುವ ಮಾಜಿ ಇಂಧನ ಸಚಿವೆ ಶೋಭಾ ಕರಂದ್ಲಾಜೆ ಅವರು ನಮ್ಮ ನಾಯಕ ಯಡಿಯೂರಪ್ಪ ಅವರು ಬಿಜೆಪಿ ತೊರೆದು, KJP ಕಟ್ಟಿದ್ದು ಬಹುದೂರ ಬಂದಾಗಿದೆ. ಇಂತಹ ಸಂದರ್ಭದಲ್ಲಿ ಅವರು ಮತ್ತೆ ಬಿಜೆಪಿಗೆ ಹಿಂದಿರುಗುತ್ತಾರೆ ಎಂಬುದು ಕೇವಲ ಕಲ್ಪನೆ. ಅವರು ಮರಳಿ ಬಿಜೆಪಿ ಸೇರುವ ಪ್ರಶ್ನೆಯೇ ಇಲ್ಲ' ಎಂದು ಶೋಭಾ ಪ್ರಮಾಣಬದ್ಧವಾಗಿ ಹೇಳಿದ್ದಾರೆ.

ಚುನಾವಣೆ ಘೋಷಣೆಯಾಗುತ್ತಿದಂತೆ ಬಿಜೆಪಿ ಆಟ ಬಂದ್:
ಅಸಲಿಗೆ ಜಗದೀಶ್ ಶೆಟ್ಟರ್ ಅವರನ್ನು ಸಿಎಂ ಮಾಡಿದ್ದೇ ಯಡಿಯೂರಪ್ಪ. ಹೀಗಾಗಿ ಸರ್ಕಾರ ಉರುಳಿಸಿದ ಅಪವಾದ ನಮ್ಮ ಮೇಲೆ ಬರಬಾರದು ಎಂಬ ಕಾರಣಕ್ಕೆ ಬಿಎಸ್‌ವೈ ಬೆಂಬಲಿಗ ಸಚಿವರು- ಶಾಸಕರು ಇನ್ನೂ ರಾಜೀನಾಮೆ ನೀಡಿಲ್ಲ.

ವಿಜಾಪುರ ಜಿಲ್ಲೆಯ ವಿಠ್ಠಲ ಕಟಕಧೋಂಡ ಅವರು ತಮ್ಮ ಶಾಸಕ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ ಪತ್ರವನ್ನು ವಿಧಾನಸಭಾಧ್ಯಕ್ಷರಿಗೆ ಸಲ್ಲಿಸಿದರೂ ಅಂಗೀಕಾರಕ್ಕೆ ಆಗ್ರಹಿಸದೇ ಇರುವುದು ಶೆಟ್ಟರ ಸರ್ಕಾರ ಉಳಿಯಲಿ ಎಂಬ ಕಾರಣಕ್ಕೆ. ವಿಧಾನಸಭೆ ಚುನಾವಣೆ ದಿನಾಂಕ ಘೋಷಣೆ ಆದ ಬಳಿಕ ಬಿಜೆಪಿ ಗತಿ ಏನು ಎಂಬುದು ಸ್ಪಷ್ಟವಾಗಲಿದೆ ಎಂದು ಬಿಜೆಪಿಯ ಭವಿಷ್ಯವನ್ನು ಬಿಡಿಸಿಟ್ಟರು.

ಇದೇ ವೇಳೆ ಸಿಂದಗಿಯ ಅನುಗ್ರಹ ಕಲ್ಯಾಣ ಮಂಟಪದಲ್ಲಿ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಶೋಭಾ ಕರಂದ್ಲಾಜೆ 'ರಾಜ್ಯದಲ್ಲಿ ಬಿಜೆಪಿಯನ್ನು ಕಟ್ಟಿ ಬೆಳೆಸಿದ, ರಾಜ್ಯದಲ್ಲಿ ಪಕ್ಷವನ್ನು ಅಧಿಕಾರಕ್ಕೆ ತಂದ ಯಡಿಯೂರಪ್ಪನವರ ಬೆನ್ನಿಗೆ ಬಿಜೆಪಿ ಮುಖಂಡರೇ ಚೂರಿ ಹಾಕಿದರು' ಎಂದು ಗುಟುರು ಹಾಕಿದರು.

ಯಡಿಯೂರಪ್ಪ ಮತ್ತೆ ಮುಖ್ಯಮಂತ್ರಿ: 'ಕಾರ್ಯಕರ್ತರು ಮಾಜಿ ಸಿಎಂ ಯಡಿಯೂರಪ್ಪನವರ ಸಾಧನೆಯನ್ನು ಜನತೆಗೆ ಮನವರಿಕೆ ಮಾಡಿಕೊಟ್ಟು, ಕೆಜೆಪಿ ಅಭ್ಯರ್ಥಿಗಳ ಗೆಲುವಿಗೆ ಶ್ರಮಿಸಬೇಕು. ತನ್ಮೂಲಕ ಯಡಿಯೂರಪ್ಪನವರನ್ನು ಮತ್ತೆ ಮುಖ್ಯಮಂತ್ರಿಯನ್ನಾಗಿ ಮಾಡಬೇಕು' ಎಂದೂ ಶೋಭಾ ಕೋರಿದರು.

ನೀವೇ ಆಗಿರಿ ಕರ್ನಾಟಕದ ಗುರು | ಮತ ಹಾಕ್ತೀನಂತ ಪ್ರಮಾಣ ಮಾಡಿ

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+